ಗುಂಟೂರು (ಆಂಧ್ರಪ್ರದೇಶ):ತಾಯಿ ಪರಪುರುಷನ ಜತೆ ಅಕ್ರಮ ಸಂಬಂಧ ಹೊಂದಿರುವುದನ್ನು ನೋಡಿ ಸಹಿಸಿಕೊಳ್ಳಲು ಆಗದ ಮಗಳೊಬ್ಬಳು ತಾಯಿಯ ಪ್ರೇಮಿಯ ಮರ್ಮಾಂಗವನ್ನೇ ಕಟ್​ ಮಾಡಿರುವ ಘಟನೆ ಆಂಧ್ರಪ್ರದೇಶದ ಬಪಟ್ಲಾ ಜಿಲ್ಲೆಯ ತುಮ್ಮಲಪಾಲಂನಲ್ಲಿ ನಡೆದಿದೆ.
ರಾಮಚಂದ್ರ ರೆಡ್ಡಿ ಎಂಬಾತ ತನ್ನ ಮರ್ಮಾಂಗವನ್ನು ಕಳೆದುಕೊಂಡು ಹಿಂಸೆ ಅನುಭವಿಸುವಂತಾಗಿದೆ. ರೆಡ್ಡಿ ಎರಡು ವರ್ಷಗಳ ಹಿಂದೆ ಗುಂಟೂರು ಜಿಲ್ಲೆ ತೆನಾಲಿಯಲ್ಲಿ ತಂಗಿದ್ದ ವೇಳೆ ಇಲ್ಲಿಯಬ ಐತಾನಗರದ ಮಹಿಳೆಯ ಪರಿಚಯವಾಗಿತ್ತು. ರೈಲ್ವೆ ನಿಲ್ದಾಣದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಈತನಿಗೆ ಮಹಿಳೆಯ ಪರಿಚಯವಾಗಿತ್ತು. ಪರಿಚಯವು ಪ್ರೇಮಕ್ಕೆ ತಿರುಗಿ ಇಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿತ್ತು. ಇಬ್ಬರೂ ಮದ್ಯ ಸೇವಿಸುತ್ತಿದ್ದರು ಎನ್ನಲಾಗಿದೆ.
ಅದಾಗಲೇ ಮದುವೆಯಾಗಿ ಮಗಳನ್ನು ಹೊಂದಿದ್ದಳು ಮಹಿಳೆ. ಮಗಳಿಗೆ ತನ್ನ ತಾಯಿ ಈ ರೀತಿ ಅಕ್ರಮ ಸಂಬಂಧ ಹೊಂದಿರುವುದು ಇಷ್ಟವಿರಲಿಲ್ಲ. ಪದೇ ಪದೇ ಈ ವಿಷಯವಾಗಿ ತಾಯಿ-ಮಗಳ ಜತೆ ಜಗಳವಾಗುತ್ತಿತ್ತು. ಆದರೆ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ.
ನಿನ್ನೆ ರಾತ್ರಿ ಮಹಿಳೆ ಮತ್ತು ಪ್ರಿಯಕರ ಗಾಢ ನಿದ್ದೆಯಲ್ಲಿ ಇದ್ದಾಗ ಮಗಳು ನಿಧಾನವಾಗಿ ಹೋಗಿ ಆತನ ಮರ್ಮಾಂಗವನ್ನು ಕತ್ತರಿಸಿದ್ದಾಳೆ.ನೋವಿನಿಂದ ಚೀರಿಕೊಂಡ ರೆಡ್ಡಿಯನ್ನು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯ ಇದ್ದುದರಿಂದ ಬೇರೊಂದು ಕಡೆ ಸ್ಥಳಾಂತರಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸಂಚಲನ ಮೂಡಿಸಿರೋ ರಾಹುಲ್​- ನೇಪಾಳಿ ಬೆಡಗಿ ವಿಡಿಯೋ: ನಿಮ್​ ಕೆಲ್ಸ ಮೊದ್ಲು ನೋಡ್ಕೊಳಿ ಎಂದ ಕಾಂಗ್ರೆಸ್

ಮನೆ ಮಾರಿ 50 ಲಕ್ಷ ರೂ. ಕೊಟ್ರು… ಕೆಲ್ಸನೂ ಹೋಯ್ತು- ದುಡ್ಡೂ ಹೋಯ್ತು.. ಅರೆಸ್ಟೂ ಆದ್ರು!

https://www.vijayavani.net/s-property-matter-about-property-exchange-nd/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + fifteen =
Remember me
