ಅಹಮದಾಬಾದ್:ಕರೊನಾ ವೈರಸ್​ ಹಿನ್ನೆಲೆಯಲ್ಲಿ ಎಲ್ಲಾ ಕೋರ್ಟ್​ಗಳೂ ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆಸಿದ್ದವು. ಇದೀಗ ಕೆಲವು ಕೋರ್ಟ್​ಗಳು ಕಲಾಪ ಆರಂಭಿಸಿದ್ದರೂ ಇನ್ನು ಕೆಲವೆಡೆ ಕೋರ್ಟ್​ಗಳು ತೆರೆದಿಲ್ಲ.
ಇದೇ ಸಮಯದಲ್ಲಿ, ವಿಚಾರಣೆ ವೇಳೆ ಹಲವಾರು ವಕೀಲರು ಅಸಂಬದ್ಧ ರೀತಿಯಲ್ಲಿ ನಡೆದುಕೊಳ್ಳುತ್ತಿರುವುದು ವರದಿಯಾಗಿದೆ. ಮನೆಯಲ್ಲಿರುವ ಡ್ರೆಸ್​ ಹಾಕಿಕೊಂಡು, ಟೀ ಸೇವನೆ ಮಾಡುತ್ತಾ, ಕಾರು ಚಲಾಯಿಸುತ್ತಾ… ಹೀಗೆ ವಕೀಲಿ ವೃತ್ತಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಂಡಿರುವ ಬಗ್ಗೆ ಕೆಲವು ಕಡೆಗಳಲ್ಲಿ ವರದಿಯಾಗಿದೆ.
ಅದರಂತೆಯೇ ಜೆ.ವಿ.ಅಜ್ಮೇರಾ ಎಂಬ ಅಹಮದಾಬಾದ್​ ವಕೀಲನೊಬ್ಬ, ಕಾರು ಚಲಾಯಿಸುತ್ತಾ ವಿಚಾರಣೆ ಹಾಜರಾಗಿದ್ದು ಮಾತ್ರವಲ್ಲದೇ, ವಿಚಾರಣೆ ಸಂದರ್ಭದಲ್ಲಿಯೇ ಧೂಮಪಾನ ಮಾಡುತ್ತಿದ್ದರು. ಇದನ್ನು ಗಮನಿಸಿದ ನ್ಯಾಯಮೂರ್ತಿ ಎ.ಎಸ್.ಸುಪೇಹಿಯಾ ಕೆಂಡಾಮಂಡಲವಾಗಿದ್ದಾರೆ.
ವಕೀಲಿ ವೃತ್ತಿಗೆ ಈ ರೀತಿ ಅವಹೇಳನ ಮಾಡುವ, ಈ ವೃತ್ತಿಯ ಮರ್ಯಾದೆ ಕಳೆಯುತ್ತಿರುವುದು ತುಂಬಾ ವಿಷಾದಕರ ಎಂದಿರುವ ನ್ಯಾಯಮೂರ್ತಿಗಳು ಅಜ್ಮೇರಾ ಅವರಿಗೆ 10 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ಇದೊಂದು ಅತ್ಯಂತ ಬೇಜವಾಬ್ದಾರಿಯ ವರ್ತನೆ. ವಕೀಲರ ಇಂತಹ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಖಂಡಿಸುವ ಅಗತ್ಯವಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು.
ಇದನ್ನೂ ಓದಿ:ಪತ್ನಿಯ ಕರೆತಂದರು, ಬನಿಯನ್ ಧರಿಸಿದರು, ಗುಟ್ಕಾ ಜಗಿದರು, ಸ್ಮೋಕ್​ ಮಾಡಿದರು… ವಕೀಲರ ಈ ಪರಿಗೆ ಕೋರ್ಟ್​ ಕೆಂಡಾಮಂಡಲ
ಒಡಿಶಾ ಹೈಕೋರ್ಟ್​ನಲ್ಲಿ ವಕೀಲರೊಬ್ಬರು ಕಾರು ಚಲಾಯಿಸಿಕೊಂಡು ವಾದ ಮಾಡುತ್ತಿದ್ದರೆ, ಮದುವೆಯಾಗಿರುವ ವಕೀಲರೊಬ್ಬರು ತಮ್ಮ ಪತ್ನಿಯನ್ನು ಪಕ್ಕದಲ್ಲಿಯೇ ಕುಳ್ಳರಿಸಿಕೊಂಡಿದ್ದರು. ಇದು ಕೋರ್ಟ್​ಗೆ ಮಾಡುವ ಅವಮರ್ಯಾದೆ. ಪತ್ನಿಯನ್ನು ಕಳಿಸಿ ಎಂದು ನ್ಯಾಯಮೂರ್ತಿಗಳು ಹೇಳಿದರೂ ವಕೀಲರು ಕೇಳಿರಲಿಲ್ಲ.
ಇನ್ನೊಂದು ಪ್ರಕರಣದಲ್ಲಿ ವಕೀಲರು ಬನಿಯನ್​ನಲ್ಲಿಯೇ ಇದ್ದು ತೋಟದಲ್ಲಿ ಅಡ್ಡಾಡಿಕೊಂಡು ವಿಚಾರಣೆಗೆ ಹಾಜರಾಗಿದ್ದರು. ನ್ಯಾಯಮೂರ್ತಿಗಳು ಅವರನ್ನು ತರಾಟೆಗೆ ತೆಗೆದುಕೊಂಡಾಗ ಮನೆಯೊಳಕ್ಕೆ ನೆಟ್​ವರ್ಕ್​ ಸಿಗುತ್ತಿಲ್ಲ ಎಂದರು. ನಂತರ ಈ ವಕೀಲರು ಸುಳ್ಳು ಹೇಳುತ್ತಿರುವುದು ನ್ಯಾಯಮೂರ್ತಿಗಳ ಗಮನಕ್ಕೆ ಬಂದು ತರಾಟೆಗೆ ತೆಗೆದುಕೊಂಡಿದ್ದರು. ಇನ್ನೊಬ್ಬ ವಕೀಲರು ವೀಡಿಯೊ ಕಾನ್ಫರೆನ್ಸ್‌ ನಡೆಯುತ್ತಿರುವಾಗಲೇ ಪ್ಲೇಟ್​ನಲ್ಲಿ ತಿಂಡಿ ಇಟ್ಟುಕೊಂಡು ತಿನ್ನುತ್ತಿದ್ದರು.
ಹಿರಿಯ ವಕೀಲ ರಾಜೀವ್ ಧವನ್ ಕೂಡ ಧೂಮಪಾನ ಮಾಡುತ್ತಿದ್ದುದು ಹಾಗೂ ಇನ್ನೊಬ್ಬ ವಕೀಲ ಗುಟ್ಕಾ ತಿನ್ನುತ್ತ ವಿಚಾರಣೆಗೆ ಹಾಜರಾಗಿ ಸುಪ್ರೀಂಕೋರ್ಟ್​ನಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಕೆಲವು ಕಡೆ ಕಪ್ಪು ಸಮವಸ್ತ್ರ ಧರಿಸಿ ವಿಚಾರಣೆಗೆ ಬರುವುದರಿಂದ ವಿನಾಯಿತಿ ನೀಡಲಾಗಿತ್ತು. ಇದನ್ನೇ ಬಳಸಿಕೊಂಡ ವಕೀಲರು ಮನೆಯ ಡ್ರೆಸ್​ನಲ್ಲಿಯೇ ಇದ್ದರು. ಇದರಿಂದ ಕಿಡಿ ಕಾರಿದ್ದ ರಾಜಸ್ಥಾನ ಹೈಕೋರ್ಟ್​, ಸಮವಸ್ತ್ರದಲ್ಲಿ ಹಾಜರಾಗುವಂತೆ ಸೂಚನೆ ನೀಡಿತ್ತು. ಹೀಗೆ ಅನೇಕ ವಕೀಲರು ನಡೆದುಕೊಂಡಿದ್ದಾರೆ.
ಪತ್ನಿಯ ಕರೆತಂದರು, ಬನಿಯನ್ ಧರಿಸಿದರು, ಗುಟ್ಕಾ ಜಗಿದರು, ಸ್ಮೋಕ್​ ಮಾಡಿದರು… ವಕೀಲರ ಈ ಪರಿಗೆ ಕೋರ್ಟ್​ ಕೆಂಡಾಮಂಡಲ

ವಿರಾಟ್​ ಕೊಹ್ಲಿ ಕುರಿತು ಅಸಭ್ಯ ಕಮೆಂಟ್​: ಸುನಿಲ್​ ಗಾವಸ್ಕರ್​ ವಿರುದ್ಧ ಭುಗಿಲೆದ್ದ ಆಕ್ರೋಶ

ಶೌಚಗೃಹದಲ್ಲಿ ಸಿಸಿಟಿವಿ ಇಟ್ಟು ಬ್ಲ್ಯಾಕ್​ಮೇಲ್​- ಸಂಬಳವಿಲ್ಲದೇ ಶಿಕ್ಷಕಿಯರ ದುಡಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 8 =
Remember me
