ಮುಂಬೈ:ಸಿನಿಮಾ ಕ್ಷೇತ್ರ ಕಳೆದ ಕೆಲವು ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿದೆ. ಇದೀಗ ಸ್ಯಾಂಡಲ್​ವುಡ್​ನಲ್ಲೂ ಡ್ರಗ್ಸ್​ ನಂಟು ಬಿರುಗಾಳಿ ಎದ್ದಿರುವ ಬೆನ್ನಲ್ಲೇ, ಗುಟ್ಕಾ ನಂಟು ಬಾಲಿವುಡ್ ಹಾಗೂ ಟಾಲಿವುಡ್​ನ ಸುತ್ತುಕೊಂಡಿದೆ.
ಗುಟ್ಕಾ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ನಟ ಸಚಿನ್ ಜೋಶಿ ಹಾಗೂ ಅವರ ತಂದೆ ಜೆಎಂ ಜೋಷಿ ಅವರನ್ನು ಹೈದರಾಬಾದ್ ಪೊಲೀಸರು ಮುಂಬೈನಲ್ಲಿ ಬಂಧಿಸಿದ್ದಾರೆ. ಶ್ರೀಮಂತ ನಟರಲ್ಲಿ ಒಬ್ಬರು ಎನಿಸಿರುವ ಸಚಿನ್ ಸುತ್ತ ಇದೀಗ ಗುಟ್ಕಾ ಸುತ್ತುಹಾಕಿಕೊಂಡಿದೆ.
ಇತ್ತೀಚೆಗೆ ಹೈದರಾಬಾದ್‌ನಲ್ಲಿ ಗುಟ್ಕಾ ದಂಧೆ ಜೋರಾಗಿ ನಡೆದಿದೆ. ಇದರ ಬೆನ್ನಹಿಂದೆ ಬಿದ್ದ ಪೊಲೀಸರಿಗೆ ಇದೀಗ ಈ ದಂಧೆಗೂ ಸಿನಿರಂಗದ ನಂಟು ಇರುವುದು ತಿಳಿದಿದೆ. ಇದಾಗಲೇ ಕೆಲವು ಗುಟ್ಕಾ ಕಳ್ಳಸಾಗಾಣಿಕೆದಾರನನ್ನು ಬಂಧಿಸಲಾಗಿದೆ. ಆಳವಾಗಿ ವಿಚಾರಣೆ ನಡೆಸಿದಾಗ ಸಚಿನ್​ ಜೋಶಿ ಹೆಸರು ಕೇಳಿಬಂದಿದ್ದು, ಅವರನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಸುಮಾರು 1.25 ಕೋಟಿ ಮೌಲ್ಯದ ಗುಟ್ಕಾ ಪೆಟ್ಟಿಗೆಗಳು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ ಕೆಲ ಆರೋಪಿಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಪ್ರಕರಣದಲ್ಲಿ ಇದೀಗ ನಟ ಸಚಿನ್ ಹಾಗೂ ಅವರ ತಂದೆಯನ್ನು ಅವರನ್ನೂ ಬಂಧಿಸಲಾಗಿದೆ ಎನ್ನಲಾಗಿದೆ. ಇವರ ವಿರುದ್ಧ ಐಪಿಸಿಯ ಸೆಕ್ಷನ್ 273, 420 ಮತ್ತು 336 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ:ಟ್ರಂಪ್​ ಪುತ್ರನಿಗೂ ಕರೊನಾ: ಗುಣವಾದ ಮೇಲೆ ಅಮ್ಮನಿಂದ ಬಹಿರಂಗ!
ಈ ವಿಚಾರ ತಿಳಿದ ಸಚಿನ್ ಮುಂಬೈನಿಂದ ದುಬೈಗೆ ಪರಾರಿಯಾಗಲು ಯತ್ನಿಸಿದ್ದರು ಎಂದು ಹೇಳಲಾಗಿದೆ. ಇದೇ ಕಾರಣಕ್ಕೆ ಅವರನ್ನು ಹೈದರಾಬಾದ್​ನ ಸೈಬರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಅಪ್ಪ ‘ಗುಟ್ಕಾ ಕಿಂಗ್’​:ಸಚಿನ್ ತಂದೆ ಜೆ.ಎಂ ಜೋಶಿ ಗುಟ್ಕಾ ವ್ಯವಹಾರದಲ್ಲಿ ಪ್ರಸಿದ್ಧರಾದವರು. ಗೋವಾ ಪಾನ್ ಮಸಾಲಾ ಹೆಸರಿನಲ್ಲಿ ಗುಟ್ಕಾ ಮಾರಾಟ ಮಾಡುತ್ತಿದ್ದರು. ಇದೇ ಕಾರಣಕ್ಕೆ ಅವರನ್ನು ಗುಟ್ಕಾ ಕಿಂಗ್ ಎಂದೂ ಕರೆಯಲಾಗುತ್ತಿತ್ತು. ಆದರೆ ಪೊಲೀಸರ ತನಿಖೆ ವೇಳೆಗೆ ತಿಳಿದುಬಂದಿರುವ ವಿಷಯ ಎಂದರೆ ಗೋವಾ ಪಾನ್ ಮಸಾಲಾಗೆ ಯಾವುದೇ ರೀತಿಯ ಕಾನೂನಾತ್ಮಕ ಪರವಾನಗಿ ಪಡೆದಿರಲಿಲ್ಲ ಎಂಬುದು.
ಇನ್ನು ನಟ ಸಚಿನ್ ಜೋಷಿ ಬಾಲಿವುಡ್ ಮಾತ್ರವಲ್ಲದೇ ಟಾಲಿವುಡ್ ನಲ್ಲೂ ಸಾಕಷ್ಟು ಕೀರ್ತಿ ಗಳಿಸಿದ್ದಾರೆ. `ಆಜನ್`,`ಜಾಕ್‌ಪಾಟ್`, `ಮೌನಮೆಲನೋಯಿ`,`ನಿನು ಚುಡಕಾ ನೆನುಂಡಲೇನು`, ಒರೆ ಪಾಂಡು`, `ವೀರಪ್ಪನ್`,` ವಿವಾಡು`, `ನೆಕ್ಸ್ಟ್ ಏಂಟಿ`, ‘ಅಮಾವಾಸ್ಯ` ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ.
ಈ ನಟ ಸಾವಿರಾರು ಕೋಟಿ ರೂ. ಒಡೆಯ; ಇಂಥ ಕೆಲಸ ಮಾಡಿ ಇಷ್ಟು ದುಡ್ಡು ಗಳಿಸಿದ್ರಾ…?

ಹಸುಗಳೊಂದಿಗೆ ಈತ ಮಾಡುತ್ತಿದ್ದುದನ್ನು ನೋಡಿ ಬೆಚ್ಚಿಬಿದ್ದ ಪೊಲೀಸರು- ಸಿಸಿಟಿವಿಯಲ್ಲಿ ಸೆರೆ; ಬಂಧನ

ಅಪ್ಪ-ಅಮ್ಮನ ಜತೆ ಜಗಳವಾಡಿ ಮನೆಬಿಟ್ಟ ಬಾಲಕಿಯ ಕೂಡಿಹಾಕಿ 22 ದಿನ ಗ್ಯಾಂಗ್​ರೇಪ್​!

ಹಾಥರಸ್​ ಘಟನೆ: ಆಸ್ಪತ್ರೆಯ ಸಿಸಿಟಿವಿ ದೃಶ್ಯಾವಳಿ ಡಿಲೀಟ್​​- ವೈದ್ಯರ ಮೇಲೆ ಸಿಬಿಐ ಅನುಮಾನ!

ರಾತ್ರಿಯಿಡೀ ಫ್ರೀಜರ್​ನಲ್ಲಿದ್ದ ‘ಮೃತ’ ವೃದ್ಧ ಬೆಳಗಾದಾಗ ಅಲುಗಾಡಿದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 1 =
Remember me
