ಚಂಡೀಗಢ:ಹರಿಯಾಣದಲ್ಲಿ ಅಕ್ಷರಶಃ ಆತಂಕ ಮನೆಮಾಡಿಬಿಟ್ಟಿದೆ. ಕರೊನಾ ವೈರಸ್​ನಿಂದ ಇನ್ನೇನು ಜನರು ಒಂದಷ್ಟು ಚೇತರಿಸಿಕೊಳ್ಳುತ್ತಿರುವಾಗಲೇ ಕೋಳಿಜ್ವರದಿಂದ ಇಡೀ ರಾಜ್ಯದ ಜನತೆ ಬೆಚ್ಚಿಬಿದ್ದಿದ್ದಾರೆ. ಇದಕ್ಕೆ ಕಾರಣ, ಕಳೆದೊಂದು ತಿಂಗಳಿನಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಕೋಳಿಗಳು ದಿಢೀರ್​ ಮೃತಪಟ್ಟಿವೆ.
ಈ ಕೋಳಿಗಳಲ್ಲಿ ಹಕ್ಕಿಜ್ವರ (ಎಚ್​5ಎನ್​8-ಏವಿಯನ್ ಇನ್​ಫ್ಲುಯೆನ್ಜಾ ) ವೈರಸ್​ ದೃಢಪಟ್ಟಿವೆ. ಈ ಕುರಿತು ಹರಿಯಾಣ ಸಚಿವ ಜೆ.ಪಿ. ದಲಾಲ್ ಖಚಿತಪಡಿಸಿದ್ದಾರೆ.
Over 4 lakh chickens died here in a month. We sent samples to Jalandhar. Samples from different poultry farms were also sent to Bhopal – samples from two of these were found positive for H5N8 (avian influenza): JP Dalal, Animal Husbandry & Dairying Fisheries Minister, Haryanapic.twitter.com/6WJO8EdZcp
— ANI (@ANI)January 8, 2021

ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಒಂದೇ ತಿಂಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಕೋಳಿಗಳ ನಿಗೂಢವಾಗಿ ಮೃತಪಟ್ಟಿವೆ. ವಿವಿಧ ಕೋಳಿ ಸಾಕಾಣಿಕೆ ಕೇಂದ್ರಗಳಲ್ಲಿನ ಕೋಳಿಗಳು ಅಸಾಮಾನ್ಯ ರೀತಿಯಲ್ಲಿ ಮೃತಪಟ್ಟಿದ್ದು, ಇವುಗಳ ಮಾದರಿಗಳನ್ನು ಭೋಪಾಲ್‌ಗೆ ಕಳುಹಿಸಲಾಗಿದೆ ಎಂದು ಹೇಳಿದರು.
ಇದಾಗಲೇ ಪರೀಕ್ಷೆ ಮಾಡಿರುವ ಕೋಳಿಗಳಲ್ಲಿ ಎಚ್​5ಎನ್​8-ಏವಿಯನ್ ಇನ್​ಫ್ಲುಯೆನ್ಜಾ ದೃಢಪಟ್ಟಿದೆ. ಆದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದಿದ್ದಾರೆ. ರಾಜ್ಯದಲ್ಲಿ ಹಕ್ಕಿ ಜ್ವರ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಶೇಷ ತಂಡಗಳನ್ನು ನಿಯೋಜಿಸಿದೆ.
ವಿಚ್ಛೇದನ ಕೊಟ್ಟ ನಂತರ ದಿಢೀರ್​ ಮರುಮದುವೆಯಾಗಲು ಬರುವುದಿಲ್ಲ…

ಕೋಳಿಗಳಲ್ಲಿ ಕಂಡುಬಂತು ಪಾಸಿಟಿವ್​: ಮಾಂಸದಂಗಡಿ ಮುಚ್ಚಲು ಆದೇಶಿಸಿದ ಮಧ್ಯಪ್ರದೇಶ ಸರ್ಕಾರ

2021 ಆರಂಭ ಕೊಡಲಿಲ್ಲ ಲಕ್​: ರಾಗಿಣಿ ಬೇಲ್​ ಅರ್ಜಿ ಮುಂದೂಡಿಕೆ

ಹೆಂಡದ ನಶೆ ಇಳಿಯುವ ಮುನ್ನ ಹೆಣವಾದ ವ್ಯಸನಿಗಳು! ತನಿಖೆಗೆ ಆದೇಶ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:15 − seven =
Remember me
