ಚೆನ್ನೈ:ಸುಮಾರು 17 ವರ್ಷದ ಬಾಲಕಿಯೊಬ್ಬಳು ತಮ್ಮ ಮನೆಯ ಮೂರು ನಾಯಿಮರಿಗಳೊಂದಿಗೆ ವಾಕಿಂಗ್​ಗೆಂದು ಹೋದಾಕೆ ನಾಲ್ಕು ದಿನಗಳಾದರೂ ಪತ್ತೆಯಾಗದೇ ಪೊಲೀಸರು ಕಂಗಾಲಾಗಿರುವ ಘಟನೆ ತಮಿಳುನಾಡಿನ ಹಯಾತ್‍ನಗರದಲ್ಲಿ ನಡೆದಿದೆ.
ಮಗಳು ಕಾಣದೇ ನಲುಗಿಹೋಗಿದ್ದ ಪಾಲಕರು ಸಾಮಾಜಿಕ ಜಾಲತಾಣ, ಪೊಲೀಸ್​ ಠಾಣೆ ಎಲ್ಲರ ಸಹಾಯ ಪಡೆದರೂ ಬಾಲಕಿ ಪತ್ತೆಯಾಗಲೇ ಇಲ್ಲ. ನಾಲ್ಕು ದಿನ ಬಿಟ್ಟು ಪೊರೆಯೊಂದರಲ್ಲಿ ಈಕೆ ಪತ್ತೆಯಾಗಿರುವ ಕುತೂಹಲ ಘಟನೆ ಇದು!
ಹೀಗೆ ನಾಲ್ಕು ದಿನ ಅಡಗಿ ಕುಳಿತಿದ್ದ ಬಾಲಕಿ ಹೆಸರು ಲಾರಾ. ಅಷ್ಟಕ್ಕೂ ಆಗಿದ್ದೇನೆಂದರೆ, ದ್ವಿತೀಯ ಪಿಯುಸಿ ಓದುತ್ತಿರುವ ಬಾಲಕಿ ದಿನಪೂರ್ತಿ ಮೊಬೈಲ್​ ಫೋನ್​ನಲ್ಲಿ ಕಾಲ ಕಳೆಯುತ್ತಿದ್ದಳು. ಹೀಗಾಗಿ ಆಕೆಯ ತಂದೆ ಬೈದಿದ್ದಾರೆ. ಅಪ್ಪ-ಮಗಳ ನಡುವೆ ಜಗಳವಾಗಿದೆ.
ಇದರಿಂದ ಸಿಟ್ಟುಗೊಂಡಿದ್ದ ಬಾಲಕಿ, ವಾಕಿಂಗ್​ ನೆಪ ಹೇಳಿ ಹೋಗಿದ್ದಾಳೆ. 4 ದಿನವಾದರೂ ಪಾವಸ್​ ಬರಲಿಲ್ಲ. ಅಕ್ಟೋಬರ್ 7ರಂದು ರಾತ್ರಿ ಊಟ ಮಾಡಿ ಹೋಗಿದ್ದ ಈಕೆ ಮನೆಯಿಂದ ಹೊರಡುವ ಸಮಯದಲ್ಲಿ ಫೋನ್, ಪರ್ಸ್ ಯಾವುದನ್ನೂ ತೆಗೆದುಕೊಂಡು ಹೋಗಿರಲಿಲ್ಲ.
ಇದನ್ನೂ ಓದಿ:ಆಶ್ಲೇಷ ನಕ್ಷತ್ರ: ಕುಕ್ಕೆ ದೇಗುಲದಲ್ಲಿ ಭಕ್ತರ ಸಾಗರ- ರಾತ್ರಿಯಿಂದಲೇ ಕ್ಯೂ
ಫೋನ್​ ಇಲ್ಲದ ಕಾರಣ ಆಕೆಯನ್ನು ಸಂಪರ್ಕಿಸಲು ಸಾಧ್ಯವಾಗದ ಪಾಲಕರು ಎಲ್ಲಾ ಕಡೆ ಹುಡುಕಾಡಿದ್ದಾರೆ. ಕೊನೆಗೆ ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರು ದಾಖಲಿಸಿದ್ದಾರೆ. ಜಾಲತಾಣದಲ್ಲಿಯೂ ಜನರ ಸಹಾಯ ಕೋರಿದ್ದಾರೆ.
ಪೊಲೀಸರು ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ಮಾಡಿದ್ದಾರೆ. ನಾಲ್ಕು ದಿನಗಳ ಕಾಲ ಹುಡುಗಿಯನ್ನು ಪತ್ತೆಹಚ್ಚಲು ಪೊಲೀಸರು ಸುತ್ತಮುತ್ತಲಿನ ಪ್ರದೇಶಗಳಿಂದ 100 ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿದ್ದಾರೆ. ಆದರೆ ಬಾಲಕಿ ಮಾತ್ರ ಪತ್ತೆಯಾಗಲೇ ಇಲ್ಲ.
ಆದರೆ ಲಾರಾ ಭಾನುವಾರ ಸಂಜೆ 7 ಗಂಟೆಗೆ ಮನೆಗೆ ಹಿಂದಿರುಗಿದ್ದಾಳೆ. ತನ್ನ ಮನೆಯ ಸಮೀಪ ಪೊದೆಗಳ ನಡುವೆ ಅಡಗಿಕೊಂಡಿದ್ದಳು ಎಂದು ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿಯೂ ಈ ರೀತಿ ಮಾಹಿತಿ ನೀಡಿದ್ದಾರೆ.ಮಗಳು ಸುರಕ್ಷಿತವಾಗಿದ್ದಾಳೆ. ಸ್ವಲ್ಪ ವೀಕ್ ಆಗಿದ್ದಾಳೆ. ಹೀಗಾಗಿ ಇನ್ನೂ ಆಕೆಯ ಹೇಳಿಕೆಯನ್ನು ಪಡೆದುಕೊಂಡಿಲ್ಲ. ವಿಚಾರಣೆ ನಡೆಸುತ್ತಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ತೆರೆದೆದೆಯಲ್ಲಿ ವಿಮಾನವೇರಿದ ಯುವತಿ: ಷರ್ಟ್​ ನೀಡಿದ ಪೈಲಟ್​- ಲಲನೆಯ ರಂಪಾಟ!

VIDEO: ಚೀನಿಯರ ಸದೆ ಬಡಿಯಲು ಗಡಿಯಲ್ಲಿ ಸದ್ದು ಮಾಡುತ್ತಿದೆ ‘ಚಿನೂಕ್’​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × two =
Remember me
