ಜೈಪುರ:ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೋಗಿದ್ದ ನಾಲ್ವರು ಮಹಿಳೆಯರ ಮೇಲೆ ಸ್ವಯಂ ಘೋಷಿತ ದೇವಮಾನವ ಅತ್ಯಾಚಾರ ಎಸಗಿರುವ ಭಯಾನಕ ಘಟನೆ ಜೈಪುರದ ತಪಸ್ವಿ ಆಶ್ರಮದಲ್ಲಿ ನಡೆದಿದೆ.
ಶೈಲೇಂದ್ರ ಮೆಹ್ತಾ ಎಂಬಾತನ ವಿರುದ್ಧ ಈ ದೂರು ಕೇಳಿಬಂದಿದೆ. ಒಂದೇ ಕುಟುಂಬದ ಮೂವರು ಮಹಿಳೆಯರು ಸೇರಿದಂತೆ ನಾಲ್ವರು ಮಹಿಳೆಯರು ಈತನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿದ್ದಾರೆ. ಸೇವೆಯ ಉದ್ದೇಶದಿಂದ ಕೆಲವು ದಿನ ಆಶ್ರಮದಲ್ಲಿ ತಂಗುತ್ತಿದ್ದ ಮಹಿಳೆಯರ ಮೇಲೆ ಈತ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್‌ ಅಧಿಕಾರಿ ಮುಕೇಶ್‌ ಚೌಧರಿ ಅವರು ಮಾಹಿತಿ ನೀಡಿದ್ದಾರೆ.
‘ಆಶ್ರಮದಲ್ಲಿ ಸತ್ಸಂಗ ಹಾಗೂ ಕೆಲವು ಸೇವಾ ಕಾರ್ಯಕ್ರಮಗಳು ನಡೆಯುತ್ತವೆ. ಇವುಗಳಲ್ಲಿ ಭಾಗಿಯಾಗಲು ಹಲವು ವರ್ಷಗಳಿಂದ ನಾವು ಆಶ್ರಮಕ್ಕೆ ಭೇಟಿ ನೀಡುತ್ತ ಬಂದಿದ್ದೇವೆ. ಸೇವಾ ದೃಷ್ಟಿಯಿಂದ ಈ ಕೆಲಸ ನಾವು ಮಾಡುತ್ತಿದ್ದೇವೆ. ಆಗ ಈತ ನಮ್ಮ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆಯರು ದೂರು ದಾಖಲಿಸಿರುವುದಾಗಿ ಚೌಧರಿ ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆಯೊಬ್ಬರು ತಮ್ಮ ಮಗಳನ್ನು ಆಶ್ರಮಕ್ಕೆ ಕರೆದುಕೊಂಡು ಹೋಗದಂತೆ ಪತಿಗೆ ತಡೆದಾಗ ಈ ವಿಷಯ ಬೆಳಕಿಗೆ ಬಂದಿದೆ ಎಂದು ಅವರು ಹೇಳಿದ್ದಾರೆ. ತನಿಖೆ ನಡೆಯುತ್ತಿದ್ದು, ಈ ವರೆಗೆ ಆರೋಪಿಯನ್ನು ಬಂಧಿಸಿಲ್ಲ ಎನ್ನಲಾಗಿದೆ.
ಕರೊನಾ ವಾರಿಯರ್​ ಆಗಲು ರೆಡಿನಾ? 1061 ಹುದ್ದೆಗಳ ನೇರ ಸಂದರ್ಶನ: 2.50 ಲಕ್ಷ ರೂ ವರೆಗೆ ಸಂಬಳ

ನಿನ್ನ ಮಗುವನ್ನು ಗಂಡ ತನ್ನದೇ ಎಂದುಕೊಂಡಿದ್ದಾನೆ, ನನ್ನಿಂದ ದೂರ ಹೋಗು ಅಂತಿದ್ದಾಳೆ- ದಿಕ್ಕೇ ತೋಚದಾಗಿದೆ

ಜೋಡಿಗಳಿಗೆ ಹೇಳಿ ಮಾಡಿಸಿದ ದ್ವೀಪವಿದು- ಇಲ್ಲಿಗೆ ಹೋದ್ರೆ ಸಿಗತ್ತೆ 88 ಲಕ್ಷ ರೂ ಜತೆ ಸಕಲ ಸೌಲಭ್ಯ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:4 × 5 =
Remember me
