ಥಾಣೆ (ಮಹಾರಾಷ್ಟ್ರ):ಮದುವೆ ಮನೆಗೆ ಬೆಂಕಿ ಬಿದ್ದು ಪೆಂಡಾಲ್‌ ಹೊತ್ತಿ ಉರಿಯುತ್ತಿದ್ದರೂ ಬಂದ ಒಂದಿಷ್ಟು ನೆಂಟರು ನಿಶ್ಚಿಂತೆಯಿಂದ ಊಟ ಸವಿಯುತ್ತಿದ್ದಾರೆ. ಮಹಾರಾಷ್ಟ್ರದ ಥಾಣೆ ಭೀವಂಡಿಯಲ್ಲಿ ನಡೆದಿರುವ ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗುತ್ತಿದೆ.
ಈ ವಿಡಿಯೋದಲ್ಲಿ ಮುಂದೆ ಅತಿಥಿಗಳು ಮದುವೆಯ ಭೂರಿ ಭೋಜನ ಸವಿಯುತ್ತಿರುವುದನ್ನು ಕಾಣಬಹುದು. ಅವರ ಹಿಂಬದಿಯಲ್ಲಿಯೇ ಪೆಂಡಾಲ್‌ಗೆ ಬೆಂಕಿ ಹತ್ತಿ ಧಗಧಗನೆ ಉರಿಯುತ್ತಿದೆ. ಬೆಂಕಿಗೆ ಹೆದರಿ ಹಲವರು ಚೀರುತ್ತಿದ್ದಾರೆ. ಅತ್ತಿತ್ತ ಓಡಾಡುತ್ತಿದ್ದಾರೆ. ಆದರೆ ಕೆಲವು ಪುಣ್ಯಾತ್ಮರು ಮಾತ್ರ ನೆಮ್ಮದಿಯಿಂದ ಊಟ ಮಾಡುತ್ತಿದ್ದಾರೆ.
ಅತ್ತ ಇರುವ ಜನರು ಬೆಂಕಿಯನ್ನು ನಂದಿಸಲು ಅತ್ತಿಂದಿತ್ತ ಓಡಾಡುತ್ತಿರುವುದೂ ವಿಡಿಯೋದಲ್ಲಿ ಕಾಣಿಸುತ್ತದೆ. ಆದರೆ ಇವರು ಮಾತ್ರ ಏನೂ ಆಗಿಲ್ಲ ಎನ್ನುವಂತೆ ನೆಮ್ಮದಿಯಿಂದ ಇದ್ದಾರೆ.
ಈ ಘಟನೆಯಲ್ಲಿ ಆರು ಬೈಕ್​ಗಳು, ಹಲವು ಕುರ್ಚಿಗಳು ಬೆಂಕಿಗೆ ಆಹುತಿಯಾಗಿವೆ. ಮದುವೆ ಮನೆ ಸಂಪೂರ್ಣ ಸುಟ್ಟುಹೋಗಿದೆ. ನಾಲ್ಕು ಅಗ್ನಿಶಾಮಕ ದಳಗಳು ಹರಸಾಹಸ ಪಟ್ಟು ಬೆಂಕಿ ನಂದಿಸಿವೆ. ಅದೃಷ್ಟವಶಾತ್ ಯಾರಿಗೂ ಗಾಯವಾಗಲಿ, ಪ್ರಾಣಹಾನಿಯಾಗಲಿ ಆಗಿಲ್ಲ.
ಇಲ್ಲಿದೆ ನೋಡಿ ವಿಡಿಯೋ:
#WatchVideo: Even as fire-ravaged#AnsariMarriageground in#Bhiwandilast night, people seem to have enjoyed their dinner in a marriage reception held in the same compound#Marriage#ViralVideo#News#Trending#WeddingSeason#LoveForfoodpic.twitter.com/sn6oHqCuj1
— Free Press Journal (@fpjindia)November 29, 2021

ತಾಯಿಯ ಅಕ್ಕನ ಮಗನನ್ನು ಪ್ರೀತಿಸುತ್ತಿರುವೆ- ಮದುವೆಯಾದರೆ ಕಾನೂನಿನಡಿ ಅಪರಾಧವಾಗುತ್ತದೆಯೆ?

ಡ್ಯೂಟಿ ನೆಪದಲ್ಲಿ ವಿವಾಹಿತೆ ಜತೆ ಸಬ್​​​ಇನ್ಸ್​​ಪೆಕ್ಟರ್ ಲವ್ವಿಡವ್ವಿ… ಊರಿಗೆ ಹೋಗ್ತೇನೆಂದು ಬಲೆಬೀಸಿದ ಗಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 1 =
Remember me
