ವಾಷಿಂಗ್ಟನ್:ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಸೋಲಿನ ಹಾದಿಯಲ್ಲಿರುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಚುನಾವಣೆಯಲ್ಲಿ ಮೋಸ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿರುವ ಬೆನ್ನಲ್ಲೇ ಪರಿಸರ ಹೋರಾಟಗಾರ್ತಿ ಎಂದು ಗುರುತಿಸಿಕೊಂಡಿರುವ 19 ವರ್ಷದ ಗ್ರೇಟಾ ಥನ್ಬರ್ಗ್, ಚಿಲ್‌ ಡೊನಾಲ್ಡ್‌ ಚಿಲ್‌ ಎಂದು ತಿರುಗೇಟು ನೀಡಿದ್ದಾಳೆ.
ಈ ಮೂಲಕ 11 ತಿಂಗಳ ಸೇಡನ್ನು ಗ್ರೇಟಾ ತೀರಿಸಿಕೊಂಡಿದ್ದಾಳೆ. ಜಾಗತಿಕ ತಾಪಮಾನ ನಿಯಂತ್ರಣದ ಕುರಿತಾದ ಪ್ಯಾರಿಸ್ ಒಪ್ಪಂದದಿಂದ ಅಮೆರಿಕ ಹಿಂದೆ ಸರಿಯುವ ವೇಳೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದ ಮಾತುಗಳನ್ನೇ ಪುನಃ ಉಚ್ಚರಿಸುವ ಮೂಲಕ ಈಕೆ ಕೋಪ ಹೊರಹಾಕಿದ್ದಾಳೆ.
So ridiculous. Donald must work on his Anger Management problem, then go to a good old fashioned movie with a friend! Chill Donald, Chill!https://t.co/4RNVBqRYBA
— Greta Thunberg (@GretaThunberg)November 5, 2020

2019ರ ಡಿಸೆಂಬರ್‌ನಲ್ಲಿ ಟೈಮ್ಸ್ ಮ್ಯಾಗಜಿನ್‌ನಲ್ಲಿ ಗ್ರೇಟಾ ಫೋಟೋ ಮುಖಪುಟದಲ್ಲಿ ಪ್ರಕಟವಾಗಿತ್ತು. ವರ್ಷದ ವ್ಯಕ್ತಿ ಪಟ್ಟಿಯಲ್ಲಿ ಹೆಸರು ಪಡೆದುಕೊಂಡಿದ್ದ ಈಕೆಯನ್ನು ಡೊನಾಲ್ಡ್ ಟ್ರಂಪ್ ಅಣಕಿಸಿದ್ದರು. ಜಾಗತಿಕ ತಾಪಮಾನದ ಕುರಿತು ಆವೇಷಭರಿತವಾಗಿ ಗ್ರೇಟಾ ಮಾತನಾಡುವುದಕ್ಕೆ ಅಣಕಿಸಿದ್ದ ಟ್ರಂಪ್‌, ‘ಇದು ಹಾಸ್ಯಾಸ್ಪದ. ಸ್ನೇಹಿತನೊಂದಿಗೆ ಹಳೆಯ ಶೈಲಿಯ ಚಲನಚಿತ್ರಕ್ಕೆ ಹೋಗಿ ತನ್ನ ಕೋಪ ನಿರ್ವಹಣೆ ಸಮಸ್ಯೆಯ ಬಗ್ಗೆ ಗ್ರೇಟಾ ಕೆಲಸ ಮಾಡಬೇಕು, ಚಿಲ್ ಗ್ರೇಟಾ ಚಿಲ್’ ಎಂದು ಟ್ವೀಟ್ ಮಾಡಿದ್ದರು.
ಉತ್ತರ ನೀಡಲು ಕಾಯುತ್ತಿದ್ದ ಗ್ರೇಟಾ, ಮತ ಎಣಿಕೆ ಕಾರ್ಯವನ್ನು ಸ್ಥಗಿತಗೊಳಿಸಿ ಎಂಬ ಇದೀಗ ಟ್ರಂಪ್‌ ಹಾಕಿರುವ ಟ್ವೀಟ್‌ಗೆ ತಿರುಗೇಟು ನೀಡಿದ್ದಾಳೆ. ”ಎಷ್ಟು ಹಾಸ್ಯಾಸ್ಪದ. ಡೊನಾಲ್ಡ್ ಟ್ರಂಪ್ ಮೊದಲು ತಮ್ಮ ಕೋಪ ನಿಯಂತ್ರಣ ಸಮಸ್ಯೆಯತ್ತ ಗಮನ ಹರಿಸಬೇಕು. ಬಳಿಕ ತಮ್ಮ ಸ್ನೇಹಿತರೊಬ್ಬರ ಜತೆಗೆ ಒಳ್ಳೆಯ ಹಳೆಯ ಶೈಲಿಯ ಸಿನಿಮಾ ನೀಡಲು ಹೋಗಬೇಕು. ಚಿಲ್, ಡೊನಾಲ್ಡ್ ಚಿಲ್!’ ಎಂದು ಟ್ವೀಟ್ ಮಾಡಿದ್ದಾಳೆ.
ಗ್ರೇಟಾ ಈ ಚುನಾವಣೆಯಲ್ಲಿ ಜೊ ಬೈಡನ್ ಬಣದ ಪರ ಮತ ಚಲಾಯಿಸುವಂತೆ ಟ್ವಿಟರ್‌ನಲ್ಲಿ ಕೋರಿದ್ದರು.(ಏಜೆನ್ಸೀಸ್‌)
ಸೈಕಲ್‌ ಮೇಲೆ ಬಂದ ಇಂಧನ ಸಚಿವ- ವಿದ್ಯುತ್‌ ಬಿಲ್‌ ಪಾವತಿಸಿದ ಗ್ರಾಹಕರು!

ಪುಸ್ತಕ ಪ್ರಿಯರಿಗೆ ಬಂಪರ್‌: ಶೇ.50ರ ರಿಯಾಯಿತಿ ನೀಡ್ತಿದೆ ಪುಸ್ತಕ ಪ್ರಾಧಿಕಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 2 =
Remember me
