ನವದೆಹಲಿ:ಯಾವುದೇ ಅಡ್ಡ ಪರಿಣಾಮಗಳನ್ನು ಬೀರದ ಭಾರತೀಯ ಪುರಾತನ ಪದ್ಧತಿಯ ಆಯುರ್ವೇದ ಹಾಗೂ ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯಾಗಿರುವ ಹೋಮಿಯೋಪಥಿ, ಯುನಾನಿ ಇವುಗಳ ಪ್ರಯೋಜನಗಳ ಕುರಿತು ಜನರಿಗೆ ಇದೀಗ ಅರಿವಿಗೆ ಬರುತ್ತಿರುವ ನಡುವೆಯೇ, ಜೀವವನ್ನು ಕಸಿಯುತ್ತಿರುವ ಕೆಲವು ಅಲೋಪಥಿ (ಇಂಗ್ಲಿಷ್​ ಮೆಡಿಸಿನ್​) ಕೇಂದ್ರ ಸರ್ಕಾರ ಬ್ಯಾನ್​ ಮಾಡಿದೆ.
ದಿನನಿತ್ಯವೂ ಬಳಕೆ ಮಾಡುವ ಹಲವಾರು ಔಷಧಗಳ ಬಗ್ಗೆ ಸಂಶೋಧನೆಗಳು ನಡೆಯುತ್ತಿರುವಂತೆಯೇ ಹೀಗೆ ನಿಷೇಧ ಮಾಡುತ್ತಿರುವುದು ಇದೇ ಮೊದಲಲ್ಲ. ಪ್ರಾಣಕ್ಕೆ ಕುತ್ತು ತರುವ, ಮಾರಣಾಂತಿಕ ಕಾಯಿಲೆಗಳಿಗೆ ಆಹ್ವಾನ ನೀಡುವ ಔಷಧಗಳನ್ನು ಸರ್ಕಾರ ನಿಷೇಧಿಸುತ್ತಲೇ ಬಂದಿದ್ದು, ಇದೀಗ ಪುನಃ 26 ಔಷಧಗಳನ್ನು ನಿಷೇಧಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯ ರಾಷ್ಟ್ರೀಯ ಅತ್ಯಾವಶ್ಯಕ ಔಷಧಗಳ ಪಟ್ಟಿಯನ್ನು (ಎನ್​ಎಲ್​ಇಎಂ) ಮಂಗಳವಾರ ಪರಿಷ್ಕರಿಸಿದ್ದು, 26 ಔಷಧಗಳನ್ನು ಕೈಬಿಟ್ಟು ಪುನಃ 34 ಹೊಸ ಔಷಧಗಳನ್ನು ಸೇರಿಸಿದೆ.
ಕ್ಯಾನ್ಸರ್​ಗೆ ಕಾರಣವಾಗುತ್ತದೆಂಬ ನೆಲೆಯಲ್ಲಿ ಆ್ಯಸಿಡಿಟಿ ಮತ್ತು ಹೊಟ್ಟೆ ಸಂಬಂಧಿತ ವ್ಯಾಧಿಗಳಿಗೆ ಆಗಾಗ ಬಳಸುವ ಹಾಗೂ ರ‍್ಯಾನ್​ಟಾಕ್​, ಝಿನೆಟಾಕ್​ ಮತ್ತು ಆಸಿಲಾಕ್​ ಬ್ರ್ಯಾಂಡ್​​ನಲ್ಲಿ ಮಾರಾಟ ಮಾಡಲಾಗುತ್ತಿರುವ ರ‍್ಯಾಂಟಿಡೈನ್​ ಅನ್ನು ಅತ್ಯಾವಶ್ಯಕ್ಯ ಮದ್ದುಗಳ ಪಟ್ಟಿಯಿಂದ ಕೈ ಬಿಡಲಾಗಿದೆ. ಕ್ಯಾನ್ಸರ್​ಗೆ ಕಾರಣವಾಗುತ್ತದೆ ಎಂಬ ಕಳವಳದ ಹಿನ್ನೆಲೆಯಲ್ಲಿ ಇದಕ್ಕೆ ಕೊಕ್​ ನೀಡಲಾಗಿದೆ.
ಅದೇ ಇನ್ನೊಂದೆಡೆ, ಎಂಡೋಕೆನ್​ ಔಷಧಗಳು, ಗರ್ಭನಿರೋಧಕಗಳು, ಇನ್ಸುಲಿನ್​ ಗ್ಲಾರ್​ಜಿನ್​. ಉಸಿರಾಟದ ಮೇಲೆ ಪರಿಣಾಮ ಬೀರುವ ಮಾಂಟೆಲುಕಾಸ್ಟ್​. ದೃಷ್ಟಿದೋಷ ನಿವಾರಣೆ ಸಂಬಂಧಿತ ಔಷಧ ಲ್ಯಾಟನೊಪ್ರಾಸ್ಟ್​. ಹೃದಯಸಂಬಂಧಿತ ಡಾಬಿಗಾರ್ಟನ್​ ಮತ್ತು ಟೆನೆಕ್ಟೆಪ್ಲೇಸ್​ ಔಷಧಗಳನ್ನು ಸೇರ್ಪಡೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನಸುಖ್​ ಮಾಂಡವೀಯ ತಿಳಿಸಿದ್ದಾರೆ.ಕ್ಯಾನ್ಸರ್​ಗೆ ಮಾರಕ ಎಂದು ಕೈಬಿಟ್ಟಿರುವ ಔಷಧಗಳ ಪಟ್ಟಿ ಈ ರೀತಿ ಇದೆ…AlteplaseAtenololBleaching PowderCapreomycinCetrimideChlorpheniramineDiloxanide furoateDimercaprolErythromycinEthinylestradiolEthinylestradiol(A) + Norethisterone (B)GanciclovirKanamycinLamivudine (A) + Nevirapine (B) + Stavudine (C)LeflunomideMethyldopaNicotinamidePegylated interferon alfa 2a, Pegylated interferon alfa 2bPentamidinePrilocaine (A) + Lignocaine (B)ProcarbazineRanitidineRifabutinStavudine (A) + Lamivudine (B)SucralfateWhite Petrolatu
ಟಾಟಾ ಗ್ರೂಪ್ ಮಾಜಿ ಅಧ್ಯಕ್ಷ ಸೈರಸ್ ಮಿಸ್ತ್ರಿ ಸಾವಿಗೆ ಕಾರು ಕಾರಣನಾ? ಹಾಂಗ್​ಕಾಂಗ್​​ನಿಂದ ಬಂದ ತಜ್ಞರ ತಂಡ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 2 =
Remember me
