ಮುಂಬೈ:ವರದಕ್ಷಿಣೆ ಪೀಡೆ ಇನ್ನೂ ಹಲವು ಭಾಗಗಳಲ್ಲಿ ನಿಂತಿಲ್ಲ. ವರದಕ್ಷಿಣೆಗಾಗಿ ಅದೆಷ್ಟೋ ಹೆಣ್ಣುಮಕ್ಕಳ ಪಾಡು ಹೇಳತೀರದಾಗಿದೆ. ಅದೆಷ್ಟೋ ಅಮಾಯಕ ಯುವತಿಯರು ಬರ್ಬರವಾಗಿ ಹತ್ಯೆಯಾಗಿದ್ದಾರೆ, ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಇಂದಿಗೂ ಮುಂದುವರೆದಿದೆ. ಆದರೆ ಅದೇ ಇನ್ನೊಂದೆಡೆ, ಒಂದಿಷ್ಟು ಯುವತಿಯರು ಹೊಸ ಟ್ರೆಂಡ್​ ಶುರು ಮಾಡಿಕೊಂಡಿದ್ದಾರೆ. ಅದೇ ಮದುವೆ ಒಪ್ಪಂದ.
ಕೆಲ ತಿಂಗಳ ಹಿಂದೆ ವಧುವೊಬ್ಬಳು ಮದುವೆಯಾದ ಮೇಲೆ ಏನೇನು ಮಾಡಬೇಕು ಎಂಬ ಬಗ್ಗೆ ಗಂಡನಿಗೆ ತಿಳಿಸಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಳು. ಕರಣ್ ಮತ್ತು ಹರ್ಷು ಹೆಸರಿನಲ್ಲಿ ಇದು ಭಾರಿ ವೈರಲ್​ ಆಗಿತ್ತು. ಕರಣ್ ಮತ್ತು ಹರ್ಷು ನಡುವಿನ ಲವ್ ಎಗ್ರಿಮೆಂಟ್’ ಎಂದೇ ಈ ಒಪ್ಪಂದದ ಪತ್ರ ಶುರುವಾಗಿತ್ತು. ಇದರಲ್ಲಿ ವಧು ಹಾಕಿರುವ ಷರತ್ತು ಎಂದರೆ, ವೆಬ್‌ಸೀರಿಸ್‌ ನೋಡಿದಾಗ ಅದರ ಸ್ಪಾಯ್ಲರ್‌ಗಳನ್ನು ಹೇಳಬಾರದು, ದಿನಕ್ಕೆ ಕನಿಷ್ಠ ಮೂರು ಬಾರಿ ‘ಐ ಲವ್ ಯು’ ಹೇಳಬೇಕು, ನನ್ನನ್ನು ಬಿಟ್ಟು ಬಟರ್ ಬೋನ್‌ಲೆಸ್ ಚಿಕನ್ ಎಂದಿಗೂ ತಿನ್ನಬಾರದು. ಸದಾ ಸತ್ಯವನ್ನೇ ಹೇಳಬೇಕು ಎಂದು.
ಈಕೆಯ ಸುದ್ದಿ ಭಾರಿ ಜನಪ್ರಿಯ ಪಡೆಯುತ್ತಲೇ ಇದೀಗ ಮತ್ತೋರ್ವ ವಧು ಇದೇ ರೀತಿಯ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದ್ದಾಳೆ. ಇನ್​ಸ್ಟಾಗ್ರಾಂನಲ್ಲಿ ಈ ಒಪ್ಪಂದದ ಮದುವೆಯ ವಿಡಿಯೋ ಶೇರ್​ ಮಾಡಿಕೊಂಡಿದ್ದು, ಅದೀಗ ಭಾರಿ ವೈರಲ್​ ಆಗಿದೆ.
ಈ ವಧು ಹಾಕಿರುವ ಷರತ್ತು ಹೀಗಿದೆ,
– ಒಂದು ತಿಂಗಳಲ್ಲಿ ಒಂದು ಪಿಜ್ಜಾ ಮಾತ್ರ ತಿನ್ನುವುದು– ಮನೆಯ ಆಹಾರಕ್ಕೆ ಯಾವಾಗಾಲೂ ಓಕೆ ಅನ್ನಬೇಕು– ತಡರಾತ್ರಿಯ ಪಾರ್ಟಿಗಳಿಗೆ ಪರ್ಮಿಷನ್​ ನೀಡುತ್ತೇನೆ, ಆದರೆ ಹೆಂಡತಿಯೊಂದಿಗೆ ಮಾತ್ರ– ದಿನವೂ ಜಿಮ್​ಗೆ ಹೋಗಬೇಕು– ಭಾನುವಾರ ಬ್ರೇಕ್​ಫಾಸ್ಟ್​ ನೀನು (ಗಂಡ) ಮಾಡಬೇಕು.– ಪ್ರತಿಯೊಂದು ಪಾರ್ಟಿಯ ಒಳ್ಳೆಯ ಫೋಟೋ ತೆಗೆಯಬೇಕು– 15 ದಿನಗಳಿಗೆ ಒಮ್ಮೆ ಕಡ್ಡಾಯವಾಗಿ ಷಾಪಿಂಗ್​ಗೆ ಕರೆದುಕೊಂಡು ಹೋಗಬೇಕು.

ಇಲ್ಲಿದೆ ನೋಡಿ ವಿಡಿಯೋ


A post shared by 𝐖𝐞𝐝𝐥𝐨𝐜𝐤 𝐩𝐡𝐨𝐭𝐨𝐠𝐫𝐚𝐩𝐡𝐲 (@wedlock_photography_assam)

ಆಫೀಸ್​ ಮೀಟಿಂಗ್ ಎಂದು ಲವರ್ ಜತೆ ಮಾಲ್ಡೀವ್ಸ್​ಗೆ: ಪತ್ನಿಯಿಂದ ತಪ್ಪಿಸಿಕೊಳ್ಳಲು ಹೋಗಿ ಜೈಲಲ್ಲಿ ಇಂಜಿನಿಯರ್​!

VIDEO: 3,800 ಟನ್ ತೂಗುವ ಶತಮಾನದಷ್ಟು ಹಳೆಯದಾದ ಕಟ್ಟಡ ಬೇರೆಕಡೆ ಶಿಫ್ಟ್​- ವಿಡಿಯೋ ವೈರಲ್

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:eight − four =
Remember me
