ಚೆನ್ನೈ:ಚಿನ್ನದ ಕಳ್ಳಸಾಗಾಣಿಕೆ ಮಾಡಲು ಖದೀಮರು ಏನೆಲ್ಲಾ ಸರ್ಕಸ್​ ಮಾಡಿದರೂ ಕಸ್ಟಮ್ಸ್​ ಅಧಿಕಾರಿಗಳು ಸುಮ್ಮನೇ ಬಿಡುವುದಿಲ್ಲ. ಕಣ್ಣಿಗೆ ಎಣ್ಣೆಬಿಟ್ಟುಕೊಂಡು ಕಳ್ಳರನ್ನು ಸದೆಬಡಿಯಲು ಅಧಿಕಾರಿಗಳು ಕಾಯುತ್ತಿರುತ್ತಾರೆ ಎಂದು ತಿಳಿದಿದ್ದರೂ, ಹುಚ್ಚು ಸಾಹಸ ಮಾಡಿ ಇನ್ನಿಲ್ಲದ ವ್ಯರ್ಥ ಪ್ರಯತ್ನ ಮಾಡುತ್ತಾರೆ ಕಳ್ಳರು.
ಇಂಥದ್ದೇ ಒಂದು ಘಟನೆ ಚೆನ್ನೈನ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಪ್ರತ್ಯೇಕ ಘಟನೆಗಳಲ್ಲಿ ಚೆನ್ನೈ ಕಸ್ಟಮ್ಸ್ ಇಲಾಖೆ 2.53 ಕೋಟಿ ಮೌಲ್ಯದ 5.5 ಕೆಜಿ ಚಿನ್ನ ಮತ್ತು 24 ಲಕ್ಷ ರೂ.ಗಳ ವಿದೇಶಿ ಕರೆನ್ಸಿಯನ್ನು ವಶಪಡಿಸಿಕೊಂಡಿದ್ದು, ಈ ಪ್ರಕರಣದಲ್ಲಿ ಆರು ಪ್ರಯಾಣಿಕರನ್ನು ಬಂಧಿಸಿದೆ.
ಈ ಪೈಕಿ ರಾಮನಾಥಪುರಂ ನಿವಾಸಿ ಮ್ಯಾಗ್ರೂಬ್ ಅಕ್ಬರಲಿ ಮತ್ತು ಚೆನ್ನೈ ನಿವಾಸಿ ಜುಬೈರ್ ಹಸನ್ ರಫಿಯುಥೀನ್ ಅವರ 595 ಗ್ರಾಂ ಚಿನ್ನವನ್ನು ತಮ್ಮ ವಿಗ್​ ಕೆಳಗೆ ಅಡಗಿಸಿಟ್ಟುಕೊಂಡಿದ್ದರು. ಬಾಲ್ಡಿಗಳಾಗಿದ್ದ ಇವರು, ತಮ್ಮ ತಲೆಯ ಮೇಲೆ ಚಿನ್ನವನ್ನು ಇಟ್ಟುಕೊಂಡು ಕೂದಲಿನಂತೆ ಕಾಣುವ ವಿಗ್​ ಧರಿಸಿ ಬಂದಿದ್ದರು. ಇದು ತಮ್ಮ ನಿಜವಾದ ಕೂದಲು ಎಂದುಕೊಂಡು ಅಧಿಕಾರಿಗಳು ಅದನ್ನು ತೆಗೆಸುವುದಿಲ್ಲ ಎಂದು ಅವರು ಅಂದುಕೊಂಡಿದ್ದರು. ಆದರೆ ತನಿಖಾಧಿಕಾರಿಗಳಿಗೆ ಇವೆಲ್ಲಾ ಹೊಸದಲ್ಲವಲ್ಲ. ವಿಗ್​ ತೆಗೆಸಿ ಚಿನ್ನ ವಶಪಡಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ, ಇದೇ ವಿಮಾನದಲ್ಲಿ ಆಗಮಿಸಿದ ತಿರುಚ್ಚಿ ನಿವಾಸಿ ಬಾಲು ಗಣೇಶನ್ ಸಹ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಬಂಧಿಸಲಾಯಿತು. 622 ಗ್ರಾಂ ತೂಕದ ಮೂರು ಕಟ್ಟುಗಳ ಚಿನ್ನದ ಪೇಸ್ಟ್ ಅನ್ನು ಬಾಲು ಅವರ ಗುದನಾಳದಿಂದ ವಶಪಡಿಸಿಕೊಳ್ಳಲಾಗಿದೆ. ಇವರು ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಸಂದೇಹ ಬಂದಿದ್ದರಿಂದ ಗುದನಾಳವನ್ನು ಪರೀಕ್ಷೆ ಮಾಡಿದ ಅಧಿಕಾರಿಗಳು ಅಲ್ಲಿಂದ ಚಿನ್ನ ವಶಪಡಿಸಿಕೊಂಡಿದ್ದಾರೆ.
ಮಗದೊಂದು ಪ್ರಕರಣದಲ್ಲಿ 24 ವರ್ಷದ ಅನ್ಬಜಾಗನ್ ಎಂಬ ಪ್ರಯಾಣಿಕ ಅಂಡರ್​ವೇರ್​ ಹಾಗೂ ಸಾಕ್ಸ್​ನಲ್ಲಿ 1.5 ಕೆಜಿ ತೂಕದ ನಾಲ್ಕು ಪ್ಯಾಕೆಟ್ ಚಿನ್ನದ ಪೇಸ್ಟ್ ಅಡಗಿಸಿಟ್ಟಿಕೊಂಡಿದ್ದ. ಆತನ ಅಂಡರ್​ವೇರ್​ ಮತ್ತು ಸಾಕ್ಸ್​ ಬಿಚ್ಚಿಸಿ ಚಿನ್ನ ವಶಪಡಿಸಿಕೊಂಡು ಎಲ್ಲರನ್ನೂ ಬಂಧಿಸಲಾಗಿದೆ. ಇನ್ನೂ ಒಂದು ಪ್ರಕರಣದಲ್ಲಿ ಇಂಡಿಗೊ ಫ್ಲೈಟ್​ನಲ್ಲಿ ಬಂದಿದ್ದ ಪ್ರಯಾಣಿಕನಿಂದ 43.30 ಲಕ್ಷ ರೂ.ಗಳ ಮೌಲ್ಯದ 933 ಗ್ರಾಂ ತೂಕದ ವಿದೇಶಿ ಗುರುತು ಹೊಂದಿರುವ ಎಂಟು 10 ಟೋಲಾ ಚಿನ್ನದ ಬಾರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಕರೊನಾ ಎರಡನೆಯ ಅಲೆಗೆ ಕಾಲೇಜು ಬಂದ್​ ಆಗಲಿದೆಯೆ? ಇಲ್ಲಿದೆ ನೋಡಿ ಡಿಸಿಎಂ ಸ್ಪಷ್ಟ ಉತ್ತರ…

ಆಟವಾಡುತ್ತ ಧಾನ್ಯದ ಡಬ್ಬದೊಳಗೆ ಹೊಕ್ಕ ಐದು ಕಂದಮ್ಮಗಳು ಹೊರಬಂದರು ಶವವಾಗಿ!

ಮಿಸ್ಡ್ ಕಾಲ್​ನಿಂದ ಶುರುವಾದ ಪರಿಚಯ ಈಗ ಏನೇನೋ ಆಗಿದೆ… ಇದು ನಿಜವಾದ ಪ್ರೀತಿಯೆ? ಹೇಗೆ ತಿಳಿಯಲಿ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 19 =
Remember me
