ನ್ಯೂಯಾರ್ಕ್‌:ಪ್ರೇಮ ಕುರುಡು ಎನ್ನುತ್ತಾರೆ. ಹಾಗೆಯೇ ತನ್ನ ಗರ್ಲ್‌ಫ್ರೆಂಡ್‌ಗೆ ಸಹಾಯ ಮಾಡಲು ಏನಾದರೂ ಮಾಡಲು ಸಿದ್ಧನಿದ್ದ ಯುವಕನೊಬ್ಬ ಹುಡುಗಿ ವೇಷ ಧರಿಸಿ ಸಿಕ್ಕಿಬಿದ್ದ ಘಟನೆ ಸೇಂಟ್ ಲೂಯಿಸ್‌ನಲ್ಲಿ ನಡೆದಿದೆ.
ಇಲ್ಲಿಯ ಗಾಸ್ಟನ್ ಬರ್ಗರ್‌ ವಿಶ್ವವಿದ್ಯಾಲಯದಲ್ಲಿ ಕಲಿಯುತ್ತಿದ್ದ ತನ್ನ ಸ್ನೇಹಿತೆ ಪರೀಕ್ಷೆಯಲ್ಲಿ ಫೇಲ್‌ ಆಗುತ್ತಾಳೆಂದು ಆಕೆಯ ಪರವಾಗಿ ಪರೀಕ್ಷೆ ಬರೆಯಲು ಖದೀಮ್ ಬೌಪ್ ಎಂಬಾತ ಹುಡುಗಿಯ ವೇಷ ಧರಿಸಿದ್ದ! ಹುಡುಗಿ ವೇಷ ತೊಟ್ಟು ಪರೀಕ್ಷಾ ಕೊಠಡಿಗೆ ಬಂದು ಯಾರಿಗೂ ತಿಳಿಯದಂತೆ ಪರೀಕ್ಷೆ ಬರೆದಿದ್ದಾನೆ ಕೂಡ.
ವಿಗ್, ಸ್ಕಾರ್ಫ್, ಕಿವಿಯೋಲೆಗಳು ಹಾಗೂ ಮೇಕಪ್‌ ಹಾಕಿಕೊಂಡು ಪ್ರೇಯಸಿ ಡಿಯೋಮ್‌ ಹೋಲುವಂತೆ ಎಲ್ಲಾ ಸಿದ್ಧತೆ ಮಾಡಿಕೊಂಡು ಪರೀಕ್ಷೆ ಬರೆಯುತ್ತಿದ್ದ. ಅಚ್ಚರಿ ಎಂದರೆ ಮೂರು ದಿನ ಈತನ ಯೋಜನೆ ಯಶಸ್ವಿಯೂ ಆಗಿದೆ. ಯಾರಿಗೂ ಅನುಮಾನವೂ ಬದಲಿಲ್ಲ. ಆದರೆ ನಾಲ್ಕನೇ ದಿನ ಈತನ ಗ್ರಹಚಾರ ಕೆಟ್ಟಿತ್ತು.
ಪರೀಕ್ಷಾ ಮೇಲ್ವಿಚಾರಕರಿಗೆ ಖದೀಂ ಮೇಲೆ ಅನುಮಾನ ಬಂದು ಪರೀಕ್ಷಿಸಿ ನೋಡಿದ್ದಾರೆ. ಆಗ ಈ ಅಭ್ಯರ್ಥಿ ಅವಳಲ್ಲ, ಅವನು ಎಂದು ತಿಳಿದಿದೆ. ಕೂಡಲೇ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಇಬ್ಬರ ವಿರುದ್ಧ ಪರೀಕ್ಷೆಯಲ್ಲಿ ವಂಚನೆಯೆಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಐದು ವರ್ಷಗಳ ಮಟ್ಟಿಗೆ ರಾಷ್ಟ್ರ ಮಟ್ಟದ ಯಾವುದೇ ಪರೀಕ್ಷೆಯಲ್ಲಿ ಭಾಗಿಯಾಗದಂತೆ ಇಬ್ಬರನ್ನೂ ಬ್ಯಾನ್ ಮಾಡುವ ಸಾಧ್ಯತೆ ಇದೆ. ಮಾತ್ರವಲ್ಲದೇ ಈ ಅಪರಾಧಕ್ಕೆ ಐದು ವರ್ಷಗಳ ಕಾಲ ಜೈಲು ಶಿಕ್ಷೆಯಾಗುವ ಸಾಧ್ಯತೆಯೂ ಇದೆ.
ಬಾಲಕಿ ಹೊಟ್ಟೆಯಲ್ಲಿತ್ತು ಅರ್ಧ ಕೆ.ಜಿಗಿಂತಲೂ ಅಧಿಕ ಕೂದಲು- ವೈದ್ಯರೇ ಕಂಗಾಲು

ಆನ್‌ಲೈನ್‌ ಕ್ಲಾಸ್‌ಗೆ ಡಿಸ್ಟರ್ಬ್‌ ಮಾಡಬೇಡಮ್ಮಾ ಎಂದು ಆತ್ಮಹತ್ಯೆ ಮಾಡಿಕೊಂಡ ಕಲಬುರಗಿ ವಿದ್ಯಾರ್ಥಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − one =
Remember me
