ಪಂಧರ್​ಪುರ (ಮಹಾರಾಷ್ಟ್ರ):ಸಾರಿ ಭಾರತ್​ಮಾತಾ. ನನ್ನನ್ನು ಕ್ಷಮಿಸಿಬಿಡು… ಸೈನ್ಯದ ಸಮವಸ್ತ್ರ ಧರಿಸಿ, ಬಾವುಟ ಹಿಡಿಯುವ ನನ್ನಾಸೆಯನ್ನು ಇಲ್ಲಿಗೇ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಡುತ್ತಿದ್ದೇನೆ. ಬದುಕಿನ ನನ್ನ ದೊಡ್ಡ ಆಸೆಯಾಗಿದ್ದ ಇದನ್ನು ಈಡೇರಿಸದೇ ಸಾಯುವುದಕ್ಕೆ ನನಗೂ ಮನಸ್ಸಿಲ್ಲ, ಆದರೆ ಬೇರೆ ದಾರಿಯಿಲ್ಲ… ನನಗೆ ಬದುಕಲು ಆಗುತ್ತಿಲ್ಲ…
ಹೀಗೆ ಡೆತ್​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ 17 ವರ್ಷದ ಬಾಲಕಿ. ಮಹಾರಾಷ್ಟ್ರದ ಪಂಧರ್​ಪುರದ ನಿವಾಸಿಯಾಗಿರುವ ಈ ಬಾಲಕಿ ಮೂವರು ಪುರುಷರು ನೀಡಿರುವ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಪತ್ರದಲ್ಲಿ ಬರೆದಿದ್ದಾಳೆ.
ಮೊದಲಿನಿಂದಲೂ ಸೇನೆಗೆ ಸೇರಬೇಕು ಎನ್ನುವ ಮಹದಾಕಾಂಕ್ಷೆ ಹೊಂದಿದ್ದ ಬಾಲಕಿಗೆ ಸೈನ್ಯದ ಸಮವಸ್ತ್ರ ಧರಿಸಿ, ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಮಿಂಚುವ ಆಸೆ ಇತ್ತು. ಆದರೆ ಮೂವರು ಕಾಮುಕರು ನೀಡುತ್ತಿದ್ದ ಕಿರುಕುಳದಿಂದ ಆಕೆ ಸಾವಿನ ಹಾದಿ ತುಳಿದಿದ್ದಾಳೆ.
ಮೂವರ ಹೆಸರನ್ನು ಡೆತ್​ನೋಟ್​ನಲ್ಲಿ ಬರೆದಿರುವ ಬಾಲಕಿ, ಇವರು ನಿರಂತರವಾಗಿ ನನಗೆ ಹಿಂಸೆ ಕೊಡುತ್ತಿರುವುದನ್ನು ಸಹಿಸಲು ಆಗುತ್ತಿಲ್ಲ. ಭಾರತೀಯ ಸೇನೆ ಸೇರುವ ಆಸೆಯನ್ನು ಇಲ್ಲಿಗೇ ಮುಗಿಸಿ ಸಾಯುತ್ತಿದ್ದೇನೆ. ಅವರು ನೀಡುವ ಹಿಂಸೆಯನ್ನು ತಾಳಿಕೊಂಡು ಬದುಕಲು ಆಗುತ್ತಿಲ್ಲ ಎಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಈ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಹೇಳಿದ್ದಾರೆ.
ತೆಂಗಿನಕಾಯಿ ಕೀಳಲು 55 ಅಡಿ ಮರವೇರಿದ, ಗಂಟೆ ಕಳೆದರೂ ಏರಿದವನ ಪತ್ತೆಯೇ ಇಲ್ಲ; ಆಗಿದ್ದೇನು?

ವೈರಸ್​ ಬಗ್ಗೆ 2015ರಲ್ಲೇ ಎಚ್ಚರಿಸಿದ್ದ ಬಿಲ್​ಗೇಟ್ಸ್​ ಕರೊನಾ ಕುರಿತು ಹೇಳಿದ್ದಾರೆ ಮತ್ತೊಂದು ಆತಂಕದ ವಿಷಯ

ಜೂಜಾಟದಲ್ಲಿ ಪತ್ನಿಯನ್ನೇ ಪಣಕ್ಕಿಟ್ಟು ಗೆದ್ದವರ ಬಳಿ ಆಕೆಯ ಕಳುಹಿಸಿದ- ಮುಂದಾದದ್ದೆಲ್ಲವೂ ಭಯಾನಕ!

ರಾಜಸ್ಥಾನ ಚುನಾವಣೆ: ಅಲ್ಲಿ ಸೋತವರು, ಇಲ್ಲಿ ಗೆದ್ದರು- ಅಲ್ಲಿ ಗೆದ್ದವರು ಮೂರನೇ ಸ್ಥಾನಕ್ಕಿಳಿದರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:eight − five =
Remember me
