ಹೈದರಾಬಾದ್:ಹೊಸದಾಗಿ ಮದುವೆಯಾಗಿ ಹೋಗುವ ಮಕ್ಕಳಿಗೆ ಪಾಲಕರು ತಮ್ಮ ಶಕ್ತ್ಯಾನುಸಾರ ಒಂದಿಷ್ಟು ಹಣ, ಒಡವೆಗಳನ್ನು ನೀಡುವುದು ಮಾಮೂಲಿ. ಆದರೆ ಇಲ್ಲೊಬ್ಬ ಅಪ್ಪ, ತಮ್ಮ ಮಗಳಿಗೆ ನೀಡಿರುವ ಉಡುಗೊರೆ ಕೇಳಿದರೆ ಹುಬ್ಬೇರಿಸುವುದು ಗ್ಯಾರೆಂಟಿ!
ಹೀಗೆ ವಿಭಿನ್ನ ಉಡುಗೊರೆ ನೀಡಿದ ಕಾರಣಕ್ಕಾಗಿಯೇ ಈ ಅಪ್ಪ ಭಾರಿ ಫೇಮಸ್‌ ಆಗಿದ್ದಾರೆ. ಜಾಲತಾಣದ ತುಂಬ ಸುದ್ದಿ ಮಾಡುತ್ತಿರುವ ಅಪ್ಪನ ಹೆಸರು ಆಂಧ್ರಪ್ರದೇಶದ ಬಟುಲಾ ಬಲರಾಮ ಕೃಷ್ಣ. ರಾಜಮಂಡ್ರಿಯ ಉದ್ಯಮಿಯಾಗಿರುವ ಇವರು, ಮಗಳಿಗೆ ಕೊಟ್ಟಿರೋ ಗಿಫ್ಟ್‌ಗಳು ಏನು ಗೊತ್ತಾ?
1000 ಕೆ.ಜಿ ಮೀನು, 1000 ಕೆ.ಜಿ ತರಕಾರಿ, 250 ಕೆ.ಜಿ ಸಿಗಡಿ, 250 ಕೆಜಿ ಕಿರಾಣಿ ಸಾಮಗ್ರಿ, 250 ಜಾರ್ ಉಪ್ಪಿನಕಾಯಿ, 50 ಕೆ.ಜಿ ಚಿಕನ್, 10 ಕುರಿಗಳನ್ನು ಮತ್ತು 250 ಕೆ.ಜಿ ಸಿಹಿ ತಿಂಡಿ ಜತೆಗೆ ಇನ್ನೂ ಏನೇನೋ!ಆಷಾಢ ಮಾಸದ ಸಮಯದಲ್ಲಿ ಮದುಮಗಳಿಗೆ ಗಿಫ್ಟ್‌ ಕೊಡುವ ಪದ್ಧತಿಯಿದ್ದು, ಸ್ವಲ್ಪ ಡಿಫರೆಂಟ್‌ ಆಗಿರಲಿ ಎಂದು ಇದನ್ನು ಕೊಟ್ಟಿರುವುದಾಗಿ ಬಲರಾಮ ಕೃಷ್ಣ ಹೇಳುತ್ತಾರೆ. ಇವುಗಳ ಜತೆಗೆ ಹಣ, ಕಲಾಕೃತಿ, ಆಭರಣ, ಮನೆ, ಕಾರು ನೀಡಲಾಗಿದೆ! ರಾಮಕೃಷ್ಣ ಅವರ ಮಗಳು ಪ್ರತ್ಯೂಷಾ ಹಾಗೂ ಆಕೆಯ ಪತಿ ಪವನ್ ಕುಮಾರ್ ಟ್ರಕ್‍ನಲ್ಲಿ ಬಂದಿರುವ ಈ ಉಡುಗೊರೆ ನೋಡಿ ಶಾಕ್‌ ಆಗಿದ್ದಾರೆ. ಸಿರಿವಂತಿಕೆಯನ್ನು ತೋರಿಸಲು ಇಷ್ಟೆಲ್ಲಾ ಕಳುಹಿಸಿ ಪ್ರಚಾರವನ್ನೇನೋ ಗಿಟ್ಟಿಸಿಕೊಂಡರು ಸರಿ. ಆದರೆ ಈ ಪರಿಯ ಮಾಂಸವನ್ನು ತಿನ್ನುವವರು ಯಾರು ಎಂಬುದೇ ಈಗಿರುವ ಪ್ರಶ್ನೆ! ಆದ್ರೆ ಸಿಕ್ಕರೆ ಇಂಥ ಮಾವ ಸಿಗಬೇಕು ಅಂತಿದ್ದಾರೆ ಪುರುಷರು!
ಎರಡು ದಿನಗಳ ಮಟ್ಟಿಗೆ ಅತ್ತೆಗೆ ಬಾಯ್​ಫ್ರೆಂಡ್​ ಬೇಕು: 75 ಸಾವಿರ ರೂ. ಸಂಬಳ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 10 =
Remember me
