ನವದೆಹಲಿ:ಕಾಂಗ್ರೆಸ್‌ನಿಂದ ನಿರ್ಗಮಿಸಿ ಸುಮಾರು ಒಂದು ತಿಂಗಳ ನಂತರ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಕೊನೆಗೂ ತಮ್ಮ ಹೊಸ ಪಕ್ಷಕ್ಕೆ ಹೆಸರು ಘೋಷಿಸಿದ್ದಾರೆ. ಹೊಸ ಪಕ್ಷಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಎಂದು ಅವರು ಹೆಸರಿಟ್ಟಿದ್ದಾರೆ.
‘ನಮ್ಮ ಪಕ್ಷಕ್ಕೆ ವಯಸ್ಸಿನ ಮಿತಿಯಿಲ್ಲ’ ಎಂದು ಒತ್ತಿ ಹೇಳಿದ ಆಜಾದ್ ‘ಯುವಕರು ಮತ್ತು ಹಿರಿಯರು ಪಕ್ಷದಲ್ಲಿ ಸಹಬಾಳ್ವೆ ನಡೆಸುತ್ತಾರೆ’ ಎಂದು ಹೇಳಿದ್ದಾರೆ. ಅಲ್ಲದೇ ಈ ಹೊಸ ಪಕ್ಷದ ಧ್ವಜವನ್ನೂ ಅವರು ಅನಾವರಣಗೊಳಿಸಿದ್ದಾರೆ. ಸಾಸಿವೆ, ಬಿಳಿ ಮತ್ತು ನೀಲಿ ಎಂಬ ಮೂರು ಬಣ್ಣಗಳನ್ನು ಹೊಂದಿರುವ ಪಕ್ಷದ ಧ್ವಜವನ್ನು ಅಜಾದ್ ಬಿಡುಗಡೆ ಮಾಡಿದ್ದಾರೆ. ಸಾಸಿವೆ ಬಣ್ಣವು ಸೃಜನಶೀಲತೆ ಮತ್ತು ವೈವಿಧ್ಯತೆಯಲ್ಲಿ ಏಕತೆಯನ್ನು ಸೂಚಿಸುತ್ತದೆ, ಬಿಳಿ ಶಾಂತಿಯನ್ನು ಸೂಚಿಸುತ್ತದೆ ಮತ್ತು ನೀಲಿ ಸ್ವಾತಂತ್ರ್ಯ, ಮುಕ್ತ ಸ್ಥಳ, ಕಲ್ಪನೆ ಮತ್ತು ಸಮುದ್ರದ ಆಳದಿಂದ ಆಕಾಶದ ಎತ್ತರದವರೆಗಿನ ಮಿತಿಗಳನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.
ಕಾಂಗ್ರೆಸ್ ಜತೆಗಿನ ದಶಕಗಳ ಕಾಲದ ಒಡನಾಟವನ್ನು ಆಗಸ್ಟ್ 26ರಂದು ಕೊನೆಗೊಳಿಸಿ ಗುಲಾಂ ಅವರು ರಾಜೀನಾಮೆ ನೀಡಿದ್ದರು. ಕಾಂಗ್ರೆಸ್ ತೊರೆದು ಹೊಸ ಪಕ್ಷದ ಮೂಲಕ ಜಮ್ಮು ಕಾಶ್ಮೀರದಲ್ಲಿ ಚುನಾವಣೆಗೆ ಸ್ಪರ್ಧೆ ನಡೆಸುವುದಾಗಿ ಅವರು ಈ ಮುನ್ನವೇ ಘೋಷಣೆ ಮಾಡಿದ್ದರು. ಅವರ ಹೊಸ ಪಕ್ಷಕ್ಕಾಗಿ ಸುಮಾರು 1,500 ಹೆಸರುಗಳನ್ನು ಉರ್ದು, ಸಂಸ್ಕೃತದಲ್ಲಿ ಕಳುಹಿಸಲಾಗಿತ್ತು. ಕೊನೆಗೆ ಅವರು ಡೆಮಾಕ್ರಟಿಕ್ ಆಜಾದ್ ಪಾರ್ಟಿ ಎಂದು ಹೆಸರು ಇರಿಸಿದ್ದಾರೆ. ಸ್ವತಂತ್ರ ಆಲೋಚನೆ ಮತ್ತು ಸಿದ್ಧಾಂತಕ್ಕೆ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಒತ್ತು ನೀಡಲಿದೆ ಎಂದು ಅವರು ಹೇಳಿದ್ದಾರೆ.
ಡೆಮಾಕ್ರಟಿಕ್ ಆಜಾದ್ ಪಾರ್ಟಿಯು ತನ್ನದೇ ಆದ ಚಿಂತನೆಯನ್ನು ಹೊಂದಿರುತ್ತದೆ, ಇದು ಯಾರ ಪ್ರಭಾವಕ್ಕೂ ಒಳಗಾಗುವುದಿಲ್ಲ. ಆಜಾದ್ ಎಂದರೆ ಸ್ವತಂತ್ರ ಎಂದರ್ಥ. ಕೆಳಹಂತದಿಂದ ಪಕ್ಷವು ಚುನಾವಣೆ ಅನ್ನು ಎದುರಿಸುತ್ತದೆ. ಒಂದು ಕೈಯಲ್ಲಿ ಯಾವುದೇ ಅಧಿಕಾರವಿರುವುದಿಲ್ಲ ಮತ್ತು ನಮ್ಮ ಸಂವಿಧಾನವು ಸಂಪೂರ್ಣ ಪ್ರಜಾಪ್ರಭುತ್ವದ ಆಧಾರದ ಮೇಲೆ ನಿಂತಿದೆ. ಜಮ್ಮು ಮತ್ತು ಕಾಶ್ಮೀರದ ಜನರು ಮತ್ತು ಮಾಧ್ಯಮದವರು ನಮ್ಮ ಪಕ್ಷದ ಹೆಸರನ್ನು ತಿಳಿಯಲು ಉತ್ಸುಕರಾಗಿದ್ದರು ಎಂದು ಆಜಾದ್ ತಿಳಿಸಿದರು.
ಪ್ರಜಾಪ್ರಭುತ್ವದ ನಿಯಮದಂತೆ ಕಾಂಗ್ರೆಸ್‌ ಪಕ್ಷದಲ್ಲಿ ಆಂತರಿಕ ಚುನಾವಣೆ ನಡೆಯದಿದ್ದರೆ, ಕಾಂಗ್ರೆಸ್‌ ಪಕ್ಷ ಇನ್ನೂ 50 ವರ್ಷಗಳ ಕಾಲ ವಿರೋಧ ಪಕ್ಷದ ಸ್ಥಾನದಲ್ಲೇ ಇರಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದರು. ಈಗ ಗುಲಾಂ ಅವರ ಮುಂದಿನ ವೈರಿ ಯಾವ ಪಕ್ಷ, ಅವರ ಮುಂದಿನ ನಡೆ ಎನ್ನುವುದೇ ಕುತೂಹಲಕಾರಿಯಾಗಿದೆ.(ಏಜೆನ್ಸೀಸ್​)
ಮೂರು ಷರತ್ತಿನಿಂದ ಪೈಲಟ್​ರನ್ನು ಕಟ್ಟು ಹಾಕಿದ ಗೆಹ್ಲೋಟ್​: ಖುರ್ಚಿ ಏರುವ ಮುನ್ನವೇ ರಂಗೇರಿದ ಫೈಟಿಂಗ್!
ಮಗುವಿನ ಬಣ್ಣ ಕಪ್ಪು ಎಂದು ಪತ್ನಿಯನ್ನೇ ಮುಗಿಸಿದ ಪಾಪಿ ಗಂಡ! ಎರಡೂವರೆ ವರ್ಷದ ಪುಟಾಣಿಯಿಂದ ರಹಸ್ಯ ಬಯಲು
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:11 + thirteen =
Remember me
