ಡೆಹ್ರಾಡೂನ್:ಹದಗೆಟ್ಟಿರುವ ರಸ್ತೆಗಳ ಕುರಿತು ವರದಿ ಮಾಡಿದ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಬಾಲಕಿಯೊಬ್ಬಳು ಇದೀಗ ಭಾರಿ ಫೇಮಸ್​ ಆಗಿದ್ದಾಳೆ. ಇದಕ್ಕೆ ಕಾರಣ, ಇವಳ ವರದಿಯಿಂದಾಗಿ ಅಧಿಕಾರಿಗಳೇ ಎಚ್ಚೆತ್ತುಕೊಂಡು ರಸ್ತೆ ರಿಪೇರಿ ಮಾಡಿಸಿದ್ದಾರೆ!
ಇಂಥದ್ದೊಂದು ಅಪರೂಪದ ವರದಿಗಾರ್ತಿಯಾಗಿರುವ 15 ವರ್ಷ ಬಾಲಕಿಯ ಹೆಸರು ಸುಹಾನಿ ಬೀಸ್ತ್. ಈಕೆಯ ವರದಿಗೆ ಅದೆಷ್ಟು ಪವರ್​ ಇತ್ತು ಎಂದರೆ, ಜಿಲ್ಲಾಡಳಿತದ ಗಮನಕ್ಕೆ ಬಂದ 24 ಗಂಟೆಯೊಳಗೆ ರಸ್ತೆ ರಿಪೇರಿ ಮಾಡಲು ಮುಂದಾಗಿದೆ.
ಚಾಮೋಲಿ ಜಿಲ್ಲೆಯ ದೇವರ್ಖಡೋರ ಗ್ರಾಮದಲ್ಲಿ 10 ಕಿ.ಮೀ ಉದ್ದದ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಈ ರಸ್ತೆ ನಿರ್ಮಾಣಕ್ಕೆ ಕಳಪೆ ಗುಣಮಟ್ಟದ ವಸ್ತುಗಳನ್ನು ಬಳಸಿದ್ದರಿಂದ ಕೆಲವೇ ದಿನಗಳಲ್ಲಿ ರಸ್ತೆ ತುಂಬಾ ಹೊಂಡ-ಗುಂಡಿಗಳು ಬಿದ್ದಿದ್ದವು.
ಗೋಪೇಶ್ವರದಿಂದ ಘಿಗ್ರಾನ್ ಗ್ರಾಮಕ್ಕೆ ತೆರಳುವ ರಸ್ತೆಗಳು ಕೆಟ್ಟುಹೋಗಿದ್ದು, ವಾಹನಸವಾರರು ಪರದಾಡುತ್ತಿದ್ದರು. ಇದರಿಂದ ಕಂಗಾಲಾಗಿದ್ದ ಸ್ಥಳೀಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ದೂರು ನೀಡಿದ್ದರು. ಆದರೆ ಯಾವುದೇ ಪ್ರಯೋಜನ ಆಗಿರಲಿಲ್ಲ. ಸಾಕಷ್ಟು ಪ್ರತಿಭಟನೆಗಳು ನಡೆದ ಬಳಿಕ ರಸ್ತೆ ರಿಪೇರಿ ಮಾಡಲಾಯಿತಾದರೂ ಅದು ಕೆಲವೇ ಗಂಟೆಗಳಲ್ಲಿ ಮತ್ತೆ ಕೆಟ್ಟು ಹೋಗಿತ್ತು.
ಇದನ್ನೂ ಓದಿ:ಹೆಂಡತಿಗೆ ಬೇರೆ ಸಂಬಂಧ ಇದ್ದಾಗ ಡಿವೋರ್ಸ್​ ಕೊಟ್ರೆ ಜೀವನಾಂಶ ಕೊಡಬೇಕಾಗತ್ತಾ?
ಇದೇ ಗ್ರಾಮದ ಬಾಲಕಿ ಸುಹಾನಿ ಗುಂಡಿಗಳಿಂದ ಕೂಡಿದ್ದ ರಸ್ತೆಯಿಂದ ಆಕ್ರೋಶಗೊಂಡು ತಾನೇ ವರದಿ ಮಾಡುವ ಮೂಲಕ ಅಧಿಕಾರಿಗಳ ಕಣ್ಣು ತೆರೆಸಿದ್ದಾಳೆ. ರಸ್ತೆ ರಿಪೇರಿ ಮಾಡಿಸಿ ಮಾದರಿಯಾಗಿದ್ದಾಳೆ.
ರಸ್ತೆಯ ದುಃಸ್ಥಿತಿ ಮಾತ್ರವಲ್ಲದೇ ಇಂಥ ಕಾರ್ಯ ಮಾಡುವ ಸಮಯದಲ್ಲಿ ಉಂಟಾಗುವ ಭ್ರಷ್ಟಾಚಾರವನ್ನೂ ಆಕೆ ಬಹಿರಂಗಪಡಿಸಿದ್ದಾಳೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಜಿಲ್ಲಾಡಳಿತ ಎಚ್ಚೆತ್ತುಕೊಂಡಿದೆ.
ನಾವು ಇಲ್ಲಿ ತೆರಿಗೆ ಪಾವತಿಸುತ್ತೇವೆ. ಆದರೆ ಸಾರ್ವಜನಿಕ ಸೌಕರ್ಯಗಳು ಮಾತ್ರ ಸರಿಯಾಗಿ ಸಿಗುತ್ತಿಲ್ಲ. ಇದರಿಂದ ನೊಂದು ಈ ಕೆಲಸ ಮಾಡಿರುವುದಾಗಿ ಸುಹಾನಿ ತಿಳಿಸಿದ್ದಾಳೆ. ರಸ್ತೆ ರಿಪೇರಿ ಮಾಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದಾಗ ಅವರಿಗೆ ಬೆದರಿಕೆ ಹಾಕಲಾಗಿತ್ತು ಎಂದೂ ವಿಡಿಯೋದಲ್ಲಿ ಬಾಲಕಿ ತಿಳಿಸಿದ್ದಾಳೆ.ಒಟ್ಟಿನಲ್ಲಿ ಇದೀಗ ಆಡಳಿತ ಎಚ್ಚೆತ್ತುಕೊಂಡು, ದಿಢೀರ್​ ರಸ್ತೆ ರಿಪೇರಿಗೆ ಮುಂದಾಗಿದೆ.
ಕೋವಿಡ್​ಮುಕ್ತ ಈ ಗ್ರಾಮದಲ್ಲಿ 87 ರೂಪಾಯಿಗೆ ಸಿಗುತ್ತೆ ಮನೆ!

ಸೌದಿಯಿಂದ ಭಾರತಕ್ಕೆ ಅಬ್ಬಾ ಎನ್ನುವಷ್ಟು ಭರ್ಜರಿ ಗಿಫ್ಟ್​​… ನಲುಗಿ ಹೋದ ಪಾಕಿಸ್ತಾನ!

ಮನೆಗೆಲಸದವರು ಬೇಕಾಗಿದ್ದಾರೆ… ಸಂಬಳ ₹18.5 ಲಕ್ಷ, ಊಟ, ವಸತಿ ಫ್ರೀ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
