ಮುಂಬೈ:ಸ್ನೇಹಿತರ ಕುಟುಂಬಕ್ಕೆ ಕರೊನಾ ಸೋಂಕು ಬಂದಿದ್ದು, ಆಸ್ಪತ್ರೆಗೆ ದಾಖಲಾಗಿದ್ದ ಹಿನ್ನೆಲೆಯಲ್ಲಿ ಅವರನ್ನು ನೋಡಲು ಆಸ್ಪತ್ರೆಗೆ ತೆರಳಿದ್ದ ವ್ಯಕ್ತಿಯೊಬ್ಬರು ಮನೆಗೆ ಬಂದು ನೋಡಿದಾಗ ಮಗಳೂ ಕಾಣದೇ, ಚಿನ್ನವೂ ನಾಪತ್ತೆಯಾಗಿ ಕಂಗಾಲಾಗಿರುವ ಘಟನೆಯೊಂದು ಮುಂಬೈನಲ್ಲಿ ನಡೆದಿದೆ.
ಆಸ್ಪತ್ರೆಗೆ ತಾವು ತೆರಳುತ್ತಿರುವ ಹಿನ್ನೆಲೆಯಲ್ಲಿ ತಮ್ಮಲ್ಲಿರುವ ಚಿನ್ನಾಭರಣಗಳನ್ನು ಸುರಕ್ಷಿತ ಸ್ಥಳದಲ್ಲಿ ಇಡುವಂತೆ ಮಗಳಿಗೆ ಹೇಳಿಹೋಗಿದ್ದ ತಂದೆ ವಾಪಸದಾಗ ಚಿನ್ನದ ಜತೆ ಮಗಳೂ ಕಾಣಿಸದೇ ಇದ್ದಾಗ ಆತಂಕಗೊಂಡು ಪೊಲೀಸರಲ್ಲಿ ದೂರು ದಾಖಲಾಗಿದ್ದಾರೆ.
ತಮ್ಮ ಮಗಳಿಗೆ ಏನೋ ಅನಾಹುತ ಆಗಿ ಹೋಗಿದೆ ಎಂದು ತಂದೆ ಅಂದುಕೊಂಡಿದ್ದರೆ ಆಗಿದ್ದೇ ಬೇರೆ, ಮಗಳನ್ನು ಯಾರೋ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ತಂದೆ ತಿಳಿದುಕೊಂಡಿದ್ದರೆ, ಮಗಳೇ ಚಿನ್ನವನ್ನು ಅಪಹರಿಸಿಕೊಂಡು ಪ್ರಿಯಕರನ ಜತೆ ಓಡಿಹೋಗಿರುವ ಘಟನೆ ಇದು!
ಇಂಥದ್ದೊಂದು ವಿಚಿತ್ರ ಘಟನೆ ನಡೆದಿರುವುದು ಓಶಿವಾರಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಉಮ್ರಾಡರಾಜ್ ಹೋಟೆಲ್ ನಡೆಸುತ್ತಿದ್ದು, ಅವರ ಬಳಿ 65 ತೊಲ ಚಿನ್ನ ಹಾಗೂ 10 ಲಕ್ಷ ರೂಪಾಯಿ ನಗದು ಇತ್ತು. ಸ್ನೇಹಿತನನ್ನು ನೋಡಿಕೊಂಡು ಆಸ್ಪತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಈ ಹಣ ಮತ್ತು ಚಿನ್ನವನ್ನು ಸುರಕ್ಷಿತ ಸ್ಥಳದಲ್ಲಿಟ್ಟು ತಾನು ಬಂದ ಮೇಲೆ ವಾಪಸ್‌ ನೀಡುವಂತೆ ಮಗಳಿಗೆ ಹೇಳಿ ಹೋಗಿದ್ದರು ಅವರು.
ಇದನ್ನೂ ಓದಿ:ಶವ ನೋಡಬೇಕೆಂದರೆ 51,000 ರೂ.ಕೊಡಿ ಎಂದ ಆಸ್ಪತ್ರೆ ಸಿಬ್ಬಂದಿ; ಪೊಲೀಸರನ್ನೂ ವಾಪಸ್​ ಕಳಿಸಿದರು
ಆದರೆ ಮಗಳು ಉಜ್ಮಾ ಖುರೇಷಿ ತನ್ನ ಪ್ರಿಯಕರನಾಗಿರುವ ಶಿಕ್ಷಕ ಚರಂದೀಪ್ ಸಿಂಗ್ ಅರೋರಾ ಜತೆ ಎಲ್ಲವನ್ನೂ ತೆಗೆದುಕೊಂಡು ಪರಾರಿಯಾಗಿದ್ದಾಳೆ.
ಇತ್ತ ಮನೆಗೆ ಬಂದಾಗ ಮಗಳು, ಚಿನ್ನ- ಹಣ ಕಾಣದೇ ಕಂಗೆಟ್ಟ ತಂದೆ ಪೊಲೀಸರಿಗೆ ದೂರು ನೀಡಿದಾಗ ಪೊಲೀಸರು ತನಿಖೆ ಕೈಗೊಂಡಾಗ ವಿಷಯ ಬೆಳಕಿಗೆ ಬಂದಿದೆ. ಹಿಂದೊಮ್ಮೆ ಕಪಾಟಿನ ಕೀಲಿಕೈಯನ್ನು ತನಗೆ ನೀಡುವಂತೆ ಮಗಳು ಒತ್ತಾಯಿಸಿದ್ದು ಇದೇ ಕಾರಣಕ್ಕೆ ಎಂದು ತಂದೆಗೆ ತಿಳಿಯಿತು. ಇದೀಗ ಮಗಳು ಮತ್ತು ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಶುರುವಾಗಲಿದೆ ಕತ್ತೆಯ ಹಾಲಿನ ಡೈರಿ: ಬೆಲೆ ಕೇಳಿ ಮೂರ್ಛೆ ಹೋಗ್ಬೇಡಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
