ನೆದರ್ಲೆಂಡ್‌:ಗೂಗಲ್‌ಮ್ಯಾಪ್‌ನಲ್ಲಿ ಏನೋ ಹುಡುಕಲು ಹೋದಾಗ ಬಯಲು ಶೌಚಕ್ಕೆ ಹೋದ ವ್ಯಕ್ತಿಗೆ ಆತನೇ ಕಂಡರೆ ಹೇಗಾಗಬೇಡ? ಸ್ಟ್ರೀಟ್‌ಮ್ಯಾಪ್‌ ಮೂಲಕ ಯಾವುದೋ ದಾರಿಯನ್ನು ಸರ್ಚ್‌ ಮಾಡಲು ಹೋದಾಗ ಅಲ್ಲಿ ಹೆಂಡತಿ ಪರಪುರುಷನ ಜತೆ ಇರುವುದನ್ನು ಕಂಡರೆ ಆ ಪತಿಮಹಾಶಯನಿಗೆ ಇನ್ನೇನಾಗಲಿಕ್ಕಿಲ್ಲ!
ಇಂಥ ಎರಡು ಪ್ರತ್ಯೇಕ ಘಟನೆಗಳು ನಡೆದೇ ಹೋಗಿವೆ.
ಮೊದಲನೆಯದ್ದು ಬಯಲು ಶೌಚದ ವ್ಯಕ್ತಿ ಸೆರೆ ಸಿಕ್ಕ ಬಗೆ ಎಂಥವರಿಗೂ ಮುಜುಗರ ತರುವಂಥದ್ದೇ ಆಗಿದೆ. ಬಯಲು ಶೌಚ ಎಂದಾಕ್ಷಣ ಎಲ್ಲರ ದೃಷ್ಟಿಯೂ ಭಾರತದತ್ತವೇ ನೆಡುತ್ತದೆ. ಆದರೆ ವಾಸ್ತವದಲ್ಲಿ ಹಲವಾರು ದೇಶಗಳಲ್ಲಿ ಈ ಸಮಸ್ಯೆ ಇದ್ದು, ಈಗ ಗೂಗಲ್‌ನಲ್ಲಿ ಸಿಕ್ಕಿಬಿದ್ದಿರುವ ಘಟನೆ ನಡೆದಿರುವುದು ನೆದರ್‌ರ್ಲೆಂಡ್‌ನಲ್ಲಿ.
ಇಲ್ಲಿಯ ವ್ಯಕ್ತಿಯಲ್ಲಿ ಡಚ್‌ ನಗರವಾದ ರುಸೆಂಡಲ್ ಬಳಿಯ ವಿಶಾಲವಾಗಿರುವ ಬಯಲಲ್ಲಿ ಮಲವಿಸರ್ಜನೆ ಮಾಡುತ್ತಿದ್ದ. ಅದೇ ಸಂದರ್ಭದಲ್ಲಿ ಆ ಜಾಗದ ಫೋಟೋಗ್ರಫಿ ಮಾಡುತ್ತಿದ್ದ ಗೂಗಲ್‌ ಮ್ಯಾಪ್‌ ಬಳಕೆದಾರನೊಬ್ಬ ಸುಮ್ಮನೆ ಇರಲಾರದೇ ಇದರ ಫೋಟೋ ತೆಗೆದಿದ್ದಾನೆ. ಅಷ್ಟಕ್ಕೂ ಸುಮ್ಮನಾಗದ ಆತ ಅದನ್ನು ಸಾಮಾಜಿಕ ಜಾಲತಾಣ ರೆಡ್‌ಇಟ್‌ನಲ್ಲಿ ಶೇರ್‌ ಮಾಡಿದ್ದಾನೆ! ವಿಶಾಲವಾಗಿರುವ ‘ಹುಲ್ಲುಗಾವಲು ಪ್ರದೇಶದಲ್ಲಿ ಮಲ ವಿಸರ್ಜನೆ ಮಾಡುತ್ತಿರುವುದನ್ನು ನಾನು ನೋಡಿದೆ’ ಎಂದು ಶೀರ್ಷಿಕೆ ಕೊಟ್ಟು ಇದನ್ನು ಶೇರ್‌ ಮಾಡಿದ್ದು, ಹುಚ್ಚು ಜನರು ಅದನ್ನು ಸಿಕ್ಕಾಪಟ್ಟೆ ಮರುಶೇರ್‌ ಮಾಡಿದ್ದಾರೆ.
ಗೂಗಲ್‌ನಲ್ಲಿ ಈ ಚಿತ್ರ ಎಷ್ಟು ಫೇಮಸ್‌ ಆಗಿದೆ ಎಂದರೆ ಈ ಭಾಗದ ಗೂಗಲ್‌ಮ್ಯಾಪ್‌ ಸರ್ಚ್‌ ಮಾಡುವಾಗ ಈ ವ್ಯಕ್ತಿ ಶೌಚ ಮಾಡುತ್ತಿರುವ ಫೋಟೋ ಕಾಣಿಸುತ್ತದೆ.
ಇದು ಒಂದೆಡೆಯಾದರೆ, ಕಳೆದ ವರ್ಷ ಇದೇ ರೀತಿ ಗೂಗಲ್‌ಮ್ಯಾಪ್‌ನ ಸ್ಟ್ರೀಟ್‌ ಮ್ಯಾಪ್‌ ಹುಡುಕುವಾಗ ಪತ್ನಿಯ ಅಕ್ರಮ ಸಂಬಂಧ ಬಯಲಿಗೆ ಬಂದ ಕುತೂಹಲದ ಘಟನೆಯೊಂದು ಪೆರುವಿನಲ್ಲಿ ನಡೆದಿತ್ತು.
ಇಲ್ಲಿರುವ ಸುಪ್ರಸಿದ್ಧ ಸೇತುವೆಯನ್ನು ಹೇಗೆ ತಲುಪಬೇಕು ಎಂದು ಗೂಗಲ್‌ಮ್ಯಾಪ್‌ನ ಸ್ಟ್ರೀಟ್‌ವ್ಯೂನಲ್ಲಿ ವ್ಯಕ್ತಿಯೊಬ್ಬರು ಹುಡುಕುತ್ತಿದ್ದರು. ಆಗ ಅವರಿಗೆ ತಮಗೆ ಪರಿಚಿತ ಇರುವ ಮಹಿಳೆಯೊಬ್ಬರ ಮುಖ ಕಂಡಿದೆ. ಈ ಮಹಿಳೆ ತಮಗೆ ಪರಿಚಯಸ್ಥಳು ಹೌದೋ ಅಲ್ಲವೋ ಎಂದು ನೋಡಲು ಝೂಮ್‌ ಮಾಡಿದ್ದಅರೆ. ಬಿಳಿ ಟಾಪ್, ಜೀನ್ಸ್ ಮತ್ತು ಹೀಲ್ಸ್ ಧರಿಸಿದ್ದ ಆಕೆಯನ್ನು ಝೂಮ್‌ ಮಾಡಿ ನೋಡಿದಾಗ ಅವರಿಗೆ ಅಚ್ಚರಿಯಾಗಿಬಿಟ್ಟಿದೆ. ಏಕೆಂದರೆ ಆ ಮಹಿಳೆ ಇವರಿಗೆ ಪರಿಚಯಸ್ಥಳೇ ಆಗಿದ್ದಳು. ಅಚ್ಚರಿಯಾಗಲು ಕಾರಣ, ಬೆಂಚ್‌ ಮೇಲೆ ಕುಳಿತು ಆಕೆಯ ತೊಡೆಯ ಮೇಲೆ ಮಲಗಿದ್ದ ಪುರುಷನೊಬ್ಬನ ತಲೆ ಕೂದಲನ್ನು ಆಕೆ ಸವರುತ್ತಿದ್ದಳು. ಆದರೆ ಆ ಪುರುಷ ಆಕೆಯ ಪತಿಯಾಗಿರಲಿಲ್ಲ.
ದುರದೃಷ್ಟವಶಾತ್‌ ಆಕೆಯ ಪತಿ ಈ ವ್ಯಕ್ತಿಯ ಸ್ನೇಹಿತ. ಆತ ತಡ ಮಾಡದೇ ಈ ಫೋಟೋವನ್ನು ಪತಿಗೆ ಕಳುಹಿಸಿದ್ದಾರೆ. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಆತ ಕೂಡಲೇ ಪತ್ನಿಗೆ ವಿಚ್ಛೇದನ ನೀಡಿದ್ದಾನೆ!
ಎಲ್ಲರೂ ಬಹಳ ಜಾಗೃತೆಯಿಂದ ಇರಬೇಕು ಎನ್ನುವುದು ಇವೆರಡು ಪ್ರಕರಣಗಳು ಕಲಿಸುತ್ತವೆ. ಕಾರುಗಳು, ಬೈಕುಗಳು ಮತ್ತು ಹಿಮವಾಹನಗಳು ಸೇರಿದಂತೆ ಗೂಗಲ್ ಸ್ಟ್ರೀಟ್ ವ್ಯೂ ವಾಹನಗಳ 360 ಡಿಗ್ರಿ ಕ್ಯಾಮೆರಾಗಳೊಂದಿಗೆ ವಿಶ್ವಾದ್ಯಂತ ಸ್ಥಳಗಳನ್ನು ಸೆರೆಹಿಡಿದಿದೆ.
https://www.vijayavani.net/s-nyayadevate-hendthi-somari/
ತುಂಬು ಗರ್ಭಿಣಿಯನ್ನು ಉರಿಬಿಸಿಲಲ್ಲಿ ನಡೆಸಿದ ಲೇಡಿ ಪೊಲೀಸ್‌ ಇನ್ಸ್‌ಪೆಕ್ಟರ್‌! ಇಲಾಖೆಯಿಂದ ಅಮಾನತು

ತೈಲ ಸಂಸ್ಕರಣಾ ಘಟಕದಲ್ಲಿ ಭಯಾನಕ ಸ್ಫೋಟ: ಮುಗಿಲಿಗೆ ಚಿಮ್ಮಿದ ಅಗ್ನಿಯ ಜ್ವಾಲೆ: ಹಲವರು ನಾಪತ್ತೆ

ಚೀನಾದ ಲಸಿಕೆ ಪಡೆದು ಪ್ರಧಾನಿ ಕರೊನಾ ಸೋಂಕು ತರಿಸಿಕೊಂಡ ಬೆನ್ನಲ್ಲೇ ಈಗ ರಾಷ್ಟ್ರಪತಿ ಸರದಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × two =
Remember me
