ಸೊಲ್ಲಾಪುರ (ಮಹಾರಾಷ್ಟ್ರ):ಮದುವೆಗೆ ಹುಡುಗಿ ಸಿಗ್ತಲ್ಲ ಎನ್ನುವುದು ಬಹುತೇಕ ವರ್ಗಗಳ ಯುವಕರ ಅಳಲು. ಹುಡುಗಿಯರ ಸಂಖ್ಯೆ ಹುಡುಗರಿಗೆ ಹೋಲಿಸಿದರೆ ಕಡಿಮೆ ಇರುವುದು ಒಂದೆಡೆಯಾದರೆ, ಇರುವ ಹುಡುಗಿಯರ ಡಿಮಾಂಡ್​ಗಳು ಹೆಚ್ಚಿಗೆ ಇರುವ ಕಾರಣ, ಎಷ್ಟೋ ಯುವಕರಿಗೆ ಅದನ್ನು ಪೂರೈಸುವುದು ಕಷ್ಟ. ಇದೇ ಕಾರಣಕ್ಕೆ ಅನೇಕ ಯುವಕರು ವಯಸ್ಸು ದಾಟುತ್ತಿದ್ದರೂ ಮದುವೆಯಾಗುತ್ತಿಲ್ಲ.
ಇಂಥದ್ದೇ ಒಂದು ಪ್ರಕರಣ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆದಿದೆ. ಮದುವೆಯಾಗಲು ತನಗೆ ಹುಡುಗಿ ಸಿಗುತ್ತಿಲ್ಲ ಎಂದು ಅಜ್ಜಿಯ ಮೇಲೆ ಕೋಪ ತೀರಿಸಿಕೊಂಡ ಯುವಕನೊಬ್ಬ, ಇದೇ ಸಿಟ್ಟಿನಿಂದ ಅಜ್ಜಿಯನ್ನು ಹೊಡೆದು ಕೊಲೆ ಮಾಡಿದ್ದಾನೆ! ಇದಕ್ಕೆ ಕಾರಣ, ತನಗೆ ಚಿಕ್ಕವಯಸ್ಸಿನಲ್ಲಿ ಅಂದರೆ ಬಾಲ್ಯದಲ್ಲಿಯೇ ಮದುವೆ ಮಾಡಬೇಕಿತ್ತು,. ಹೀಗೆ ಮಾಡಿದರೆ ಸಮಸ್ಯೆಯೇ ಬರುತ್ತಿರಲಿಲ್ಲ ಎನ್ನುವುದು ಅವನ ಅನಿಸಿಕೆ. ಇದೇ ಕಾರಣಕ್ಕೆ ಅಜ್ಜಿಯನ್ನು ಕೊಂದು ಹಾಕಿ ಈಗ ಜೈಲು ಸೇರಿದ್ದಾನೆ!
ಇಂಥದ್ದೊಂದು ಕೃತ್ಯ ಎಸಗಿದವನ ಹೆಸರು ಸಲೀಂ ಜಹಾಂಗೀರ್ ನದಾಫ್​. ಈತನ ಈ ದುಷ್ಕೃತ್ಯಕ್ಕೆ ಬಲಿಯಾದವರು 70 ವರ್ಷದ ಮಲಂಬಿ ಹಸನ್ ಸಾಹಬ್ ನದಾಫ್.
ಆಗಿದ್ದೇನು?ಸಲೀಂ ಕಲಬುರಗಿಯಲ್ಲಿ ಕೆಲಸ ಮಾಡಿಕೊಂಡಿದ್ದ. ಆಗಾಗ್ಗೆ ಮನೆಯವರ ಎದುರು ತನಗೆ ಹೆಣ್ಣು ಸಿಗುತ್ತಿಲ್ಲ ಎಂದು ಅಳಲು ತೋಡಿಕೊಳ್ಳುತ್ತಲೇ ಇದ್ದ. ಇದರಿಂದ ಆತನಿಗೆ ಸಿಕ್ಕಾಪಟ್ಟೆ ಮನೆಯವರ ಮೇಲೆ ಕೋಪ ಬಂದಿತ್ತು. ಅತ್ತ ಅಜ್ಜಿ ಮಲಂಬಿಯವರ ಗ್ರಹಚಾರ ಕೆಟ್ಟಿತ್ತು. ಮೊಮ್ಮಗನ ಮೇಲಿನ ಪ್ರೀತಿಯಿಂದ ಅವರು ಅವನನ್ನು ಸೊಲ್ಲಾಪುರಕ್ಕೆ ಕರೆಸಿಕೊಂಡಿದ್ದರು.
ಮದುವೆಯ ಯೋಚನೆಯಲ್ಲಿಯೇ ಇದ್ದ ಸಲೀಂ ಇದೇ ವಿಷಯವಾಗಿ ಅಜ್ಜಿಯ ಜತೆಯೂ ಕ್ಯಾತೆ ತೆಗೆದಿದ್ದಾನೆ. ಬಾಲ್ಯದಲ್ಲಿಯೇ ವಿವಾಹ ಮಾಡಿದ್ದರೆ ದೊಡ್ಡವನಾದ ಮೇಲೆ ಮದುವೆ ಸಮಸ್ಯೆ ಬರುತ್ತಿರಲಿಲ್ಲ. ನನಗೆ ಮದುವೆ ಮಾಡದೇ ಮೋಸ ಮಾಡಿದ್ದೀರಿ ಎಂದು ಬೈದಿದ್ದಾನೆ. ಮಾತಿಗೆ ಮಾತು ಬೆಳೆದಿದೆ.ಇದೇ ಸಿಟ್ಟಿನಲ್ಲಿ ದೊಣ್ಣೆಯಿಂದ ಅಜ್ಜಿಯ ತಲೆಗೆ ಹೊಡೆದಿದ್ದಾನೆ. ಈ ಸಂದರ್ಭದಲ್ಲಿ ಮಲಂಬಿ ರಕ್ತಸ್ರಾವವಾಗಿ ಕುಸಿದು ಬಿದ್ದಿದ್ದಾರೆ, ಆಸ್ಪತ್ರೆಗೆ ದಾಖಲಿಸಿದರೂ ಅವರು ಬದುಕಿ ಉಳಿಯಲಿಲ್ಲ. ಈಗ ಪೊಲೀಸರು ಕೇಸ್​ ದಾಖಲು ಮಾಡಿದ್ದಾರೆ.
ಬೆಂಗಳೂರಿನ ಬೈಕರ್​ ರಾಜಸ್ಥಾನದಲ್ಲಿ ಸಾವು: ಕೇಸ್​ ಕ್ಲೋಸ್​ ಎನ್ನುವಷ್ಟರಲ್ಲೇ ಪತ್ನಿಯತ್ತ ಬೊಟ್ಟು ಮಾಡಿದ ಹೆಲ್ಮೆಟ್!

15 ಮಂದಿ ಅಕೌಂಟ್‌ಗೆ ಎಸ್‌ಬಿಐನಿಂದ 1.5 ಕೋಟಿ ರೂ: ಮೋದಿ ಕೊಟ್ಟರೆಂದು ಕುಣಿದಾಡಿದ ಗ್ರಾಹಕರು- ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + three =
Remember me
