ಮುಂಬೈ:ವಿಶ್ವಾಸಮತ ಯಾಚನೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬುಧವಾರ ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ. ಇದರೊಂದಿಗೆ ಮಹಾ ರಾಜಕೀಯ ಬಿಕ್ಕಟ್ಟಿಗೆ ಬಹುತೇಕ ತೆರೆ ಬಿದ್ದಂತಾಗಿದೆ.
ಸತತ ನಾಲ್ಕುಗಂಟೆಗಳ ಕಾಲ ನಡೆದ ವಾದ- ಪ್ರತಿವಾದದ ಬಳಿಕ ಸುಪ್ರೀಂಕೋರ್ಟ್​ ರಾತ್ರಿ 9.15 ರ ಸುಮಾರಿಗೆ ತನ್ನ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ, ಠಾಕ್ರೆ ರಾತ್ರಿ 9:30ಕ್ಕೆ ಫೇಸ್​ಬುಕ್​ ಲೈವ್​ಗೆ ಬಂದು ರಾಜೀನಾಮೆ ಘೋಷಿಸಿದ್ದರು.
ಇದೀಗ ಅಧಿಕಾರ ಕಳೆದುಕೊಂಡ ಹಿನ್ನೆಲೆಯಲ್ಲಿ ತಾವೇ ಕಾರು ಚಾಲನೆ ಮಾಡಿಕೊಂಡು ರಾಜಭವನಕ್ಕೆ ಬಂದ ಠಾಕ್ರೆ ರಾಜ್ಯಪಾಲ ಭಗತ್​ಸಿಗ್ ಕೋಶಿಯಾರಿಗೆ ತಮ್ಮ ರಾಜೀನಾಮೆಪತ್ರವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ರಶ್ಮಿ ಮತ್ತು ಮಾಜಿ ಸಚಿವರು ಹಾಜರಿದ್ದರು. ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿರುವುದು ವರದಿಯಾಗಿದೆ. ಆದರೆ ಮುಂದಿನ ವ್ಯವಸ್ಥೆ ಆಗುವವರೆಗೂ ಉಸ್ತುವಾರಿ ನೋಡಿಕೊಳ್ಳುವಂತೆಯೂ ಸೂಚಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಆದೇಶದ ಪ್ರಕಾರ ಈಗ ವಿಶ್ವಾಸಮತ ಪರೀಕ್ಷೆಯ ಅಗತ್ಯವಿಲ್ಲ, ಆದ್ದರಿಂದ ಇಂದಿನ ವಿಶೇಷ ಅಧಿವೇಶನವನ್ನು ಕರೆಯಲಾಗುವುದಿಲ್ಲ ಎಂದು ಮಹಾರಾಷ್ಟ್ರ ವಿಧಾನಸಭೆ ಕಾರ್ಯದರ್ಶಿ ರಾಜೇಂದ್ರ ಭಾಗವತ್ ಅವರು, ಎಲ್ಲ ರಾಜ್ಯದ ಶಾಸಕರಿಗೆ ಮಾಹಿತಿ ರವಾನಿಸಿದ್ದಾರೆ.
ಮೊದಲು ರುಂಡ ಕತ್ತರಿಸಿ, ಇದು ದೇವರ ನಿಯಮ ಎಂದೇ ಹೇಳಿಕೊಡುತ್ತಾರೆ: ರಾಜ್ಯಪಾಲ ಆರೀಫ್ ಖಾನ್​

‘ಆ ಇನ್ಸ್‌ಪೆಕ್ಟರ್‌ನ ರೌಡಿಸಂ ನನ್ನತ್ರ ನಡಿಯಲ್ಲ, ಎಲ್ಲಾ ಮಾಡೇ ಬಂದವ ನಾನು… ಮೂರನೇ ಕಣ್ಣು ಬಿಟ್ರೆ ಅಷ್ಟೇ..’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + 12 =
Remember me
