ಹೈದರಾಬಾದ್ (ತೆಲಂಗಾಣ):ದೀಪಾವಳಿ ಸಮಯದಲ್ಲಿ ಹೈದರಾಬಾದ್‌ನಲ್ಲಿ ಕೋಣಗಳ ಉತ್ಸವ ನಡೆಯುತ್ತದೆ. ಇದಕ್ಕೆ ಸದರ್‌ ಉತ್ಸವ ಎನ್ನುತ್ತಾರೆ. ಇದಕ್ಕಾಗಿ ಕೋಣಗಳಿಗೆ ಶೃಂಗಾರ ಮಾಡುವುದು, ಅವುಗಳನ್ನು ಉತ್ಸವಕ್ಕೆ ಸಜ್ಜುಗೊಳಿಸಲಾಗುವುದು, ಮಿರಮಿರ ಮಿಂಚುಗ ಕೋಣಗಳನ್ನು ನೋಡುವುದೇ ಒಂದು ಅಂದ. ಇವುಗಳಿಂದ ಹಲವಾರು ರೀತಿಯ ಸಾಹಸಗಳನ್ನೂ ಈ ಸಮಯದಲ್ಲಿ ಮಾಡಿಸಲಾಗುವುದು.
ಇನ್ನು ನಿಜಾಮರ ಕಾಲದಿಂದಲೂ ಸದರ್ ಉತ್ಸವ ಪ್ರತಿ ವರ್ಷ ನಡೆಯುತ್ತಿದ್ದು, ಹಸುಗಳು, ಎಮ್ಮೆ, ಎತ್ತು ಕೋಣಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸಲಾಗುತ್ತದೆ.
ಈ ಉತ್ಸವದಲ್ಲಿ ಪಾಲ್ಗೊಳ್ಳಲು ಬೇರೆ ಬೇರೆ ರಾಜ್ಯಗಳಿಂದಲೂ ಜನರು ಬರುತ್ತಾರೆ. ಇದೀಗ ಈ ವರ್ಷದ ಹೈಲೈಟ್‌ ಬಾಹುಬಲಿ. ಬಾಹುಬಲಿ ಎಂದು ಹೆಸರು ಇರುವ ಕೋಣವನ್ನು ಹರಿಯಾಣದಿಂದ ತರಿಸಲಾಗಿದೆ.ಅದಕ್ಕೆ ಬಾಹುಬಲಿ ಕೋಣ ಎಂದು ಹೆಸರಿಡಲಾಗಿದೆ. ಹೈದರಾಬಾದ್​ನ ಚಾಪೆಲ್ ಬಜಾರ್​ನ ಲಡ್ಡು ಯಾದವ್ ಎಂಬುವವರಿಗೆ ಸೇರಿರುವ ಈ ಕೋಣವನ್ನು ಹರಿಯಾಣದ ಬಲ್ವೀರ್ ಸಿಂಗ್ ಎಂಬುವವರು ತಂದು ಪ್ರದರ್ಶಿಸಿದ್ದಾರೆ. ಈ ಕೋಣ ಇಷ್ಟು ಹೈಲೈಟ್‌ ಆಗಲು ಕಾರಣ ಏಕೆಂದರೆ ಅದಕ್ಕೆ ಹಾಕಿರುವ ಚಿನ್ನದ ಸರ!
ಸುಮಾರು 3 ಕೆ.ಜಿ ತೂಕವಿರುವ, ಒಂದೂವರೆ ಕೋಟಿ ಬೆಲೆ ಬಾಳುವ ಚಿನ್ನದ ಸರವನ್ನು ಕೋಣಕ್ಕೆ ತೊಡಿಸಲಾಗಿದೆ. ಇದೀಗ ಮಿರಮಿರ ಮಿಂಚುತ್ತಿದ್ದ ನೋಡುಗರ ಕಣ್ಮನ ಸೆಳೆಯುತ್ತಿದೆ.
ಡ್ರಗ್ಸ್‌ ಕೇಸ್‌ನಲ್ಲಿ ಶಾರುಖ್‌ ಪುತ್ರ ಸಿಕ್ಕಿಬೀಳ್ತಿದ್ದಂತೆಯೇ ರಾಹುಲ್‌ ಬರೆದರು ಪತ್ರ: ಜಾಲತಾಣದಲ್ಲಿ ಭಾರಿ ವೈರಲ್‌!

ಬರ್ತ್‌ಡೇ ಪಾರ್ಟಿಯಲ್ಲಿ ನಡೆದಿದೆ ನಿಗೂಢ? ಪುನೀತ್‌ ಸಾವಿನ ರಹಸ್ಯ ಸಿಬಿಐ ತನಿಖೆಗೆ ವಹಿಸಲು ಆಗ್ರಹ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
