ಇಸ್ರೇಲ್‌:ಪುಟ್ಟ ದೇಶ ಇಸ್ರೇಲ್‌ ಕೃಷಿಯಲ್ಲಿ ಇದಾಗಲೇ ಇಡೀ ವಿಶ್ವದ ಗಮನ ಸೆಳೆದಿದ್ದು, ಇದೀಗ ತಂತ್ರಜ್ಞಾನದಲ್ಲಿಯೂ ಬಹಳ ಮುಂದುವರೆಯತೊಡಗಿದೆ. ಇದೀಗ ಹೊಸದೊಂದು ಸಾಹಸಕ್ಕೆ ಅದು ಕೈಹಾಕಿದ್ದು, ಗೋಲ್ಡ್‌ ಫಿಷ್‌ಗೆ ವಾಹನ ಚಲಾಯಿಸುವ ತರಬೇತಿಯನ್ನು ನೀಡಿದೆ!
ಬೆನ್ ಗುರಿಯನ್​ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡವು ಅಕ್ವೇರಿಯಂನಲ್ಲಿರುವ ಗೋಲ್ಡ್​ ಫಿಷ್‌ ವಾಹನ ಚಲಾಯಿಸುವಂತೆ ಮಾಡಿದ್ದಾರೆ. ಈ ಮೀನಿಗಾಗಿ ಫಿಷ್‌​ ಆಪರೇಟೆಡ್​ ವೆಹಿಕಲ್​ ನಿರ್ಮಿಸಲಾಗಿದೆ. ಅದರ ಮೇಲೆ ಅಕ್ವೇರಿಯಂ ಇಟ್ಟರೆ ಮೀನುಗಳು ಅದನ್ನು ಚಲಾಯಿಸುತ್ತವೆ! ಒಟ್ಟು ಆರು ಗೋಲ್ಡ್‌ಫಿಷ್‌ಗಳಿಗೆ ಈ ತರಬೇತಿ ನೀಡಲಾಗಿದೆ. ಬಿಹೇವಿಯರಲ್​ ಬ್ರೇನ್​ ರಿಸರ್ಚ್​ ಜರ್ನಲ್​ನಲ್ಲಿ ಈ ಬಗ್ಗೆ ದಾಖಲು ಮಾಡಿರುವ ವಿಜ್ಞಾನಿಗಳು ಮೀನು ಹೇಗೆ ತರಬೇತಿ ಪಡೆಯುತ್ತವೆ ಎಂಬುದನ್ನು ವಿವರಿಸಿದ್ದಾರೆ.
ಮೀನುಗಳ ಚಲನೆಯನ್ನು ಪತ್ತೆಹಚ್ಚಲು ಕ್ಯಾಮರವಾವನ್ನು ಅಳವಡಿಸಲಾಗಿದೆ. ಮೀನುಗಳು ಮೂರರಿಂದ ನಾಲ್ಕು ಮೀಟರ್​ ಕೋಣೆಯಲ್ಲಿ ನ್ಯಾವಿಗೇಟ್​ ಮಾಡುವುದನ್ನು ಮೊದಲು ಕಲಿತಿವೆ. ನಂತರ ಕೆಲವು ದಿನಗಳ ತರಬೇತಿಯ ಬಳಿಕ ಮೀನುಗಳು ಯಶಸ್ವಿಯಾಗಿ ವಾಹನವನ್ನು ಸರಿಯಾದ ಮಾರ್ಗದಲ್ಲಿ ಚಲಾಯಿಸುವುದನ್ನು ಕಲಿತಿವೆ ಎಂದಿದ್ದಾರೆ ಅವರು. ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದ್ದು, ಅಚ್ಚರಿ ಮೂಡಿಸುವಂತಿದೆ.
ಇಲ್ಲಿದೆ ನೋಡಿ ವಿಡಿಯೋ:
Hey@TheEllenShow, we wanted to say that BGU can help Dory. Our interdisciplinary researchers' team (@OhadBenShahar,@ronen_segev) discovered that a goldfish's navigational ability supersedes its watery environs, even if they were interrupted in the middle. See it in the video.pic.twitter.com/knEPrEWeov
— Ben-Gurion University of the Negev (@bengurionu)January 5, 2022

ಲುಡೋ ಆಡುವಾಗ ಗಾಳ ಹಾಕಿದ ಪಾಕ್‌ ಯುವಕ: ಪ್ರಿಯಕರನ ಸಿಗಲು ಮಗುವನ್ನೂ ಬಿಟ್ಟುಹೋಗಿ ಸಿಕ್ಕಿಬಿದ್ದ ಅಮ್ಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 12 =
Remember me
