ವಾರಾಣಸಿ:ಇತ್ತೀಚಿನ ದಿನಗಳಲ್ಲಿ ಚಿಕ್ಕಪುಟ್ಟ ಕಾರಣಕ್ಕೂ ಹಿಂದೂಗಳ ಮೇಲೆ ಕೊಲೆ ಬೆದರಿಕೆ ಆಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಸಾಗಿವೆ. ಇದೀಗ ಜ್ಞಾನವಾಪಿ ಕೇಸ್​ ಮೇಲೆ ಪಾಕಿಸ್ತಾನಿಗಳ ಕಣ್ಣು ಬಿದ್ದಿದೆ. ಜ್ಞಾನವಾಪಿ ಮಸೀದಿ ಕುರಿತು ಅರ್ಜಿ ಸಲ್ಲಿಸಿರುವ ಕುಟುಂಬಕ್ಕೆ ಹಾಗೂ ದೇವಾಲಯದ ಪರ ವಕೀಲ  ಡಾ.ಸೋನಾಲಾಲ್​ ಆರ್ಯ ಅವರಿಗೆ ಪಾಕಿಸ್ತಾನದಿಂದ ಜೀವ ಬೆದರಿಕೆ ಕರೆ ಬಂದಿದೆ.
ವಾರಣಾಸಿಯ ಶೃಂಗಾರಗೌರಿ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆ ಆದ ಬಳಿಕ ಅದಕ್ಕೆ ಪೂಜೆ ಸಲ್ಲಿಸಲು ಅನುಮತಿ ಕೋರಿ ಐವರು ಮಹಿಳೆಯರು ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. ಈ ಮಹಿಳೆಯರ ಪೈಕಿ ಲಕ್ಷ್ಮೀದೇವಿ ಎನ್ನುವವರ ಕುಟುಂಬಕ್ಕೆ ಈಗ ಶಿರಚ್ಛೇದದ ಬೆದರಿಕೆ ಹಾಕಲಾಗಿದೆ. ಇವರ ಪತಿಗೆ ಪಾಕಿಸ್ತಾನದ ಸಂಖ್ಯೆಯಿಂದ ಕರೆ ಬಂದಿದ್ದು, ಪ್ರಕರಣದ ಅರ್ಜಿಯನ್ನು ವಾಪಸ್​ ಪಡೆಯಲು ಒತ್ತಡ ಹೇರಲಾಗಿದೆ.
ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾದ ಕೇಸ್​ ಕುರಿತು ಇಂದು ವಾರಾಣಸಿ ಕೋರ್ಟ್​ನಲ್ಲಿ ವಿಚಾರಣೆ ನಡೆಯಲಿದೆ. ಅದಕ್ಕೂ ಮೊದಲು ಈ ಬೆದರಿಕೆ ಕರೆ ಮಾಡಲಾಗಿದೆ.
ಒಂದು ವೇಳೆ ಈ ಕೇಸ್​ ವಾಪಸ್​ ಪಡೆಯದಿದ್ದರೆ ಶಿರಚ್ಛೇದ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿದೆ. ಮಾರ್ಚ್ 19, ಜುಲೈ 20 ಅಪರಿಚಿತ ವ್ಯಕ್ತಿಯೊಬ್ಬ ತನಗೆ ಕರೆ ಮಾಡಿದ್ದ. ಅದು ಪಾಕಿಸ್ತಾನದ ಸಂಖ್ಯೆಯಾಗಿದೆ. ಕರೆ ಸ್ವೀಕರಿಸಿದಾಗ, ಅರ್ಜಿ ವಾಪಸ್​ ಪಡೆಯದಿದ್ದರೆ ರಾಜಸ್ಥಾನದ ಕನ್ಹಯ್ಯಾ ಲಾಲ್​ನ ತಲೆ ಕಡಿದಂತೆ ನಿನ್ನ ಶಿರಚ್ಚೇದ ಮಾಡಲಾಗುವುದು ಎಂದು ಬೆದರಿಕೆ ಹಾಕಿದ್ದಾನೆ ಎಂದು ಲಕ್ಷ್ಮೀದೇವಿ ಅವರ ಪತಿ ಪೊಲೀಸರಿಗೆ ದೂರು ನೀಡಿದ್ದಾರೆ.
‘ಇದೇ 3ನೇ ತಾರೀಖಿನಂದು ಅದೇ ನಂಬರ್​​ನಿಂದ ಮಿಸ್ಡ್​ ಕಾಲ್​ ಬಂದಿದೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಬೆದರಿಕೆ ಕರೆಗಳು ಮುಂದುವರೆದಿದ್ದರಿಂದ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಅವರು ಹೇಳಿದ್ದಾರೆ. ದೂರಿಗೆ ಸಂಬಂಧಿಸಿದಂತೆ ಎಫ್​ಐಆರ್​ ದಾಖಲಾಗಿದೆ.
ಇಂದು ಅರ್ಜಿಯ ವಿಚಾರಣೆ ಇರುವ ಹಿನ್ನೆಲೆಯಲ್ಲಿ ದೇವಾಲಯದ ಪರ ವಾದಿಸುತ್ತಿರುವ ವಕೀಲ ಡಾ.ಸೋನಾಲಾಲ್​ ಆರ್ಯ ಅವರಿಗೆ ಜೀವ ಬೆದರಿಕೆ ಕರೆ ಬಂದಿದೆ. ಆದರೆ ಯಾವುದೇ ಬೆದರಿಕೆಗೂ ನಾವು ಜಗ್ಗುವುದಿಲ್ಲ ಎಂದು ವಕೀಲರು ಹೇಳಿದ್ದಾರೆ(ಏಜೆನ್ಸೀಸ್​)
ಬಿಜೆಪಿ ನಾಯಕಿ ನೂಪುರ್​ ಶರ್ಮಾ ಹತ್ಯೆಗೆ ನಿಯೋಜನೆಗೊಂಡಿದ್ದ ಉಗ್ರ ಅರೆಸ್ಟ್​: ಈತನದ್ದು ಭಯಾನಕ ಹಿಸ್ಟರಿ…

ಶಿವಮೊಗ್ಗದಲ್ಲಿ ಕೋಮು ಗಲಭೆ ಸೃಷ್ಟಿ: ಆರೋಪಿಗಳದ್ದು ಕರಾಳ ಇತಿಹಾಸ- ಈ ಹಿಂದೆಯೂ ಮಾಡಿದ್ದರು ಘೋರ ಕೃತ್ಯ!

VIDEO: ಗಾಡಿ ಸ್ಟಾರ್ಟ್​ ಮಾಡುವಾಗ ಇರಲಿ ಎಚ್ಚರ! ಮೈಸೂರು, ತುಮಕೂರಿನಲ್ಲಿ ಬೈಕ್​ ಒಳಗೆ ಕುಳಿತ ಬೃಹತ್​ ನಾಗರ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 + two =
Remember me
