ಕಡುನಾ (ನೈಜೇರಿಯಾ):ನೈಜೀರಿಯಾದಲ್ಲಿ ಬಂಡುಕೋರರ ಅಟ್ಟಹಾಸ ಮಿತಿಮೀರಿದೆ. ಶಾಲಾ ಮಕ್ಕಳನ್ನೇ ಗುರಿಯಾಗಿಸಿಕೊಂಡು ಅವರನ್ನು ಅಪಹರಿಸಿಕೊಂಡು ಹೋಗುತ್ತಿರುವ ಘಟನೆಗಳು ದಿನನಿತ್ಯವೂ ನಡೆಯುತ್ತಲೇ ಇದೆ.
ಕೆಲ ದಿನಗಳ ಹಿಂದೆ 279 ಶಾಲಾ ವಿದ್ಯಾರ್ಥಿನಿಯರನ್ನು ಅಪಹರಿಸಿದ್ದ ಬಂಡುಕೋರರು ಹಣ ನೀಡಬೇಕು ಹಾಗೂ ಜೈಲಿನಲ್ಲಿರುವ ತಮ್ಮವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿತ್ತು. ಇದೀಗ ನಿನ್ನೆ ಮತ್ತೆ 39 ವಿದ್ಯಾರ್ಥಿಗಳನ್ನು ಕಿಡ್​ನ್ಯಾಪ್​ ಮಾಡಿದ್ದಾರೆ. ಕಡುನಾ ರಾಜ್ಯದಲ್ಲಿರುವ ಅಫಾಕಾ ಗ್ರಾಮದಲ್ಲಿರುವ ಪೆಡರಲ್ ಕಾಲೇಜ್ ಆಫ್ ಫಾರೆಸ್ಟ್ರಿ ಕಾಲೇಜಿನ ಮೇಲೆ ದಾಳಿ ಮಾಡಿರುವ ಬಂದೂಕುಧಾರಿಗಳು 39 ಮಕ್ಕಳನ್ನು ಅಪಹರಿಸಿಕೊಂಡು ಹೋಗಿದ್ದಾರೆ. ದಾಳಿ ಸಂದರ್ಭದಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ಯಾಮ್ಯುಲ್ ಅರುವಾನ್ ತಿಳಿಸಿದ್ದಾರೆ.
ಇವರ ಪೈಕಿ 23 ವಿದ್ಯಾರ್ಥಿನಿಯರು ಹಾಗೂ 16 ವಿದ್ಯಾರ್ಥಿಗಳು ಸೇರಿದ್ದಾರೆ. ಕಾಲೇಜಿನ ಮೇಲೆ ಇವರು ದಾಳಿ ನಡೆಸುತ್ತಲೇ ಸ್ಥಳಕ್ಕೆ ಸೇನಾ ಪಡೆಗಳು ಆಗಮಿಸಿವೆ.
ಆದರೆ ಅದಾಗಲೇ ಬಂಡುಕೋರರು 39 ವಿದ್ಯಾರ್ಥಿಗಳನ್ನು ಅಪಹರಿಸಿ ಆಗಿತ್ತು. ಇನ್ನುಳಿದ 180 ಮಂದಿಯನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಕೃತ್ಯವನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟರ್ಸ್ ಖಂಡಿಸಿದ್ದಾರೆ. ಯಾವುದೇ ಷರತ್ತು ಇಲ್ಲದೆ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ಕಳೆದ ಬಾರಿ ಅಪಹರಣ ಮಾಡಿದ ಸಂದರ್ಭದಲ್ಲಿ ಎಲ್ಲಾ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತರುವಲ್ಲಿ ಸೇನೆ ಯಶಸ್ವಿಯಾಗಿತ್ತು.ಆದರೆ ಇದಕ್ಕೂ ಮೊದಲು ಇದೇ ರೀತಿ ಹಲವಾರು ಮಹಿಳೆಯರ ಅಪಹರಣವಾಗಿದ್ದು, ಅವರಲ್ಲಿ ನೂರಾರು ಮಂದಿ ಇನ್ನು ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ಹೇಳಿವೆ.
ಮೈಸೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ- ಪೊಲೀಸರನ್ನೇ ಯಾಮಾರಿಸಿದ್ದ ಟಿಕ್​ಟಾಕ್​ ಸುಂದರಿ- ಇಲ್ಲಿವೆ ಈಕೆಯ ಕಲರ್​ಫುಲ್​ ವಿಡಿಯೋ…

ಆ ಹುಡುಗಿ ಬೇಡ ಕಣೋ ಎಂದ್ರೂ ಕೇಳ್ದೆ ಮದ್ವೆಯಾಗಿ ಪಡಬಾರದ ಕಷ್ಟ ಪಡ್ತಿದ್ದೇನೆ- ಪ್ಲೀಸ್​ ಪರಿಹಾರ ಹೇಳಿ

ಕಾಲು ಶತಮಾನದ ನಂತರ ಇತಿಹಾಸ ಬರೆದ ಕೇರಳದ ಮುಸ್ಲೀಂ ಲೀಗ್​- ಮಹಿಳೆಗೆ ಸಿಕ್ಕಿತು ಸ್ಥಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 4 =
Remember me
