ಕಾಬುಲ್​:ಇಡೀ ಅಫ್ಘಾನಿಸ್ತಾನವನ್ನು ತಮ್ಮ ಕಂಟ್ರೋಲ್​ಗೆ ತೆಗೆದುಕೊಂಡ ನಂತರ ಅಫ್ಘಾನಿಸ್ತಾನದಲ್ಲಿ ಇದೀಗ ತಾಲಿಬಾನಿಗಳ ಆಡಳಿತ ಶುರುವಾಗಿದೆ. ಇದಾಗಲೇ ಕಂಡಕಂಡವರ ರಕ್ತ ಹರಿಸಿ, ಮಹಿಳೆ, ಮಕ್ಕಳ ಮೇಲೆ ಅತ್ಯಾಚಾರ ಎಸಗಿ ಕೇಕೇ ಹಾಕಿದ ಈ ತಾಲಿಬಾನಿಗಳು ಹೇಳಿದಂತೆ ಕೇಳುವ ಪರಿಸ್ಥಿತಿ ಸದ್ಯ ಅಫ್ಘಾನಿಸ್ತಾನದಲ್ಲಿದೆ.
ಇವರ ಕಪಿಮುಷ್ಠಿಯಲ್ಲಿ ಸಿಲುಕಿರುವ ಅಫ್ಘಾನಿಸ್ತಾನಿಗಳು ಕ್ಷಣಕ್ಷಣವೂ ಜೀವ ಭಯದಿಂದ ಇರುವ ಪರಿಸ್ಥಿತಿ ಇದೆ. ಇಡೀ ಅಫ್ಘಾನಿಸ್ತಾನ ನಿರ್ಜನವಾಗಿರುವ ನಡುವೆಯೇ ತಾಲಿಬಾನಿಗಳು ಇದೀಗ ಸರ್ಕಾರಿ ನೌಕರರಿಗೆ ಕ್ಷಮಾದಾನ ಕೊಟ್ಟಿದ್ದೇವೆ ಎಂದು ಘೋಷಣೆ ಮಾಡಿದ್ದಾರೆ.
ಹೆಣ್ಣುಮಕ್ಕಳು ಹೊರಗಡೆ ಬರುವಂತಿಲ್ಲ, ಬುರ್ಖಾ ಧರಿಸಿ ಮನೆಯಲ್ಲಿಯೇ ಇರಬೇಕು ಎಂದು ಇದಾಗಲೇ ಘೋಷಣೆ ಮಾಡಿರುವ ತಾಲಿಬಾನಿಗಳು ಸರ್ಕಾರದ ನೌಕರಿಯಲ್ಲಿರುವ ಪುರುಷರಿಗೆ ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಆದೇಶಿಸಿದ್ದಾರೆ. ಆಡಳಿತ ಯಂತ್ರ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಉದ್ಯೋಗ ಮಾಡುವುದು ಅನಿವಾರ್ಯವಾಗಿದೆ. ಇಲ್ಲದಿದ್ದರೆ ದೇಶದ ಬೊಕ್ಕಸಕ್ಕೆ ಹೊಡೆತ ಬೀಳಲಿದೆ ಎಂದಿರುವ ತಾಲಿಬಾನಿಗಳು ಸರ್ಕಾರಿ ನೌಕರರಿಗೆ ಕ್ಷಮಾದಾನ ಮಾಡಿದ್ದೇವೆ. ಅವರು ಹೆದರುವ ಅಗತ್ಯವಿಲ್ಲ. ಧೈರ್ಯದಿಂದ ಬಂದು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಹೇಳಿದ್ದಾರೆ.
ಮೂರು ಬಾರಿ ಕೊಲ್ಲಲು ಪ್ರಯತ್ನಿಸಿದ್ದಾರೆ- ಕಚೇರಿಯಲ್ಲಿಯೇ ಕುಳಿತು ಅವರಿಗಾಗಿ ಕಾಯುತ್ತಿದ್ದೇನೆ; ಏಕೆಂದರೆ ನಾನು ಹೆಣ್ಣು…

‘ಕಚೇರಿ ಸುತ್ತುವರೆದಿದ್ದರು, ಬುರ್ಖಾ ಹಾಕದವರನ್ನು ಕೊಲ್ಲುತ್ತಿದ್ದರು, ಜೀವ ಕೈಯಲ್ಲಿ ಹಿಡಿದು ಓಡಿದೆ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 1 =
Remember me
