ಮುಂಬೈ:ಸ್ನೇಹಿತನ ಜತೆ ಮೊಬೈಲ್‌ನಲ್ಲಿ ಮಾತನಾಡುತ್ತಿದ್ದ ಬಾಲಕಿಯೊಬ್ಬಳ ಮಾತನ್ನು ಅಪ್ಪ ಕೇಳಿದನೆಂದು, ಹೆದರಿ 6ನೇ ಮಹಡಿಯಿಂದ ಹಾರಿರುವ ಘಟನೆ ಮುಂಬೈನಲ್ಲಿ ನಡೆದಿದೆ.ಮುಂಬೈನ ವೆರ್ ಸೋವಾ ನಿವಾಸಿಯಾಗಿರುವ 16 ವರ್ಷದ ಬಾಲಕಿ ಈಗ ಸಾವು-ನೋವಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸಿದ್ದಾಳೆ. ಈಕೆ ಬದುಕುವ ಸಾಧ್ಯತೆ ತೀರಾ ಕಡಿಮೆ ಇರುವುದಾಗಿ ವೈದ್ಯರು ಹೇಳಿದ್ದಾರೆ.ಆರನೇ ಮಹಡಿಯಲ್ಲಿ ವಾಸವಾಗಿರುವ ಈ ಬಾಲಕಿ ಗೆಳೆಯನ ಜೊತೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಪ್ರೀತಿ-ಪ್ರೇಮದ ವಿಷಯ ಮಾತನಾಡುತ್ತಿದ್ದುದನ್ನು ಆಕೆಯ ತಂದೆ ಹೊರಗೆ ನಿಂತು ಕೇಳಿಸಿಕೊಂಡಿದ್ದಾರೆ. ಮಗಳಿಗೆ ಬೈಯುವ ನಿಟ್ಟಿನಲ್ಲಿ ಅವರು ಹತ್ತಿರ ಬಂದಿದ್ದಾರೆ. ಇದನ್ನು ನೋಡಿ ಬಾಲಕಿ ಭಯಗೊಂಡಿದ್ದಾಳೆ. ಅಪ್ಪ ಏನಾದರೂ ಮಾಡಿಬಿಡಬಹುದು ಎಂಬ ಭಯದಿಂದ ಅಲ್ಲಿಯೇ ಇದ್ದ ತಾಯಿಯ ಸೀರೆಯನ್ನು ಕಿಟಕಿಗೆ ಕಟ್ಟಿ ಅಲ್ಲಿಂದ ಇಳಿಯಲು ಪ್ರಯತ್ನಿಸಿದ್ದಾಳೆ. ಆದರೆ ಭಯದಲ್ಲಿ ಇಳಿಯುತ್ತಿದ್ದುದರಿಂದ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ.ಕೂಡಲೇ ಸ್ಥಳೀಯರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹುಡುಗಿಯ ಬೆನ್ನುಮೂಳೆಗೆ ಗಂಭೀರ ಪೆಟ್ಟಾಗಿದ್ದು, ಬದುಕುವ ಸಾಧ್ಯತೆ ಕಡಿಮೆ ಇರುವುದಾಗಿ ವೈದ್ಯರು ಹೇಳಿದ್ದಾರೆ.
21 ವರ್ಷಕ್ಕಿಂತ ಕಡಿಮೆ ವಯಸ್ಸಿನವ ಮದುವೆಯಾದರೆ ತಪ್ಪು, ಆದರೆ ಲಿವ್‌ ಇನ್‌ನಲ್ಲಿ ಇರಬಹುದು ಎಂದ ಹೈಕೋರ್ಟ್‌
‘ತೆಳ್ಳಗಿನ ನನ್ನ ದೇಹ ನೋಡಿ ನಕ್ಕವರು ಅಷ್ಟಿಷ್ಟಲ್ಲ, ಬಾಡಿ ಶೇಮಿಂಗ್‌ನಿಂದ ಖಿನ್ನತೆಗೂ ಜಾರಿದ್ದೆ’ ಎಂದ ನಟಿ ಆಥಿಯಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + eleven =
Remember me
