ಟೋಕಿಯೊ:ಜಪಾನ್‌ ಎಂದರೆ ಅಲ್ಲಿ ಹಲವಾರು ಹೊಸಹೊಸ ಬಗೆಯ ಸಂಶೋಧನೆಗಳು ಇದ್ದೇ ಇರುತ್ತವೆ. ಇಲೆಕ್ಟ್ರಾನಿಕ್ಸ್‌ ಸೇರಿದಂತೆ ಹಲವಾರು ತಂತ್ರಜ್ಞಾನಗಳಲ್ಲಿ ಜಪಾನ್‌ ಹೆಸರುವಾಸಿಯಾಗಿದೆ.
ಅದೇ ರೀತಿ ಈಗ ವಿಶಿಷ್ಟ ಎನ್ನುವ ಶೌಚಾಲಯದ ನಿರ್ಮಾಣ ಮಾಡುವ ಮೂಲಕ ಜಪಾನ್‌ ಮತ್ತೊಮ್ಮೆ ಸುದ್ದಿ ಮಾಡಿದೆ. ಜಪಾನ್‌ನ ರಾಜಧಾನಿ ಟೋಕಿಯೊದಲ್ಲಿನ ಉದ್ಯಾನಗಳಲ್ಲಿ ಪಾರದರ್ಶಕ ಸಾರ್ವಜನಿಕ ಶೌಚಾಲಯಗಳನ್ನು ಸ್ಥಾಪಿಸಲಾಗಿದೆ.
ಇದನ್ನು ಓದಿದ ತಕ್ಷಣ ಥೂ… ಎಂದು ಎನಿಸುವುದು ಸಹಜ. ಶೌಚಾಲಯ ಪಾರದರ್ಶಕ ಮಾಡುವುದು ಎಂದರೆ ಅದೇನು ತಲೆಯಪ್ಪಾ ಎನಿಸಬಹುದು. ಆದರೆ ಇಲ್ಲೇ ಇರುವುದು ಇಂಟರೆಸ್ಟಿಂಗ್‌ ವಿಷಯ.
ಶೌಚಾಲಯ ಸ್ವಚ್ಛವಾಗಿದೆಯೇ ಮತ್ತು ಒಳಗೆ ಯಾರೂ ಇಲ್ಲ ಎಂಬುದನ್ನು ಜನರು ಸುಲಭವಾಗಿ ತಿಳಿದುಕೊಳ್ಳಬೇಕು ಎಂಬ ಕಾರಣಕ್ಕೆ ಇಂಥದ್ದೊಂದು ಶೌಚಾಲಯವನ್ನು ಸ್ಥಾಪಿಸಲಾಗಿದೆ.ಅಂದರೆ ಒಳಗೆ ಯಾರೂ ಇಲ್ಲದ ವೇಳೆ ಶೌಚಾಲಯ ಕ್ಲೀನ್‌ ಆಗಿದೆಯೇ ಎಂಬುದನ್ನು ಹೊರಗಿನಿಂದ ತಿಳಿದುಕೊಳ್ಳಬಹುದು. ಆದರೆ ಅಚ್ಚರಿಯ ವಿಷಯ ಎಂದರೆ ಒಳಗೆ ಜನರು ಇರುವಾಗ ನೋಡಲು ಸಾಧ್ಯವಾಗುವುದಿಲ್ಲ. ಶೌಚಾಲಯದ ನಿರ್ಮಾಣದಲ್ಲಿ ಸ್ಮಾರ್ಟ್‌ ಗ್ಲಾಸ್‌ ಅನ್ನು ಬಳಸಲಾಗಿದ್ದು, ಜನರು ಕಾಣಿಸದೇ ಇರುವಂತೆ ನಿರ್ಮಿಸಲಾಗಿದೆ.
ಇದನ್ನೂ ಓದಿ:ಬೃಹತ್‌ ದಾಳಿಗೆ ಸ್ಕೆಚ್‌ ಹಾಕುತ್ತಿದ್ದನೇ ಈತ? ಬ್ಯಾಗ್‌ನಲ್ಲಿದ್ದ ಕೋಡ್‌ವರ್ಡ್ಸ್‌ ಏನು ಹೇಳುತ್ತಿವೆ?
ಅಂದ ಹಾಗೆ ಇದನ್ನು ನಿರ್ಮಾಣ ಮಾಡಿರುವವರು ವಿಶ್ವವಿಖ್ಯಾತ ವಾಸ್ತುಶಿಲ್ಪಿ ಶಿಗೇರು ಬೆನ್‌. ಇವರು ಮರುಬಳಕೆಯ ವಸ್ತುಗಳಲ್ಲಿ ನಿರ್ಮಾಣ ಕಾರ್ಯವನ್ನು ಮಾಡುವುದರಲ್ಲಿ ಪ್ರವೀಣರು.‘ಯಾವುದೇ ವ್ಯಕ್ತಿಯು ಶೌಚಾಲಯದೊಳಗೆ ಹೋಗಿ ಬಾಗಿಲು ಲಾಕ್‌ ಮಾಡಿದಾಗ, ಪಾರದರ್ಶಕವಾಗಿರುವ ಶೌಚಾಲಯದ ಗೋಡೆಯು ಬದಲಾಗುತ್ತದೆ. ಆದರೆ ಈ ವ್ಯವಸ್ಥೆಯಲ್ಲಿ ಒಳಗೆ ಕುಳಿತ ವ್ಯಕ್ತಿಯು ಹೊರ ಭಾಗದಲ್ಲಿ ನಡೆಯುತ್ತಿರುವ ಚಟುವಟಿಕೆ ಮತ್ತು ಜನರ ಚಲನವಲನಗಳನ್ನು ನೋಡಬಹುದು. ಆದರೆ ಹೊರಗಿನ ವ್ಯಕ್ತಿಗೆ ಒಳಗೆ ನೋಡಲು ಸಾಧ್ಯವಾಗುವುದಿಲ್ಲ. ಇದು ಜಪಾನ್‌ ಟಾಯ್ಲೆಟ್‌ ಯೋಜನೆಯ ವಿಶೇಷ ಭಾಗವಾಗಿದೆ’ ಎಂದಿದ್ದಾರೆ ಶಿಗೇರು.
ಯಾರಾದರೂ ಸಾರ್ವಜನಿಕ ರೆಸ್ಟ್‌ ರೂಂಗೆ ಹೋದಾಗ ಮಾಡುವ ಎರಡು ಮುಖ್ಯ ವಿಷಯಗಳ ನೋಡುತ್ತಾರೆ. ಮೊದಲನೆಯದಾಗಿ ಅದು ಸ್ವಚ್ಛವಾಗಿದೆಯೇ? ಎರಡನೆಯದಾಗಿ ಯಾರಾದರೂ ಒಳಗೆ ಇದ್ದಾರೆಯೇ ಎಂಬುದಾಗಿ ಜನ ತಿಳಿದುಕೊಳ್ಳಲು ಬಯಸುತ್ತಾರೆ. ಈ ಹಿನ್ನೆಲೆಯಲ್ಲಿ ಜಪಾನ್‌ ಈ ಹೊಸ ಮಾದರಿಯ ಟಾಯ್ಲೆಟ್‌ ಅನ್ನು ಪರಿಚಯಿಸಿದೆ.
ಚೆನ್ನೈ ಯುವತಿ ಲಂಡನ್‌ನಲ್ಲಿ ಅಪಹರಣ- ಲವ್‌ ಜಿಹಾದ್‌ ಪ್ರಕರಣಕ್ಕೆ ಜಾಕೀರ್‌ ನಾಯ್ಕ್‌ ಲಿಂಕ್‌?

ಅಂತ್ಯಕ್ರಿಯೆ ವೇಳೆ ಪೆಟ್ಟಿಗೆಯಲ್ಲಿದ್ದ ಯುವತಿಯ ‘ಶವ’ ಅಲುಗಾಡಿ ಮೇಲೆದ್ದು ಬಂತು!

ಎರಡನೇ ಪತ್ನಿ, ಮಕ್ಕಳಿಗೆ ಆಸ್ತಿ ಸಿಗುತ್ತದೆಯೇ? ಬಾಂಬೆ ಹೈಕೋರ್ಟ್‌ ಹೇಳಿರುವುದೇನು?

ಟಿಪ್ಪುವನ್ನು ಹಾಡಿ ಹೊಗಳಿದ ಶಾಸಕ ವಿಶ್ವನಾಥ್‌, ಸಚಿವ ಸ್ಥಾನದ ಬಗ್ಗೆ ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − thirteen =
Remember me
