ಅಹಮದಾಬಾದ್:ಪಾಕಿಸ್ತಾನದ ಗುಪ್ತಚರ ಇಲಾಖೆಯಾದ ಐಎಸ್‌ಐ ಪರ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಗುಜರಾತ್‌ನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಬಂಧಿಸಿದ್ದಾರೆ.
ರಜಾಕ್ ಭಾಯ್ ಕಂಭರ್ ಎಂಬಾತ ಬಂಧಿತನಾಗಿದ್ದು, ಈತ ಗುಜರಾತ್‌ನ ಮುಂದ್ರಾ ಡಾರ್ಕ್‌‌ಯಾರ್ಡ್‌‌ನಲ್ಲಿ ಮೇಲ್ವಿಚಾರಕನಾಗಿ ಕೆಲಸ ಮಾಡುತ್ತಿದ್ದ. ಈತನನ್ನು ಗುಜರಾತ್‌ ಪಶ್ಚಿಮ ಕಛ್ ಪ್ರದೇಶದಲ್ಲಿ ಬಂಧಿಸಲಾಗಿದೆ.
ಲಖನೌದ ಗೋಮತಿ ನಗರ ಪೊಲೀಸ್ ಠಾಣೆಯಲ್ಲಿ ಚಂಡೋಲಿ ಜಿಲ್ಲೆಯ ಮುಘಲ್ಸರಾಯ್‌ನ ಮೊಹಮ್ಮದ್ ರಶೀದ್ ಎಂಬಾತ ಪಾಕಿಸ್ತಾನದ ರಕ್ಷಣಾ ಮತ್ತು ಗುಪ್ತಚರ ಇಲಾಖೆಯೊಂದಿಗೆ ಸಂಪರ್ಕ ಹೊಂದಿದ್ದ ಮತ್ತು ಆತ ಎರಡು ಬಾರಿ ಪಾಕಿಸ್ತಾನಕ್ಕೆ ಹೋಗಿ ಬಂದಿದ್ದ ಎಂಬ ಮಾಹಿತಿಯ ಮೇಲೆ ಆತನ ವಿರುದ್ಧ ಕೆಲ ತಿಂಗಳ ಹಿಂದೆ ಎಫ್‌ಐಆರ್ ದಾಖಲಿಸಲಾಗಿತ್ತು.
ಇದನ್ನೂ ಓದಿ:ಈ ಬಾರಿಯ ‘ಮನ್‌ ಕಿ ಬಾತ್‌’ ಮೇಲೆ ಯೂಟ್ಯೂಬ್ ವೀಕ್ಷಕರ ಮುನಿಸು: ಅತಿ ಹೆಚ್ಚು ಡಿಸ್‌ಲೈಕ್‌
ಈ ಸಮಯದಲ್ಲಿ ಆತನ ಜತೆ ರಜಾಕ್ ಭಾಯ್ ಕಂಭರ್ ಸಂಪರ್ಕ ಇರುವುದಾಗಿ ಎನ್‌ಎಐ ಅಧಿಕಾರಿಗಳಿಗೆ ಸಂದೇಹ ಬಂದಿತ್ತು. ಈ ಹಿನ್ನೆಲೆಯಲ್ಲಿ ಈತನ ಮೇಲೆ ಎನ್‌ಐಎ ಅಧಿಕಾರಿಗಳು ಕಣ್ಣಿಟ್ಟಿದ್ದರು. ಇದೀಗ ಅವರ ಸಂದೇಹ ಬಲವಾಗಿರುವ ಹಿನ್ನೆಲೆಯಲ್ಲಿ ಅರೆಸ್ಟ್‌ ಮಾಡಲಾಗಿದೆ.
ಇವರಿಬ್ಬರೂ ಸೇರಿ ಭಾರತಕ್ಕೆ ಸಂಬಂಧಿಸಿದ ಕೆಲವು ಸೂಕ್ಷ್ಮ ಮತ್ತು ಕಾರ್ಯತಂತ್ರ ರೂಪಿಸುವ ಫೋಟೋಗಳನ್ನು ಪಾಕಿಸ್ತಾನಕ್ಕೆ ರವಾನಿಸಿರುವುದು ತಿಳಿದುಬಂದಿದೆ ಮಾತ್ರವಲ್ಲದೇ ಭಾರತೀಯ ಸೇನೆಗೆ ಸಂಬಂಧಿಸಿದ ಮಾಹಿತಿಗಳು ಪಾಕಿಸ್ತಾನದ ಜತೆ ಹಂಚಿಕೊಂಡಿದ್ದರು ಎಂದು ತಿಳಿದುಬಂದಿದೆ.
ರಜಾಕ್ ಕಂಭಾರ್ ಮನೆಯಲ್ಲಿ ಎನ್‌ಐಎ ಅಧಿಕಾರಿಗಳು ಶೋಧ ನಡೆಸಿದ್ದು, ಆತನ ಬ್ಯಾಂಕ್ ಖಾತೆಗೆ ರಿಝ್ವಾನ್ ಎಂಬಾತ ಪೇಟಿಎಂ ಮೂಲಕ ಐದು ಸಾವಿರ ರೂಪಾಯಿ ರವಾನಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ಧಾರೆ.
ಧರ್ಮಸ್ಥಳದಲ್ಲಿಂದು ನಾಮಕರಣ ಸಂಭ್ರಮ: ಮನಸೂರೆಗೊಂಡಳು ಲಕ್ಷ್ಮಿಯ ಪುತ್ರಿ

ವಿದೇಶಗಳಿಗೆ ಹೋಗಲು ಬಯಸುವವರಿಗೆ ಇಲ್ಲಿದೆ ಒಂದು ಬೇಸರದ ಸಂಗತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 + 10 =
Remember me
