ಲಖನೌ:ಐಪಿಎಸ್‌ ಅಧಿಕಾರಿ, ಕರ್ನಾಟಕದ ಸಿಂಗಂ ಎಂದೇ ಪ್ರಖ್ಯಾತರಾಗಿದ್ದ ಅಣ್ಣಮಲೈ ಕಳೆದ ವರ್ಷ ಹುದ್ದೆ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದರು.ಇದಕ್ಕೂ ಮೊದಲು ಹಾಗೂ ನಂತರ ಕೂಡ ಕೆಲವು ಅಧಿಕಾರಿಗಳು ಬಿಜೆಪಿಯನ್ನು ಸೇರ್ಪಡೆಯಾಗಿದ್ದಾರೆ. ಇದೀಗ ಗುಜರಾತ್ ಕೇಡರ್‌ನ ಐಎಎಸ್ ಅಧಿಕಾರಿ ಎ.ಕೆ. ಶರ್ಮಾ ಇದೇ ಹಾದಿ ತುಳಿದಿದ್ದಾರೆ.
ಶರ್ಮಾ ಅವರು ಕೆಲ ದಿನಗಳ ಹಿಂದೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಸ್ವಯಂ ನಿವೃತ್ತಿ ಪಡೆದಿರುವ ಅವರು, ಇದೀಗ  ಉತ್ತರ ಪ್ರದೇಶದಲ್ಲಿ ಬಿಜೆಪಿ ಸೇರ್ಪಡೆಗೊಳ್ಳಲಿದ್ದಾರೆ ಎನ್ನಲಾಗಿದೆ. ಪಕ್ಷಕ್ಕಾಗಿ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿರುವ ಶರ್ಮಾ ಅವರು, ಶೀಘ್ರದಲ್ಲೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಪಕ್ಷದ ವಕ್ತಾರ ಚಂದ್ರಮೋಹನ್ ಗುರುವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮಾವು ಜಿಲ್ಲೆಯ 1988 ಬ್ಯಾಚ್‌ನ ಅಧಿಕಾರಿ ಶರ್ಮಾ, ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾಗಿದ್ದಾರೆ. ಜತೆಗೆ ಗುಜರಾತ್‌ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿಯಾಗಿದ್ದಾಗ ಅವರ ಜತೆ ಕೆಲಸ ಮಾಡಿದ್ದರು.
ಉತ್ತರ ಪ್ರದೇಶದ ವಿಧಾನಪರಿಷತ್‌ನ 12 ಸ್ಥಾನಗಳಿಗೆ ಜನವರಿ 28ರಂದು ಚುನಾವಣೆ ನಡೆಯಲಿದೆ. 18ನೇ ತಾರೀಖು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಚುನಾವಣೆಯಲ್ಲಿ ಶರ್ಮಾ ಅವರನ್ನು ಪಕ್ಷದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗುತ್ತಿದೆಯೇ ಎಂಬ ಸುದ್ದಿ ಹರಡಿದೆ.
ಈ ಕುರಿತು ಮಾಧ್ಯಮದವರು ಕೇಳಿರುವ ಪ್ರಶ್ನೆಗೆ ಪಕ್ಷದ ವಕ್ತಾರ ಚಂದ್ರಮೋಹನ್ ಅವರು, ಚುನಾವಣೆಗೆ ಸ್ಪರ್ಧಿಸುವ ಎಲ್ಲ ಅಭ್ಯರ್ಥಿಗಳ ಬಗ್ಗೆ ಕೇಂದ್ರ ನಾಯಕರೇ ಅಂತಿಮಗೊಳಿಸುತ್ತಾರೆ ಎಂಬ ಹೇಳಿಕೆ ನೀಡಿದ್ದಾರೆ.
ನಾನು ಕೆಲಸ ಕಳೆದುಕೊಂಡ ಮೇಲೆ ಪತ್ನಿ ವಿಚಿತ್ರವಾಗಿ ವರ್ತಿಸತೊಡಗಿದ್ದಾಳೆ: ಏನು ಮಾಡಲಿ?

VIDEO: ಮರದಲ್ಲಿ ಕುಳಿತು ಅದೇ ರೆಂಬೆಯನ್ನು ಕಡಿಯುವ ಡೇಂಜರ್‌ ಉದ್ಯೋಗ ನೋಡಿರುವಿರಾ?

15 ವರ್ಷಕ್ಕೇನೇ ಮಕ್ಳನ್ನು ಹೆರ್ಬೋದು- ಮದುವೆ ವಯಸ್ಸು 21 ಮಾಡೋದ್ಯಾಕೆ ಎಂದ ಮಾಜಿ ಸಚಿವ!

ಮಗ ಸತ್ತ ವರ್ಷದ ನಂತರ ಸಿಕ್ತು ಡೆತ್‌ನೋಟ್‌! ಅದರಲ್ಲಿತ್ತು ಪತ್ನಿಯ ಕಾಮಪುರಾಣ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:9 − 3 =
Remember me
