ಭೋಪಾಲ್ (ಮಧ್ಯಪ್ರದೇಶ):ಆರು ವರ್ಷದ ಮೊಮ್ಮಗಳ ಮೇಲೆ ಆಕೆಯ ಮೂರು ವರ್ಷದ ತಮ್ಮನ ಎದುರೇ ಕಾಮುಕ ಅಜ್ಜನೊಬ್ಬ ರೇಪ್​ ಎಸಗಿರುವ ಭಯಾನಕ ಘಟನೆ ಮಧ್ಯಪ್ರದೇಶದ ಭೋಪಾಲ್​ನ ಕೋಲಾರ್ ಎಂಬಲ್ಲಿ ನಡೆದಿದೆ.
ಬಾಲಕಿಯ ಚಿಕ್ಕಪ್ಪನ ಜತೆಗೂಡಿ ಅಜ್ಜ ಈ ಕೃತ್ಯ ಎಸಗಿದ್ದಾನೆ. ನಂತರ ಆಕೆ ಹಾಗೂ ಆಕೆಯ ತಮ್ಮನಿಗೆ 20 ರೂಪಾಯಿ ಜತೆ ಸಮೋಸಾ ನೀಡಿ ಯಾರಿಗೂ ವಿಷಯ ತಿಳಿಸದಂತೆ ಹೇಳಿದ್ದಾನೆ. ಮನೆಗೆ ಅಳುತ್ತಾ ಬಂದಿದ್ದ ಮಕ್ಕಳನ್ನು ಕಂಡು ತಾಯಿ ವಿಚಾರಿಸಿದಾಗ ಅವರು ಏನೂ ಬಾಯಿ ಬಿಡಲಿಲ್ಲ.
ನಂತರ ಬೆದರಿ ಹೋಗಿದ್ದ ಮಗಳನ್ನು ಪರೀಕ್ಷೆ ಮಾಡಿದಾಗ ಆಕೆಯ ಖಾಸಗಿ ಅಮಗದಿಂದ ರಕ್ತಸ್ರಾವ ಆಗುತ್ತಿರುವುದನ್ನು ತಾಯಿ ಗಮನಿಸಿದ್ದಾಳೆ. ಹೆದರಿಹೋದ ತಾಯಿ ಎಷ್ಟು ಕೇಳಿದರೂ ಮಕ್ಕಳು ಅಜ್ಜನ ಹೆಸರು ಹೇಳಲಿಲ್ಲ. ನಂತರ ತಾಯಿ ಜೋರು ಮಾಡಿ ಕೇಳಿದಾಗ ಇಬ್ಬರೂ ವಿಷಯವನ್ನು ಬಾಯಿ ಬಿಟ್ಟಿದ್ದಾರೆ.
ಚಿಕ್ಕಪ್ಪ ಸಮೋಸಾ ಕೊಡಿಡುವುದಾಗಿ ಕರೆದುಕೊಂಡು ಹೋದ. ಒಂದು ಕೋಣೆಗೆ ಆತ ಹೋದ. ಅಲ್ಲಿ ಅಜ್ಜ ಇದ್ದ. ಇಬ್ಬರೂ ಸೇರಿ ನನ್ನ ಡ್ರೆಸ್​ ತೆಗೆದು ಏನೆಲ್ಲಾ ಮಾಡಿದರು… ಆಮೇಲೆ 20 ರೂಪಾಯಿ ಕೊಟ್ಟು ಸಮೋಸಾನೂ ಕೊಟ್ಟರು ಎಂದು ಬಾಲಕಿ ತಮಗಾದ ನೋವಿನ ಅನುಭವಗಳನ್ನು ಹೇಳಿಕೊಂಡಿದ್ದಾಳೆ. ಅಕೆಯ ತಮ್ಮ ಕೂಡ ಅಕ್ಕನ ಮೇಲಾದ ಭಯಾನಕ ಘಟನೆ ಕುರಿತು ಹೇಳಿದ. ನಂತರ ಯಾರ ಮುಂದೆಯೂ ವಿಷಯ ಹೇಳದಂತೆ ಚಿಕ್ಕಪ್ಪ ಮತ್ತು ಅಜ್ಜ ಬೆದರಿಕೆ ಹಾಕಿದ್ದನ್ನೂ ಆತ ಹೇಳಿದ.
ಕೂಡಲೇ ತಾಯಿ ಪೊಲೀಸರಿಗೆ ದೂರು ದಾಖಲಿಸಿದ್ದು, ಇಬ್ಬರನ್ನೂ ಬಂಧಿಸಲಾಗಿದೆ.
ಆತ ಕೈಲಾಗದ ಗಂಡನಮ್ಮಾ… ಡಿವೋರ್ಸ್​ ಕೊಡ್ತೇನೆಂದದ್ದಕ್ಕೆ ಇಷ್ಟು ಓದಿರೋ ನೀನು ಹೆದರಿಬಿಟ್ಯಾ? ಛೇ…

ಮೊದಲ ರಾತ್ರಿ ರಕ್ತ ಕಾಣಿಸಿಲ್ಲ ಎಂದು ಡಿವೋರ್ಸ್​ ನೀಡಿದ ಪತಿ ಮಹಾಶಯ ₹10 ಲಕ್ಷ ಬೇಡಿಕೆ ಇಟ್ಟ!

ಕೆರೆಯಲ್ಲಿ ಬಿದ್ದ ಐಫೋನ್​ ವರ್ಷದ ಬಳಿಕ ಸಿಕ್ತು- ಚಾಲ್ತಿಯಲ್ಲಿದ್ದ ಮೊಬೈಲ್​ ನೋಡಿ ದಂಗಾದ ಮಾಲೀಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − one =
Remember me
