ರಂಗಾರೆಡ್ಡಿ (ತೆಲಂಗಾಣ) :ತಾಯಿ ತೀರಿಕೊಂಡ ಮೇಲೆ ಕುಡುಕನಾದ ಅಪ್ಪ ದಿನನಿತ್ಯವೂ ನೀಡುತ್ತಿರುವ ಕಿರುಕುಳವನ್ನು ಸಹಿಸಲಾಗದೇ ಎಸ್​ಎಸ್​ಎಲ್​ಸಿ ಓದುತ್ತಿರುವ ಬಾಲಕಿ ಮನಿಷಾ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನಂದಿಗಾಮ ವಲಯದ ಬುಗ್ಗೊನಿಗುಡ ಗ್ರಾಮದಲ್ಲಿ ನಡೆದಿದೆ.
“ನಾನು ನನ್ನ ತಂದೆಯನ್ನು ದ್ವೇಷಿಸುತ್ತೇನೆ. ನಾನು ಅವನನ್ನು ಕೊಲ್ಲಬೇಕು, ಆದರೆ ಅದು ಸಾಧ್ಯವಿಲ್ಲ, ಅದಕ್ಕಾಗಿ ನಾನು ಸಾಯುತ್ತಿದ್ದೇನೆ. ನಮ್ಮ ತಂದೆ ಒಬ್ಬ ಮೂರ್ಖ, ಪ್ರತಿದಿನ ಮದ್ಯ ಸೇವಿಸುತ್ತಾನೆ. ಅವನ ಕಿರುಕುಳದಿಂದ ಬೇಸತ್ತು ಹೋಗಿದ್ದೇನೆ. ಅಮ್ಮ ಬದುಕಿದ್ದಾಗ ಆತ ತುಂಬಾ ಒಳ್ಳೆಯವನಾಗಿದ್ದ. ಆದರೆ ಅಮ್ಮ ಸತ್ತ ಮೇಲೆ ಕುಡುಕನಾದ. ಅವನನ್ನು ಅಪ್ಪಾ ಎಂದು ಕರೆಯಲು ಹೇಸಿಗೆಯಾಗುತ್ತದೆ ಎಂದು ಬಾಲಕಿ ಡೆತ್​ನೋಟ್​ನಲ್ಲಿ ಬರೆದಿದ್ದಾಳೆ.
“ನಾನು ಮೂರು ಬಾರಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದೆ. ಆದರೆ, ಬದುಕುಳಿದಿದ್ದೇನೆ. ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ನಾನು ಸತ್ತಿರುವುದು ಎಲ್ಲರಿಗೂ ತಿಳಿಯುತ್ತದೆ. ನನ್ನ ಸಾವಿಗೆ ಕಾಯುತ್ತಿದ್ದೇನೆ ಎಂದು ಮನಿಷಾ ಬರೆದಿದ್ದಾಳೆ.
ಈಕೆಯ ತಾಯಿ ಕಳೆದ ವರ್ಷ ಮೃತಪಟ್ಟಿದ್ದರು. ಅವರು ಮೃತಪಟ್ಟ ಬಳಿಕ ನರಸಿಂಹುಲು ಕುಡಿತದ ಚಟಕ್ಕೆ ಬಿದ್ದು ಪ್ರತಿದಿನವೂ ಮಕ್ಕಳ ಜತೆ ಜಗಳವಾಡುತ್ತಿದ್ದ ಎನ್ನಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕಾರು ಚಾಲಕನ ಕೊಲೆ ಕೇಸ್​ಗೆ ಭಾರಿ ಟ್ವಿಸ್ಟ್: ನಾನೇ ಕೊಲೆಗಾರ ಎಂದು ಒಪ್ಪಿಕೊಂಡ ಶಾಸಕ!

ಕನ್ನಡದ ಖ್ಯಾತ ನಟಿಯೊಬ್ಬಳು ಮಂಚಕ್ಕೆ ಕರೆದಿದ್ಲು: ಶಾಕಿಂಗ್​ ಹೇಳಿಕೆ ನೀಡಿದ ನಿರ್ದೇಶಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + 15 =
Remember me
