ಗುರುಗ್ರಾಮ: ನಿರ್ಮಾಣ ಹಂತದ ವಸತಿ ಕಟ್ಟಡ ಕಾಮಗಾರಿಯ ವೇಳೆ ದುರಂತವೊಂದು ಸಂಭವಿಸಿದ್ದು, ನಾಲ್ವರು ಕಾರ್ಮಿಕರು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ದೆಹಲಿಯ ಗುರುಗ್ರಾಮದಲ್ಲಿ ನಡೆದಿದೆ.
17 ನೇ ಮಹಡಿಗೆ ಟವರ್ ಕ್ರೇನ್ ಅಳವಡಿಸುವಾಗ ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ಓರ್ವ ಕಾರ್ಮಿಕನಿಗೆ ಗಂಭೀರ ಗಾಯಗಳಾಗಿವೆ. ಈತನ ಸ್ಥಿತಿ ಗಂಭೀರವಾಗಿದೆ. ಸೆಕ್ಟರ್-77 ರಲ್ಲಿ ಎಮಾರ್ ಪ್ಲಾಮ್ ಹಿಲ್ಸ್‌ನ ನಿರ್ಮಾಣ ಹಂತದ ವಸತಿ ಕಟ್ಟಡದಲ್ಲಿ ಈ ದುರಂತ ಸಂಭವಿಸಿದೆ. ಕಾರ್ಮಿಕರೆಲ್ಲರೂ ಬಿಹಾರ ಮೂಲದವರು ಎಂದು ತಿಳಿದುಬಂದಿದೆ.
17 ನೇ ಮಹಡಿಗೆ ನಿರ್ಮಾಣ ಸಾಮಗ್ರಿಗಳನ್ನು ಸಾಗಿಸಲು ಬಳಸಿದ ಟವರ್ ಕ್ರೇನ್ ಸರಿಪಡಿಸಿದ ನಂತರ ಅಪಘಾತ ಸಂಭವಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಕ್ರೇನ್ ಸರಿಪಡಿಸಿದ ನಂತರ ಕಾರ್ಮಿಕರು ಜಾರಿ 12 ನೇ ಮಹಡಿ ಮೇಲೆ ಬಿದ್ದಿದ್ದಾರೆ. ಸಂಬಂಧಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು ಎಂದು ಮನೇಸರ್ ಸಹಾಯಕ ಪೊಲೀಸ್ ಆಯುಕ್ತ (ಎಸಿಪಿ) ಸುರೇಶ್ ಕುಮಾರ್ ತಿಳಿಸಿದ್ದಾರೆ.ಇಲ್ಲಿ ಕಾರ್ಮಿಕರಿಗೆ ಯಾವುದೇ ರಕ್ಷಣೆ ನೀಡಲಾಗಿಲ್ಲ. ದುಬಾರಿ ಬೆಲೆಬಾಳುವ ಕಟ್ಟಡ ನಿರ್ಮಾಣವಾಗುತ್ತಿದ್ದರೂ, ಕಾರ್ಮಿಕರ ಜೀವ ಮಾತ್ರ ಬಲು ಅಗ್ಗವಾಗಿದೆ. ಸರಿಯಾದ ಭದ್ರತೆ ಇಲ್ಲದ ಕಾರಣ, ಈ ದುರಂತ ಸಂಭವಿಸಿದೆ ಎಂದು ಅಪಘಾತ ದೃಶ್ಯವನ್ನು ಕಣ್ಣಾರೆ ಕಂಡ ರವಿಕುಮಾರ್​ ವಿವರಿಸುತ್ತಾರೆ. 2010ರಿಂದ ಎಮಾರ್ ಪ್ಲಾಮ್ ಹಿಲ್ಸ್‌ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ದುರಂತ ನಡೆದಿರುವ ಕಟ್ಟಡದ ನಿರ್ಮಾಣ ಕಾರ್ಯವು 2018ರಿಂದ ಶುರುವಾಗಿದೆ.(ಏಜೆನ್ಸೀಸ್​)
ಆತ ಮಧ್ಯರಾತ್ರಿ ಕರೆದಾಗ ಹೋದ್ರೆ ಸಿನಿಮಾದಲ್ಲಿ ಛಾನ್ಸ್​, ಇಲ್ಲದಿದ್ರೆ ಔಟ್​: ಕರಾಳ ಸತ್ಯ ಬಿಚ್ಚಿಟ್ಟ ನಟಿ ಮಲ್ಲಿಕಾ

VIDEO: ಬ್ಯಾಗ್​ ಕೆಳಗಿಟ್ಟು ಟ್ರೋಲ್ ಆದ ಸಂಸದೆ!​ ಕ್ಯಾಮೆರಾ ಕಣ್ಣಿಗೆ ಬಿದ್ದು ರಟ್ಟಾಗೋಯ್ತು ಈ ಗುಟ್ಟು…

ನಿರುದ್ಯೋಗಿಗಳಿಗೆ ಉದ್ಯೋಗದ ಆಮಿಷ ಒಡ್ಡಿ ಡ್ರಗ್ಸ್​ ಸರಬರಾಜು: ಬೆಂಗಳೂರಿನಲ್ಲಿ ಭಯಾನಕ ಗ್ಯಾಂಗ್​ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
