ಮುಂಬೈ:ಅತ್ಯಾಚಾರ, ರೇಪ್​ ಎಂದಾಕ್ಷಣ ಸಂತ್ರಸ್ತರ ಜಾಗದಲ್ಲಿ ನೆನಪಾಗುವುದು, ಬಾಲಕಿಯರಿಂದ ಹಿಡಿದು ವಯೋವೃದ್ಧ ಮಹಿಳೆಯರು. ಇದಕ್ಕೆ ಅಪವಾದ ಎಂಬಂತೆ ಅಲ್ಲಲ್ಲಿ ಹುಡುಗರು, ಪುರುಷರ ಮೇಲೂ ರೇಪ್​ ಆಗುತ್ತಿರುವ ಸುದ್ದಿಗಳು ವರದಿಯಾಗುತ್ತಲೇ ಇವೆ.
ಅಂಥದ್ದೇ ಒಂದು ಆಘಾತಕಾರಿ ಘಟನೆ ಮುಂಬೈನ ಥಾಣೆಯಲ್ಲಿ ನಡೆದಿದೆ. ಅತ್ಯಂತ ಕ್ರೂರವಾಗಿ ಹಿಂಸಿಸಿ, ಕಿರುಕುಳ ನೀಡಿ, ಅತ್ಯಾಚಾರ ಮಾಡಿ ಲೂಟಿ ಮಾಡಿರುವ ಘಟನೆ ಇದಾಗಿ್ರ. 19 ವರ್ಷದ ಮಾಡೆಲ್​ ಆಗಿರುವ ಯುವಕನ ಮೇಲೆ ಇಂಥ ಕ್ರೌರ್ಯ ನಡೆದಿದೆ.
ಗುಜರಾತ್​ನಲ್ಲಿ ಮಾಡೆಲ್​ ವೃತ್ತಿಯಲ್ಲಿ ತೊಡಗಿಸಿಕೊಂಡಿರುವ ಯುವಕ, ಚಿತ್ರರಂಗದಲ್ಲಿ ಅವಕಾಶ ಹುಡುಕುತ್ತಾ ಮುಂಬೈಗೆ ಬಂದಿದ್ದ. ಅವನಿಗೆ ಫೇಸ್​ಬುಕ್​ನಲ್ಲಿ ಪುನೀತ್​ ಶುಕ್ಲಾ ಎಂಬಾತನ ಪರಿಚಯವಾಗಿತ್ತು. ಆತನೇ ಕೆಲಸ ಕೊಡಿಸುವುದಾಗಿ ಹೇಳಿದ್ದರಿಂದ ಅದನ್ನೇ ನಂಬಿಕೊಂಡು ಯುವಕ ಬಂದಿದ್ದ.
ಮುಂಬೈಗೆ ಬಂದವನೇ ಶುಕ್ಲಾನನ್ನು ಭೇಟಿಯಾಗಿದ್ದಾನೆ. ಅದಾಗಲೇ ಈ ಸುಂದರ ಯುವಕನನ್ನು ಬಲೆಗೆ ಬೀಳಿಸಿಲು ಪ್ಲ್ಯಾನ್ ಹಾಕಿಕೊಂಡಿದ್ದ ಶುಕ್ಲಾ ಈ ಯುವಕನನ್ನು ಒಂದು ಕಟ್ಟಡದ ಟೆರೇಸ್‌ಗೆ ಕರೆದೊಯ್ದಿದ್ದಾನೆ. ಅಲ್ಲಿ ಆತನ ಇಬ್ಬರು ಸ್ನೇಹಿತರು ಇದ್ದರು. ಎಲ್ಲರೂ ಸೇರಿ ಯುವಕನಿಗೆ ಚಿತ್ರಹಿಂಸೆ ನೀಡಿ, ಆತನ ಮೇಲೆ ಅತ್ಯಾಚಾರ ಎಸಗಿ ಅವನ ಬಳಿ ಇರುವ ಹಣವನ್ನು ತೆಗೆದುಕೊಂಡು ಹೋಗಿದ್ದಾರೆ. ಅತ್ಯಾಚಾರವನ್ನು ವಿರೋಧಿಸುವಾಗ ಆತನನ್ನು ಕೋಲಿನಿಂದ ಹೊಡೆದು ಹಿಂಸೆ ಕೊಟ್ಟಿದ್ದಾರೆ.
ಇಷ್ಟೇ ಅಲ್ಲದೇ, ಈ ಇಡೀ ಘಟನೆಯನ್ನು ಶುಲ್ಕಾ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ್ದಾನೆ. ಒಂದು ವೇಳೆ ಪೊಲೀಸರಲ್ಲಿ ದೂರು ದಾಖಲು ಮಾಡಿದರೆ ಸಾಮಾಜಿಕ ಜಾಲತಾಣದಲ್ಲಿ ರೇಪ್​ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.
ಆದರೆ ಇದಕ್ಕೆ ಜಗ್ಗದ ಸಂತ್ರಸ್ತ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಶುಕ್ಲಾ ಸೇರಿದಂತೆ 34 ವರ್ಷದ ರವಿ ಜೈಸ್ವಾಲ್, ಮತ್ತು 23 ವರ್ಷದ ಅರವಿಂದ್ ಪ್ರಜಾಪತಿ ಸೇರಿದಂತೆ ನಾಲ್ವರು ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹಕ್ಕಿಜ್ವರ ಹರಡಲು ಪ್ರಧಾನಿಯೇ ಕಾರಣ ಎಂದ ಐ.ಪಿ.ಸಿಂಗ್​! ಇದಕ್ಕೆ ಕೊಟ್ಟ ಕಾರಣ ಏನು ನೋಡಿ…

VIDEO: ಅಮೆರಿಕ ಹಿಂಸಾಚಾರದ ವೇಳೆ ಟ್ರಂಪ್​ ಪುತ್ರ- ಪ್ರೇಯಸಿ ಏನು ಮಾಡುತ್ತಿದ್ದರು ನೋಡಿ…

4 ಲಕ್ಷಕ್ಕೂ ಅಧಿಕ ಕೋಳಿಗಳ ಸಾವು! ಸಾಕಪ್ಪಾ ಸಾಕು ಚಿಕನ್​ ಸಹವಾಸ ಎನ್ನುತ್ತಿದ್ದಾರೆ ಇಲ್ಲಿಯ ಜನ

ಮುಂಬೈ ದಾಳಿ ರೂವಾರಿ ಲಖ್ವಿಗೆ 15 ವರ್ಷ ಜೈಲುಶಿಕ್ಷೆ ನೀಡಿದ ಪಾಕ್​ ಕೋರ್ಟ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:one + twelve =
Remember me
