ವಾರಾಣಸಿ (ಉತ್ತರ ಪ್ರದೇಶ):ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಇರುವ ಶೃಂಗಾರ ಗೌರಿ ಹಾಗೂ ಶಿವಲಿಂಗಕ್ಕೆ ಪೂಜೆ ಸಲ್ಲಿಸಿಕೆ ಮಾಡಲು ಕೋರಿ ಸಲ್ಲಿಸಲಾದ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಿ ವಾರಣಾಸಿ ಕೋರ್ಟ್​ ಆದೇಶ ಹೊರಡಿಸಿದೆ. ಮಸೀದಿ ಆವರಣದಲ್ಲಿ ಸಿಕ್ಕಿರುವ ಶೃಂಗಾರ ಗೌರಿ ಹಾಗೂ ಶಿವಲಿಂಗಕ್ಕೆ ಪ್ರತಿನಿತ್ಯ ಪೂಜೆ ಸಲ್ಲಿಸಲು ಅವಕಾಶ ಕೋರಿ ರಾಖಿಸಿಂಗ್ ಸೇರಿ ನಾಲ್ವರು ಮಹಿಳೆಯರು ಸಲ್ಲಿಸಿರುವ ಅರ್ಜಿ ಇದಾಗಿದೆ.
ಈ ಆದೇಶದಿಂದಾಗಿ ಪೂಜೆಗೆ ಹಿಂದೂಗಳಿಗೆ ಅವಕಾಶ ನೀಡಬಹುದೇ, ಬೇಡವೇ ಎಂಬ ಬಗ್ಗೆ ಕೋರ್ಟ್​ ಇನ್ನುಮುಂದೆ ವಿಚಾರಣೆಯನ್ನು ಪ್ರಾರಂಭಿಸಲಿದೆ.
ಜ್ಞಾನವಾಪಿ ಮಸೀದಿಯಲ್ಲಿ ಉತ್ಖನನ ನಡೆಸಲು ಕೆಳ ಹಂತದ ನ್ಯಾಯಾಲಯ ಅನುಮತಿ ನೀಡಿತ್ತು. ಪರಿಶೀಲನೆ ವೇಳೆ ಮಸೀದಿಯ ಆವರಣದಲ್ಲಿದ್ದ ವಝುಖಾನದಲ್ಲಿ ಶಿವಲಿಂಗ ಪತ್ತೆಯಾಗಿದೆ ಹಾಗೂ ಮಂಗಳ ಗೌರಿಯ ದೇವಸ್ಥಾನ ಇದೆ ಎಂದು ಅಧಿಕಾರಿಗಳು ಕೋರ್ಟ್‍ಗೆ ವರದಿ ನೀಡಿದ್ದರು. ಈ ವರದಿಯ ಬೆನ್ನಲೆ ದೊಡ್ಡ ಪ್ರಮಾಣ ಸಂಚಲನ ಸೃಷ್ಟಿಯಾಗಿತ್ತು.
ಮಸೀದಿಯ ಜಾಗದಲ್ಲಿ ಮಂದಿರ ಇದೆ ಎಂದು ಕೆಲವರು ವಾದಿಸಿದ್ದರು. ಇದು ಕಾಶಿ ವಿಶ್ವನಾಥನಿಗೆ ಸೇರಿರುವ ಜಾಗ ಎಂದು ಹಿಂದೂಗಳ ವಾದವಾಗಿದೆ. ಆದರೆ ಈ ವಾದದಲ್ಲಿ ಅರ್ಥವಿಲ್ಲ, ಇದು ಕೇವಲ ಮಸೀದಿ ಎನ್ನುವುದು ಮುಸ್ಲಿಮರ ಪ್ರತಿವಾದ.
ಈ ವಾದ-ವಿವಾದ- ಪ್ರತಿವಾದಗಳ ನಡುವೆಯೇ ತಮಗೆ ಪೂಜೆಗೆ ಅವಕಾಶ ನೀಡುವಂತೆ ಕೋರಿ ಮಹಿಳೆಯರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಮೂರು ತಿಂಗಳಿಗೂ ಹೆಚ್ಚು ಕಾಲ ವಾದ-ಪ್ರತಿವಾದ ನಡೆದಿತ್ತು. ಈ ಪ್ರಕರಣ ಸುಪ್ರೀಂಕೋರ್ಟ್​ಗೂ ಹೋಗಿತ್ತು. ಸುಪ್ರೀಂಕೋರ್ಟ್​ ಸೂಚನೆ ಮೇರೆಗೆ ವಾರಣಾಸಿ ಕೋರ್ಟ್​, ಮಹಿಳೆಯರು ಸಲ್ಲಿಸಿರುವ ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಬಹುದೇ, ಬೇಡವೆ ಎಂಬ ಬಗ್ಗೆ ವಿಚಾರಣೆ ನಡೆಸಿತ್ತು.
ಇದೀಗ ತೀರ್ಪು ಪ್ರಕಟಗೊಂಡಿದ್ದು ಮಹಿಳೆಯರಿಗೆ ಜಯವಾಗಿದೆ. ಇದರಿಂದ ಹಿಂದೂಗಳಿಗೆ ಮೊದಲ ಹಂತದ ಜಯ ಸಿಕ್ಕಿದೆ. ಮುಂದಿನ ವಿಚಾರಣೆಯನ್ನು  ಕೋರ್ಟ್​ ಇದೇ 22ರಂದು ನಡೆಸಲಿದೆ.
ಇಂದು ತೀರ್ಪಿಗೂ ಮುನ್ನ ಕೋರ್ಟ್​ ಆವರಣದಲ್ಲಿ ಜಮಾಯಿಸಿದ್ದ ಹಿಂದೂ ಭಕ್ತರು ಪೂಜೆ ಸಲ್ಲಿಸಿದ ಘಟನೆ ಕೂಡ ನಡೆದಿದೆ. ಅರ್ಜಿದಾರ ಮಹಿಳೆಯರಿಗೆ ಶಾಲು ಹಾಕಿ ಸನ್ಮಾನ ಕೂಡ ಮಾಡಲಾಯಿತು. (ಏಜೆನ್ಸೀಸ್​)
ಬಿಜೆಪಿ ನಾಯಕಿ, ನಟಿ ಸೋನಾಲಿ ನಿಗೂಢ ಸಾವು: ತನಿಖೆಯನ್ನು ಸಿಬಿಐಗೆ ಒಪ್ಪಿಸಿದ ಗೋವಾ ಸಿಎಂ

‘ಭಾರತ ಐಕ್ಯತಾ ಯಾತ್ರೆ’ಯ ಸಭೆಯ ಬ್ಯಾನರ್​ನಲ್ಲಿ ಸಿದ್ದು ಮಿಸ್ಸಿಂಗ್​! ಅಭಿಮಾನಿಗಳಿಗೆ ತಳಮಳ

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಜಮ್ಮುವಿನ ಮುಸ್ಲಿಂ ಮುಖಂಡ: ರಾಷ್ಟ್ರಪತಿ ಆದೇಶ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:18 − two =
Remember me
