ನವದೆಹಲಿ:ನಾನು ಇದುವರೆಗೆ ಪಾಕಿಸ್ತಾನವನ್ನು ಕಂಡಿಲ್ಲ, ಅಲ್ಲಿಗೆ ಹೋಗಲಿಲ್ಲ. ಇದು ನನ್ನ ಜೀವನದ ದೊಡ್ಡ ಅದೃಷ್ಟ. ಅಲ್ಲಿಗೆ ಹೋಗದ ಕೆಲವು ಅದೃಷ್ಟವಂತರಲ್ಲಿ ನಾನೂ ಒಬ್ಬ ಎನ್ನಲು ತುಂಬಾ ಸಂತೋಷವಾಗುತ್ತದೆ. ಅದಕ್ಕಿಂತಲೂ ಹೆಚ್ಚು ಸಂತೋಷ ಎಂದರೆ ಹಿಂದುಸ್ತಾನದಲ್ಲಿ ಮುಸ್ಲಿಂ ಆಗಿ ಹುಟ್ಟಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಗುಲಾಂ ನಬಿ ಆಜಾದ್ ಹೇಳಿದರು.
ಇಂದು ರಾಜ್ಯಸಭೆಯಲ್ಲಿ ಅವರ ಕೊನೆಯ ದಿನ. ತಮ್ಮ ವಿದಾಯ ಭಾಷಣದಲ್ಲಿ ಮಾತನಾಡಿದ ಗುಲಾಂ ನಬಿ ಆಜಾದ್ ಅತ್ಯಂತ ಭಾವುಕರಾಗಿ ಭಾರತದ ಬಗೆಗಿನ ಪ್ರೀತಿಯನ್ನು ಹಂಚಿಕೊಂಡರು.
ಮಂಗಳವಾರ ನಾಲ್ಕು ಮಂದಿ ನಿವೃತ್ತಿಯಾಗುತ್ತಿದ್ದು, ರಾಜ್ಯ ಸಭೆಯಲ್ಲಿ ವಿದಾಯ ಭಾಷಣವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಆಜಾದ್​, ತಮ್ಮ ರಾಜಕೀಯ ಪಯಣದ ಕುರಿತು ಮಾತನಾಡುತ್ತಾ, ಭಾರತದಲ್ಲಿರುವ ಮುಸ್ಲಿಂ ಜನರು ಹೆಮ್ಮೆ ಪಡಬೇಕಿದೆ ಎಂದು ನುಡಿದರು.
I am among those fortunate people who never went to Pakistan. When I read about circumstances in Pakistan, I feel proud to be a Hindustani Muslim: Congress MP Ghulam Nabi Azad in his retirement speech in RSpic.twitter.com/0nmJdkMWI8
— ANI (@ANI)February 9, 2021

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ತಮ್ಮ ಭಾಷಣದಲ್ಲಿ ಸ್ಮರಿಸಿಕೊಂಡು ಗುಲಾಂ ನಬಿ ಆಜಾದ್​ ಅವರು, ಅಟಲ್​ಜೀ ಅವರಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತಿದ್ದೇನೆ. ಬಿಕ್ಕಟ್ಟು ಯಾವುದೇ ಇರಲಿ, ಅದನ್ನು ಸುಲಭವಾಗಿ ಪರಿಹರಿಸುವುದು ಹೇಗೆ ಎಂಬುದನ್ನು ಕಲಿತಿರುವುದು ಕೂಡ ಅವರಿಂದಲೇ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಶ್ಲಾಘಿಸಿದ ಗುಲಾಬ್​ ನಬಿ ಅವರು, ರಾಜಕೀಯ ಬೇರೆ, ವೈಯಕ್ತಿಕ ಸ್ನೇಹ ಬೇರೆ ಎನ್ನುವುದನ್ನು ತೋರಿಸಿಕೊಟ್ಟವರು ಮೋದಿಯವರು. ಎಷ್ಟೋ ಬಾರಿ ರಾಜಕೀಯ ವಿಷಯಕ್ಕೆ ಸಂಬಂಧಿಸಿದಂತೆ ನಾವಿಬ್ಬರೂ ವಾಗ್ಯುದ್ಧ ಮಾಡಿದ್ದಿದೆ. ಆದರೆ ಅದು ರಾಜಕೀಯ. ಅಲ್ಲಿ ಹಾಗೆಯೇ ಇರಬೇಕು. ಆದರೆ ಮೋದಿಯವರು ಎಂದಿಗೂ ಅದನ್ನು ವೈಯಕ್ತಿಕವಾಗಿ ತೆಗೆದುಕೊಂಡೇ ಇಲ್ಲ. ಅವರ ವಿರುದ್ಧ ರಾಜಕೀಯವಾಗಿ ಮಾತನಾಡಿದಾಗಲೂ ಅದು ರಾಜಕೀಯ ಅಷ್ಟೇ ಎಂದು ಅಂದುಕೊಂಡರೇ ವಿನಾ ವೈಯಕ್ತಿಕ ದ್ವೇಷ ಸಾಧಿಸಲು ಹೋಗಿಲ್ಲ. ವೈಯಕ್ತಿಕ ಹಾಗೂ ರಾಜಕೀಯವನ್ನು ಅವರು ಬೇರೆ ಬೇರೆಯಾಗಿ ನೋಡುವವರು. ಇದು ಒಳ್ಳೆಯ ರಾಜಕಾರಣಿಯ ಗುಣ ಎಂದು ಶ್ಲಾಘಿಸಿದರು.
ಸಹಕಾರದಿಂದ ದೇಶ ನಡೆಯಬೇಕೇ ವಿನಾ ಜಗಳದಿಂದಲ್ಲ. ಜಗಳ ಮಾಡಿ ಸುಖಾ ಸುಮ್ಮನೇ ಎಲ್ಲದಕ್ಕೂ ವಿರೋಧ ವ್ಯಕ್ತಪಡಿಸುತ್ತಾ ಕುಳಿತರೆ ದೇಶ ನಡೆಯುವುದಿಲ್ಲ ಎಂದು ಎಲ್ಲರಿಗೂ ಸಲಹೆ ನೀಡಿದರು. ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸಿದ್ದಕ್ಕೆ ಕೇಂದ್ರ ಸರ್ಕಾರವನ್ನು ನಿನ್ನೆಯಷ್ಟೇ ಆಜಾದ್​ ಅವರು ಹೊಗಳಿದ್ದರು.
ಕಾಂಗ್ರೆಸ್​ ನಾಯಕನಿಗೆ ವಿದಾಯ- ರಾಜ್ಯಸಭೆಯಲ್ಲಿ ಕಣ್ಣೀರಿಟ್ಟ ಪ್ರಧಾನಿ ನರೇಂದ್ರ ಮೋದಿ

ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಆಂಟಿ ಜತೆ ಎಸ್ಕೇಪ್​ ಆದ ಇಬ್ಬರು ಮಕ್ಕಳ ತಂದೆ!​


ಎಟಿಎಂಗೆ ಹಾಕಬೇಕಿದ್ದ ಹಣದೊಂದಿಗೆ ಆಂಟಿ ಜತೆ ಎಸ್ಕೇಪ್​ ಆದ ಇಬ್ಬರು ಮಕ್ಕಳ ತಂದೆ!​

ಏಳು ತಿಂಗಳಲ್ಲಿ ಮೂರು ರಾಜ್ಯಗಳಿಗೆ ಏಳೇಳು ಬಾರಿ ಮಾರಾಟವಾದ ಯುವತಿ!

ಏಳು ತಿಂಗಳಲ್ಲಿ ಮೂರು ರಾಜ್ಯಗಳಿಗೆ ಏಳೇಳು ಬಾರಿ ಮಾರಾಟವಾದ ಯುವತಿ!

ಬೇರೆ ಹೆಣ್ಣಿನತ್ತ ಕಣ್ಣೆತ್ತಿಯೂ ನೋಡಲ್ಲ, ಅಷ್ಟು ಒಳ್ಳೆಯವ ನಾನು- ಆದ್ರೆ ಹೆಂಡ್ತಿಗೆ ಕೋಪ… ಪ್ಲೀಸ್​ ಪರಿಹಾರ ಹೇಳಿ..

ಕೈದಿ ಜತೆ ಲವ್​, ಅಧಿಕಾರಿಯ ಕೈ ಬೆಚ್ಚಗೆ ಮಾಡಿ ಜೈಲಲ್ಲೇ ಸೆಕ್ಸ್​, ಮುಂದೆ ಆದದ್ದೆಲ್ಲಾ ಅನಾಹುತ…!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 1 =
Remember me
