ವಾಷಿಂಗ್ಟನ್‌:ಜಗತ್ತಿನ ಪ್ರತಿಯೊಬ್ಬರೂ ಶತಕೋಟಿ ಬಿಲೇನಿಯರ್‌ ಆಗುವಷ್ಟು ಚಿನ್ನದ ನಿಧಿಯನ್ನು ಹೊಂದಿರುವ ಕ್ಷುದ್ರಗ್ರಹಕ್ಕೆ ಅಮೆರಿಕ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ನಾಸಾ) ಲಗ್ಗೆ ಇಡಲು ಸನ್ನದ್ಧವಾಗಿದೆ.
ಚಿನ್ನ, ಕಬ್ಬಿಣ, ನಿಕ್ಕೆಲ್‌ ಅಷ್ಟೇ ಅಲ್ಲದೇ ಪ್ಲಾಟಿನಂ ಕೂಡ ಹೊಂದಿರುವ ಕ್ಷುದ್ರ ಗ್ರಹವಿದು. ಇದರ ಹೆಸರು ’16 ಸೈಕೀ’. ಅಷ್ಟಕ್ಕೂ ಈ ಗ್ರಹದಲ್ಲಿ ಇರುವ ಒಟ್ಟಾರೆ ಮೌಲ್ಯ ಎಷ್ಟು ಗೊತ್ತಾ? ಒಂದು ಕ್ವಾಡ್ರಿಲಿಯನ್‌ ಡಾಲರ್‌. ಕ್ವಾಡ್ರಿಲಿಯನ್‌ ಅಂದರೆ ಒಂದರ ಮುಂದೆ 15 ಸೊನ್ನೆ ಹಾಕಿದರೆ ಎಷ್ಟಾಗುತ್ತದೋ ಅಷ್ಟು. ಅಂದರೆ ಹತ್ತು ಕೋಟಿ ಕೋಟಿಗಳು.
ಮಂಗಳ ಹಾಗೂ ಗುರು ಗ್ರಹದ ನಡುವೆ ಓಡಾಡುತ್ತ ಇರುವ ’16 ಸೈಕೀ’ ಬೇಟೆಗಾಗಿ ಇದಾಗಲೇ ನಾಸಾ ವಿನ್ಯಾಸವನ್ನು ಸಿದ್ಧಪಡಿಸಿದೆ.
ಭೂಮಿಯಿಂದಾಚೆಗೆ, ಮಂಗಳ ಹಾಗೂ ಗುರು ಗ್ರಹಗಳ ನಡುವೆ ಕ್ಷುದ್ರಗ್ರಹಗಳ ಪಟ್ಟಿ ಎಂದೇ ಕರೆಯಲ್ಪಡುವ ವಿಸ್ತಾರ ಪ್ರದೇಶವಿದೆ. ಇಲ್ಲಿ ಸಾವಿರಾರು ಕ್ಷುದ್ರಗ್ರಹಗಳು ಸೂರ‍್ಯನನ್ನು ಸುತ್ತು ಹಾಕುತ್ತಿರುತ್ತವೆ. ಆದರೆ 16 ಸೈಕೀಯಷ್ಟು ದೊಡ್ಡ ಕ್ಷುದ್ರಗ್ರಹಗಳು ಕಡಿಮೆ. ಬೇರೆ ಗ್ರಹಗಳಲ್ಲಿ ಇರುವಂತೆ 16 ಸೈಕಿಯಲ್ಲಿ ಅಂತರಿಕ್ಷದ ಹುಡಿಧೂಳು, ಅನಿಲಗಳ ಉಂಡೆಯಷ್ಟೇ ಅಲ್ಲದೇ, ಇದಾಗಲೇ ಹೇಳಿದಂತೆ ಚಿನ್ನ, ವಜ್ರಗಳ ಖನಿಯೇ ಇದೆಯಂತೆ. ಇದರ ಅಂದಾಜು ಮೌಲ್ಯದ ಕುರಿತು ವಿವರಣೆ ನೀಡಿರುವ ನಾಸಾ, ಒಂದು ವೇಳೆ ಇಲ್ಲಿರುವ ಎಲ್ಲಾ ಚಿನ್ನ, ವಜ್ರ, ಪ್ಲಾಟಿನಂ ಅನ್ನು ಭೂಮಿಯ ಮೇಲೆ ತಂದರೆ, ಜಗತ್ತಿನ ಪ್ರತಿಯೊಬ್ಬನೂ ಬಿಲೇನಿಯರ್‌ ಆಗಬಹುದು ಎಂದಿದೆ.
ಇದನ್ನೂ ಓದಿ:ಕರೊನಾದಿಂದ ಕೆಲಸ ಕಳೆದುಕೊಂಡವರೆಷ್ಟು? ಅಧ್ಯಯನ ವರದಿ ಏನು ಹೇಳಿದೆ ನೋಡಿ…
ಪ್ರತಿ ವರ್ಷವೂ ದೇಶದ ಆರ್ಥಿಕತೆಯ ಕುರಿತಂತೆ ಪ್ರತಿ ದೇಶವೂ ಇಂತಿಷ್ಟು ಹಣವನ್ನು ವಿನಿಯೋಗ ಮಾಡಿರುತ್ತದೆ. ಆದರೆ ಇಲ್ಲಿರುವ ನಿಕ್ಷೇಪದಿಂದ ಇಡೀ ಜಗತ್ತಿನ ಆರ್ಥಿಕತೆಗಿಂತಲೂ ಮೀರಿಸುವಷ್ಟು ಧನ ಇರುವುದಾಗಿ ನಾಸಾ ಹೇಳಿದೆ.
ಈ ಕ್ಷುದ್ರಗ್ರಹ ಹೇಗೆ ಉಂಟಾಗಿರಬಹುದು ಎಂಬುದರ ಬಗ್ಗೆ ಹಲವು ಊಹೆಗಳು ಬಾಹ್ಯಾಕಾಶ ತಜ್ಞರಲ್ಲಿ ಇವೆ. ಮಂಗಳ ಅಥವಾ ಗುರುಗ್ರಹದ ಒಂದು ತುಣುಕು ಸಿಡಿದು ಆಗಿರಬಹುದು; ಸೌರವ್ಯೂಹ ಆರಂಭದಲ್ಲಿ ಸ್ಫೋಟಗೊಂಡು ರೂಪುಗೊಂಡಾಗ ಆಗಿರಬಹುದು ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ಆದರೂ ಈ ಲೋಹಗಳ ಬಗ್ಗೆ ಇನ್ನೂ ಸಂಪೂರ್ಣ ಅಧ್ಯಯನ ನಡೆದಿಲ್ಲ.
ಇವುಗಳ ಅಧ್ಯಯನಕ್ಕೆಂದು ಇದೀಗ ನಾಸಾ ಸಿದ್ಧತೆ ನಡೆಸಿದೆ. ಅಮೆರಿಕದ ಶ್ರೀಮಂತ ಎಲಾನ್‌ ಮಸ್ಕ್‌ನ ಕಂಪನಿ ಸ್ಪೇಸ್‌ ಎಕ್ಸ್‌ ಕೂಡ ಈ ಸಂಶೋಧನೆಯಲ್ಲಿ ನಾಸಾಗೆ ಕೈಜೋಡಿಸಿದೆ. ಕೇಪ್‌ ಕೆನವರಲ್‌ನ ಲಾಂಚ್‌ ಪ್ಯಾಡ್‌ನಿಂದ, ಸ್ಪೇಸ್‌ ಎಕ್ಸ್‌ನ ಭಾರದ ರಾಕೆಟ್‌ ಫಾಲ್ಕನ್‌ ಮೂಲಕ ನಾಸಾದ ಸೈಕೀ ನೌಕೆ 2022ರ ಆಗಸ್ಟ್‌ನಲ್ಲಿ ಉಡಾವಣೆಗೊಳ್ಳಲಿದೆ. 2023ರಲ್ಲಿ ಮಂಗಳವನ್ನು ದಾಟಲಿದೆ. 2026ರ ಜನವರಿ ವೇಳೆಗೆ 16 ಸೈಕೀಯ ಕಕ್ಷೆಯನ್ನು ಸೇರಬಹುದು.
ನೌಕೆಯಲ್ಲಿರಬೇಕಾದ ಮೂರು ಉಪಕರಣಗಳ ತಯಾರಿಯಲ್ಲಿ ಈಗ ನಾಸಾ ತೊಡಗಿದೆ- ಗ್ರಹದ ಗುರುತ್ವಾಕರ್ಷಣ ವಲಯವನ್ನು ಲೆಕ್ಕ ಹಾಕಲು ಮ್ಯಾಗ್ನೆಟೋಮೀಟರ್‌, ಗ್ರಹದ ಮೇಲ್ನೆಲೆಯ ಚಿತ್ರಗಳನ್ನು ಸೆರೆಹಿಡಿಯಲು ಮಲ್ಟಿಸ್ಪೆಕ್ಟ್ರಲ್‌ ಇಮೇಜರ್‌ ಹಾಗೂ ಗ್ರಹದಿಂದ ಹೊರಸೂಸುವ ಗಾಮಾ ಕಿರಣಗಳು ಮತ್ತು ನ್ಯೂರಾನ್‌ಗಳನ್ನು ಪರಿಶೀಲಿಸುವ ಸ್ಪೆಕ್ಟ್ರೋಮೀಟರ್‌.
ಚಾಮರಾಜನಗರದ ಮೊದಲ ಬಿಜೆಪಿ ಶಾಸಕ ಗುರುಸ್ವಾಮಿ ಕರೊನಾದಿಂದ ಸಾವು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 4 =
Remember me
