ಸೈರೋ:ಸುಮಾರು 2 ಸಾವಿರ ವರ್ಷದಷ್ಟು ಹಳೆಯದಾಗಿರುವ ಮಮ್ಮಿಯೊಂದು ಈಜಿಪ್ಟ್‌ನಲ್ಲಿ ಸಿಕ್ಕಿದೆ. ಹೀಗೆ ಶತಮಾನದಷ್ಟು ಹಳೆಯದಾಗಿರುವ ಪಳೆಯುಳಿಕೆ ಸಿಗುವುದು ಹೊಸ ವಿಷಯವೇನಲ್ಲ. ಆದರೆ ಇಲ್ಲೊಂದು ಅಚ್ಚರಿಯ ವಿಷಯ ಎಂದರೆ ಈ ಮಮ್ಮಿಯ ನಾಲಿಗೆಯು ಚಿನ್ನದಿಂದ ಮಾಡಲಾಗಿದೆ!
ಈಜಿಪ್ಟ್‌ನ ಟ್ಯಾಪೋಸಿರಿಸ್ ಮಗ್ನಾ ಸಮಾಧಿ ಸ್ಥಳದಲ್ಲಿ ಪುರಾತತ್ವಜ್ಞರಿಗೆ ಇಂಥದ್ದೊಂದು ವಿಶೇಷವಾಗಿರುವ ಮಮ್ಮಿ ಸಿಕ್ಕಿದೆ. ಹತ್ತು ವರ್ಷಗಳಿಂದ ಮಮ್ಮಿಯ ಸಂಶೋಧನೆಯಲ್ಲಿ ತೊಡಗಿಕೊಂಡಿರುವ ಸ್ಯಾಂಟೊ ಡೋಮಿಂಗೋ ವಿಶ್ವವಿದ್ಯಾಲಯ ಇಲ್ಲಿ ಉತ್ಖನನ ಕೆಲಸ ಕೈಗೊಂಡಿದ್ದು, ಈ ಸಂದರ್ಭ ಇದು ಲಭ್ಯವಾಗಿದೆ. ಈ ಹಿಂದೆ ಇದೇ ತಂಡವು ಟ್ಯಾಪೋಸಿರಿಸ್ ಮ್ಯಾಗ್ನಾ ದೇವಾಲಯದ ಒಳಗೆ ಹಲವು ನಾಣ್ಯಗಳನ್ನು ಪತ್ತೆಹಚ್ಚಿತ್ತು.
ಚಿನ್ನದ ನಾಲಗೆಯೊಂದಿಗೆ ಇದ್ದ ಈ ಅಸ್ಥಿಪಂಜರವನ್ನು ಸಂರಕ್ಷಿಸಿಡಲಾಗಿದೆ. ಅದರ ತಲೆ ಬುರುಡೆ ಹಾಗೂ ದೇಹದ ರಚನೆ ಹಾಗೆಯೇ ಇದ್ದು, ಈ ಮಮ್ಮಿ ಸುಮಾರು 2000 ವರ್ಷಗಳ ಹಿಂದಿನದ್ದು ಎನ್ನಲಾಗಿದೆ.
ಅಷ್ಟಕ್ಕೂ ಈ ಚಿನ್ನದ ನಾಲಿಗೆಯನ್ನು ಮಮ್ಮಿಗೆ ಅಳವಡಿಸಿರುವ ಕಾರಣ ಏನೆಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ವ್ಯಕ್ತಿ ಮೃತಪಟ್ಟ ನಂತರ ಚಿನ್ನದ ನಾಲಗೆಯನ್ನು ಹಾಕಿದರೆ ಸತ್ತ ನಂತರವೂ ಆ ವ್ಯಕ್ತಿ ಮಾತನಾಡುತ್ತಾರೆ ಎಂಬ ನಂಬಿಕೆ ಈಜಿಪ್ಟ್​ ಜನರಲ್ಲಿ ಇತ್ತಂತೆ. ಇದೇ ಕಾರಣಕ್ಕೆ ಹೀಗೆ ನಾಲಿಗೆ ಇಡಲಾಗಿದೆ ಎಂದು ಈಜಿಪ್ಟ್ ಪ್ರವಾಸೋದ್ಯಮ ಹಾಗೂ ಪುರಾತತ್ವ ಸಚಿವಾಲಯ ತಿಳಿಸಿದೆ.
ಈ ಮಮ್ಮಿಯ ಜತೆಗೇನೇ ಹಲವು ಗೋರಿಗಳಲ್ಲಿ ಮಮ್ಮಿಗಳು ಕೂಡ ದೊರೆತಿವೆ. ದೇಹದ ಇನ್ನಿತರ ಅಂಗಗಳು ನಾಶವಾಗಿದ್ದರೂ, ಮುಖಗಳನ್ನು ಸಂರಕ್ಷಣೆ ಮಾಡಲಾಗಿದೆ. ವ್ಯಕ್ತಿ ಹೇಗಿದ್ದ ಎಂಬುದರ ಗುರುತು ಪತ್ತೆಗೆ ಇದು ಅನುಕೂಲ ಮಾಡಿಕೊಟ್ಟಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಶವದ ಪೆಟ್ಟಿಗೆಯಿಂದ ಎದ್ದುಬಂದು ಮದುವೆಯಾದ ಮದುಮಗಳು- ವೈರಲ್​ ವಿಡಿಯೋ ಇಲ್ಲಿದೆ ನೋಡಿ…

ಆಕ್ಸ್‌ಫರ್ಡ್ ನಿಘಂಟಿನಲ್ಲಿ ಸೇರಿದ ‘ಆತ್ಮನಿರ್ಭರತಾ’: ವರ್ಷದ ಶಬ್ದವಾಗಿ ಆಯ್ಕೆ

ಚಿನ್ನದುರೈ ವೆಡ್ಸ್​ ಶ್ವೇತಾ- ಮದುಮಕ್ಕಳನ್ನು ಆಶೀರ್ವದಿಸಲು ನೀರಿನೊಳಕ್ಕೆ ಧುಮುಕಿ…!

https://www.vijayavani.net/s-nyayadevate-nanna-sahi-illade/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 6 =
Remember me
