ಗೋರಖ್​ಪುರ (ಉತ್ತರ ಪ್ರದೇಶ):ಮಸೀದಿಗಳನ್ನು ಕೆಡವುತ್ತಿರುವ ವೇಳೆ ಹಿಂದೂ ದೇವಾಲಯಗಳ ಕುರುಹು ಸಿಗುತ್ತಿರುವ ಘಟನೆ ಇತ್ತೀಚೆಗೆ ನಡೆಯುತ್ತಿರುವ ನಡುವೆಯೇ, ಇದೀಗ ಅಚ್ಚರಿ ಬೆಳವಣಿಗೆಯೊಂದರಲ್ಲಿ ಉತ್ತರ ಪ್ರದೇಶದ ಗೋರಖ್​ಪುರದ ಗಗಹಾ ಪ್ರದೇಶದ ಜಗದೀಶ್‌ಪುರ ಭಾಲುವಾನ್ ಗ್ರಾಮದ ಮುಸ್ಲಿಂ ಕುಟುಂಬದ ಮನೆಯನ್ನು ಅಗೆದಾಗ ಅಲ್ಲಿ ದೇವಾಲಯದಲ್ಲಿರುವ ಅನೇಕ ವಸ್ತುಗಳು ದೊರೆತಿವೆ! ಇದೀಗ ಎಲ್ಲೆಡೆ ಭಾರಿ ಸಂಚಲನ ಸೃಷ್ಟಿಸಿದೆ.
ಗೋರಖ್‌ಪುರದ ಜಗದೀಶ್‌ಪುರ ಭಾಲುವಾನ್‌ ಗ್ರಾಮದ ನಯಾ ಚೌರಾಹಾ ನಿವಾಸಿ ನೂರ್‌ ಮೊಹಮ್ಮದ್‌ ಅವರ ಮಕ್ಕಳಿಗೆ ಮಕ್ಕಳಾಗಲಿಲ್ಲ ಎನ್ನುವ ಕಾರಣಕ್ಕೆ ತಂತ್ರದ ಮೊರೆ ಹೋದ ಸಂದರ್ಭದಲ್ಲಿ ಮನೆಯನ್ನು ಅಗೆದಾಗ ಮಾಡಿದಾಗ ದೇವಾಲಯದ ಘಂಟೆ, ಶಂಖ, ತ್ರಿಶೂಲ, ಕಬ್ಬಿಣ ಮತ್ತು ಹಿತ್ತಾಳೆಯಿಂದ ಮಾಡಿದ ಅನೇಕ ಪೂಜಾ ಸಾಮಗ್ರಿಗಳು ದೊರೆತಿವೆ. ಮಾತ್ರವಲ್ಲದೇ ದೊಡ್ಡ ದೊಡ್ಡ ಮೂಳೆಗಳೂ ಕಂಡು ಬಂದಿರುವುದು ಭಾರಿ ಆತಂಕಕ್ಕೂ ಕಾರಣವಾಗಿದೆ. ಇದರ ಜತೆ ಚಿನ್ನದ ನಾಣ್ಯಗಳೂ ಸಿಕ್ಕಿವೆ ಎನ್ನಲಾಗುತ್ತಿದೆ.
ಸದ್ಯ ಪುರಾತತ್ವ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.
ಏನಿದು ಘಟನೆ?ನೂರ್‌ ಮೊಹಮ್ಮದ್‌ ಅವರ ಯಾವುದೇ ಮಕ್ಕಳಿಗೆ ಇದುವರೆಗೂ ಮಕ್ಕಳಾಗಲಿಲ್ಲ. ಈ ಬಗ್ಗೆ ಅವರು ಮುಸ್ಲಿಂ ಧರ್ಮಗುರು ಅವರ ಮೊರೆ ಹೋದಾಗ, ಮನೆಯಲ್ಲಿಯೇ ದೋಷವಿದೆ ಎಂದು ಅವರು ಹೇಳಿದರು. ‘ನಿಮ್ಮ ಮನೆಯಲ್ಲಿ ಯಾರೋ ಮಾಟ ಮಾಡಿಸಿ ಏನನ್ನೋ ಹೂತುಹಾಕಿದ್ದಾರೆ, ಅನುಮಾನಾಸ್ಪದ ವಸ್ತುಗಳನ್ನು ಮನೆಯಲ್ಲಿ ಹೂತು ಹಾಕಿರುವುದರಿಂದ ಮನೆಯ ನೆಮ್ಮದಿಗೆ ಭಂಗ ಉಂಟಾಗಿದೆ’ ಎಂದರು.
ಈ ಹಿನ್ನೆಲೆಯಲ್ಲಿ ನೂರ್​ ಮೊಹಮ್ಮದ್​ ಅವರ ಅಳಿಯ ಆಲಂ ಶೇಖ್ ಅವರು ಮನೆಯ ಕೆಲವು ಜಾಗಗಳನ್ನು ಅಗೆಯಲು ಶುರು ಮಾಡಿದ್ದರು. ಸುಮಾರು ನಾಲ್ಕೈದು ಅಡಿಗಳಷ್ಟು ಮಣ್ಣನ್ನು ಅಗೆದಾಗ ಮೊದಲು ಮಡಕೆ ಪತ್ತೆಯಾಗಿದೆ. ಹೀಗೆ ಅಗೆಯುತ್ತಾ ಹೋದಂತೆ ದೇವಾಲಯದ ಸಾಮಗ್ರಿಗಳು, ಚಿನ್ನದ ನಾಣ್ಯಗಳು ಜತೆಗೆ ದಪ್ಪ ದಪ್ಪ ಮೂಳೆಗಳು ಪತ್ತೆಯಾಗಿವೆ! ಕೂಡಲೇ ಈ ವಿಷಯ ಅಕ್ಕ ಪಕ್ಕದ ಮನೆಯವರಿಗೂ ತಲುಪಿ ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಕೂಡಲೇ ಪೊಲೀಸರು ಪುರಾತತ್ವ ಇಲಾಖೆಗೆ ಈ ಮಾಹಿತಿ ನೀಡಿ ಸ್ಥಳಕ್ಕೆ ಧಾವಿಸಿದ್ದಾರೆ. ದೇಗುಲದ ಸಾಮಗ್ರಿಗಳನ್ನು ಪರಿಶೀಲಿಸಿರುವ ಬೌದ್ಧ ವಸ್ತುಸಂಗ್ರಹಾಲಯದ ಉಪ ನಿರ್ದೇಶಕ ಮನೋಜ್ ಗೌತಮ್ ಅವರು, ಈ ಸಾಮಗ್ರಿಗಳು ಕ್ರಿ.ಶ 18ರದ್ದಾಗಿರಬಹುದೆಂದು ಊಹಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿದೆ. ಸದ್ಯ ಎಲ್ಲಾ ಸಾಮಾನುಗಳು ಗಗಹ ಪೊಲೀಸ್ ಠಾಣೆಯ ಸುಪರ್ದಿಯಲ್ಲಿವೆ (ಏಜೆನ್ಸೀಸ್​)
ಬುರ್ಖಾ ತೆಗೆಯುತ್ತಿದ್ದಂತೆಯೇ ಮೂರ್ಛೆ ಹೋಗೋ ಬೆಂಗಳೂರಿನ ಚಿನ್ನದಂಗಡಿವರು! ಬ್ಲ್ಯಾಕ್​ ಮ್ಯಾಜಿಕ್​ ದೃಶ್ಯ ಸಿಸಿಟಿವಿಯಲ್ಲಿ ಸೆರೆ…

ಅಸಲಿ ದಾಖಲೆ ನೋಡಿ ಜಮೀನು ಕೊಳ್ತೀರಾ? ಈ ಖತರ್ನಾಕ್​ ಗ್ಯಾಂಗ್​ನ​ ಭಯಾನಕ ಸ್ಟೋರಿ ಕೇಳಿ…

ಪೊಲೀಸ್​ ಠಾಣೆ ಕಾಯಲು ನಾಯಿಯ ಬದಲು ಹಾವುಗಳು! ಕೇರಳದಲ್ಲಿ ಹೀಗೊಂದು ಯಶಸ್ವಿ ಪ್ರಯೋಗ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 − 5 =
Remember me
