ಪ್ರಯಾಗ್​ರಾಜ್​ (ಉತ್ತರ ಪ್ರದೇಶ):ಪಟಾಕಿಯಿಂದ ಒಂದೆಡೆ ವಾಯುಮಾಲಿನ್ಯ ಹೆಚ್ಚುತ್ತಿದೆ ಎನ್ನುವ ಕಾರಣಕ್ಕೆ ಹಲವು ಕಡೆಗಳಲ್ಲಿ ಅದನ್ನುಬ್ಯಾನ್​ ಮಾಡಿದ್ದರೆ, ಪಟಾಕಿಯಿಂದಾಗುತ್ತಿರುವ ಅವಘಡಗಳು ಇನ್ನೊಂದೆಡೆ.
ಪ್ರತಿಸಲ ದೀಪಾವಳಿಯ ಸಮಯದಲ್ಲಿ ಅದೆಷ್ಟೋ ಮಕ್ಕಳು ಪಟಾಕಿ ಸಿಡಿತದಿಂದಾಗಿ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಈ ಬಾರಿ ಪಟಾಕಿ ಬಿಜೆಪಿ ಸಂಸದೆ ರೀಟಾ ಬಹುಗುಣ ಜೋಶಿ ಅವರ 8 ವರ್ಷದ ಮೊಮ್ಮಗಳನ್ನು ಬಲಿ ಪಡೆದಿದೆ!
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಈ ದುರ್ಘಟನೆಯಲ್ಲಿ ರೀಟಾ ಬಹುಗುಣ ಅವರ ಮಗ ಮಯಾಂಕ್ ಜೋಶಿಯವರ ಮಗಳು ಮೃತಪಟ್ಟಿದ್ದಾಳೆ. ರೀಟಾ ಅವರು ಪ್ರಯಾಗ್‌ರಾಜ್‌ ಸಂಸದೆ. ಬಾಲಕಿ ಮನೆಯ ಟೆರೇಸ್‌ನಲ್ಲಿ ಆಟವಾಡುವಾಗ ಬಟ್ಟೆಗೆ ಬೆಂಕಿ ತಗುಲಿತ್ತು.
ಇದನ್ನೂ ಓದಿ:ಸರ್ಕಾರದ ಆದೇಶ ಧಿಕ್ಕರಿಸಿ ಪಟಾಕಿ ಸಿಡಿಸಿದ ದೆಹಲಿ ಜನತೆಗೆ ಬೆಳ್ಳಂಬೆಳಗ್ಗೆ ಶಾಕ್​​..!
ಬೆಂಕಿ ತಗುಲಿದ ಕೂಡಲೇ ಬಾಲಕಿ ಕಿರುಚಾಡಿದ್ದಾಳೆ. ಆದರೆ ಪಟಾಕಿ ಸದ್ದಿನಲ್ಲಿ ಬಾಲಕಿಯ ಕಿರುಚಾಟ ಯಾರಿಗೂ ಕೇಳಿಸಿರಲಿಲ್ಲ ಎನ್ನಲಾಗಿದೆ.
ನಂತರ ಇದು ಗೊತ್ತಾಗುವಷ್ಟರದಲ್ಲಿಯೇ ಬಾಲಕಿಗೆ ಶೇಕಡಾ 60 ರಷ್ಟು ಸುಟ್ಟಗಾಯಗಳಾಗಿದ್ದವು. ಕೂಡಲೇ ಆಕೆಯನ್ನು ಏರ್‌ಆ್ಯಂಬುಲೆನ್ಸ್‌ನಲ್ಲಿ ದೆಹಲಿಯ ಏಮ್ಸ್‌ಗೆ ಶಿಫ್ಟ್ ಮಾಡಿದ್ದಾರೆ. ಆದರೆ ಏಮ್ಸ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಬಾಲಕಿ ಮೃತಪಟ್ಟಿದ್ದಾಳೆ. ಈಕೆ ರೀಟಾ ಅವರ ಏಕೈಕ ಮೊಮ್ಮಗಳು ಎನ್ನಲಾಗಿದೆ.
ವರ್ಷಗಟ್ಟಲೆ ಒಂದೇ ಮನೆಯಲ್ಲಿದ್ವಿ… ತನು-ಮನ ಎಲ್ಲಾ ಹಂಚಿಕೊಂಡ್ವಿ… ಆದ್ರೆ ಈಗ…

ಕುತೂಹಲದ ಕೇಂದ್ರವಾದ ಬ್ರಿಕ್ಸ್​ ಶೃಂಗಸಭೆ: ಮೋದಿ- ಜಿನ್‌ಪಿಂಗ್‌ ​ಪುನಃ ಮುಖಾಮುಖಿ!

ದೀಪಾವಳಿ ಸಮಯದಲ್ಲಿ ರಕ್ತದೋಕುಳಿಗೆ ಸ್ಕೆಚ್: ಜೈಷ್-ಎ-ಮೊಹಮ್ಮದ್​ ಉಗ್ರರು ಅರೆಸ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 3 =
Remember me
