ಭೋಪಾಲ್:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಭಾವಿತರಾಗುವುದು ಏನಿದ್ದರೂ 40-50 ವಯೋಮಾನದ ಮಹಿಳೆಯರೇ ವಿನಾ ಜೀನ್ಸ್‌ ತೊಟ್ಟು ಮೊಬೈಲ್‌ ಇಟ್ಕೊಳೋ ಯುವತಿಯರು ಅಲ್ಲ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ. ಇವರ ಈ ಹೇಳಿಕೆ ಇದೀಗ ಟೀಕೆಗೂ ಕಾರಣವಾಗಿದೆ.ಜನ್ ಜಾಗರಣ ಶಿಬಿರದಲ್ಲಿ ಭೋಪಾಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನುದ್ದೇಶಿಸಿ ಸಿಂಗ್‌ ಮಾತನಾಡುತ್ತಿದ್ದರು. ಆ ಸಮಯದಲ್ಲಿ ಅವರು ಈ ವಿಷಯವನ್ನು ಹೇಳಿದ್ದಾರೆ. ಎರಡು ದಿನಗಳ ಹಿಂದೆ ಮಾತನಾಡಿದ್ದ ದಿಗ್ವಿಜಯ ಸಿಂಗ್‌, ವೀರ್‌ ಸಾವರ್ಕರ್‌ ಅವರ ಪುಸ್ತಕವನ್ನು ಉಲ್ಲೇಖಿಸಿರುವ ದಿಗ್ವಿಜಯ ಸಿಂಗ್‌, ‘ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರು ಗೋವಿನ ಆರಾಧನೆಯನ್ನು ಬೆಂಬಲಿಸುವುದಿಲ್ಲ. ಗೋಮಾಂಸವನ್ನು ತಿನ್ನಲು ಅವರು ಹೇಳಿದ್ದಾರೆ. ಗೋವು ನಮ್ಮ ಮಾತೆ ಅಲ್ಲ ಎಂದು ಹೇಳಿದ್ದಾರೆ’ ಎಂಬ ಹೇಳಿಕೆ ನೀಡಿದ್ದರು. ಇದೀಗ ಪ್ರಧಾನಿ ಮೋದಿ ಹಾಗೂ ಜೀನ್ಸ್‌ ತೊಟ್ಟ ಯುವತಿಯರ ಬಗ್ಗೆ ಮಾತನಾಡಿ, ಭಾರಿ ವಿವಾದವನ್ನು ಸೃಷ್ಟಿಸಿದ್ದಾರೆ.ಈ ಬಗ್ಗೆ ಬಿಜೆಪಿ ಕೆಂಡಾಮಂಡಲವಾಗಿದೆ. ದಿಗ್ವಿಜಯ ಸಿಂಗ್ ಅವರು ವಯಸ್ಸಿನೊಂದಿಗೆ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ, ಅವರು ಮಹಿಳೆಯರ ಬಗ್ಗೆ ಈ ಕೆಳಗಿನ ಮಟ್ಟದ ಆಲೋಚನೆ ಹೊಂದಿದ್ದಾರೆ. ದಿಗ್ವಿಜಯ ಸಿಂಗ್ ಈಗ ಹುಚ್ಚು ಹಿಡಿದಿದೆ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.ವೀರ್‌ ಸಾವರ್ಕರ್‌ ಅವರ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುವ ಮೂಲಕ ದಿಗ್ವಿಜಯ ಸಿಂಗ್‌ ಅವರು ಎಲ್ಲೆಯನ್ನು ಮೋರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.ಸಿಂಗ್‌ ಹೇಳಿಕೆಯನ್ನು ಖಂಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಎಎನ್‌ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದು, ದಿಗ್ವಿಜಯ ಸಿಂಗ್ ಅವರು ಅತ್ಯಂತ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಈಗ ಕಾಂಗ್ರೆಸ್ ಪಕ್ಷದ ನಿರ್ಧಾರದಲ್ಲಿ ಅವರಿಗೆ ಯಾವುದೇ ಪ್ರಮುಖ ಪಾತ್ರವಿಲ್ಲ, ಅವರು ಪ್ರಚಾರದಲ್ಲಿರಲು ಇದೆಲ್ಲವನ್ನೂ ಹೇಳುತ್ತಿದ್ದಾರೆ. ಇದು ಬರೀ ಅಸಂಬದ್ಧ ಎಂದಿದ್ದಾರೆ.
‘ಉಫ್‌… ನಾನಂತೂ ಮುಸ್ಲಿಂ ಹುಡುಗನನ್ನ ಮದ್ವೆಯಾಗಲ್ಲ’ ಎಂದ ನಟಿ ಉರ್ಫಿ ಜಾವೇದ್‌ ಕೊಟ್ಟಳು ಈ ಕಾರಣ…
VIDEO: ದೇಶವನ್ನು ಸತ್ಯನಾಶ ಮಾಡಿದ್ದು ಗಾಂಧಿ, ಗೋಡ್ಸೆಗೆ ನಮಸ್ಕಾರ ಎಂದ ಸಂತ: ಧರ್ಮ ಸಂಸದ್‌ನಲ್ಲಿ ಚಪ್ಪಾಳೆಗಳ ಸುರಿಮಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
