ನವದೆಹಲಿ:ಸುಪ್ರಸಿದ್ಧ ಕೇಶ ವಿನ್ಯಾಸಕಾರನೊಬ್ಬ ಮಹಿಳೆಯೊಬ್ಬರ ಕೇಶವನ್ನು ವಿನ್ಯಾಸಗೊಳಿಸುವಾಗ ನೀರಿನ ಬದಲು ಎಂಜಲು ಉಗಿದಿದ್ದು, ಇದರ ವಿಡಿಯೋ ವೈರಲ್‌ ಆಗಿದೆ. ‘ಹಲಾಲ್‌‘ ಹೆಸರಿನಲ್ಲಿ ಇದಾಗಲೇ ಕೆಲವೆಡೆ ಆಹಾರದ ಮೇಲೆ ಎಂಜಲು ಉಗುಳುತ್ತಿರುವ ವಿಡಿಯೋ ವೈರಲ್‌ ಆಗುತ್ತಿವೆ. ಕೇರಳ ಸೇರಿದಂತೆ ಹಲವೆಡೆಗಳಲ್ಲಿ ಇದರ ಚರ್ಚೆ ಇನ್ನೂ ನಡೆಯುತ್ತಿರುವಾಗಲೇ ಸುಪ್ರಸಿದ್ಧ ಕೇಶವಿನ್ಯಾಸಕಾರ ಜಾವೇದ್ ಹಬೀಬ್ ಮಾಡಿರುವ ಈ ಕಾರ್ಯಕ್ಕೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.ಮುಜಾಫರ್‌ನಗರದ ಕಿಂಗ್ ವಿಲ್ಲಾ ಹೋಟೆಲ್‌ನಲ್ಲಿ ಕೂದಲ ರಕ್ಷಣೆಯ ಕುರಿತು ಖಾಸಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು, ಇದರಲ್ಲಿ ಮುಖ್ಯ ಅತಿಥಿಯಾಗಿ ಈತನನ್ನು ಆಹ್ವಾನಿಸಲಾಗಿತ್ತು. ಆ ಸಂದರ್ಭದಲ್ಲಿ ಮಹಿಳೆಯೊಬ್ಬರಿಗೆ ಈತ ಕೇಶ ವಿನ್ಯಾಸ ಮಾಡುತ್ತಿದ್ದ. ಕೇಶ ವಿನ್ಯಾಸ ಮಾಡುವಾಗ ಸ್ಪ್ರೇ ಮಾಡಲು ನೀರಿನ ಅವಶ್ಯಕತೆ ಇತ್ತು. ಆದರೆ ಅಲ್ಲಿ ನೀರು ಇರದ ಹಿನ್ನೆಲೆಯಲ್ಲಿ ಮಹಿಳೆಯ ತಲೆಯ ಮೇಲೆ ಎಂಜಲು ಉಗಿದಿದ್ದಾನೆ.ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಈತ ಕ್ಷಮೆ ಕೋರಿದ್ದಾನೆ. ಆದರೆ ಈತನ ವಿರುದ್ಧ ಮನ್ಸೂರ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಭಾರತೀಯ ದಂಡ ಸಂಹಿತೆ, ಸಾಂಕ್ರಾಮಿಕ ಕಾಯ್ದೆ ಸೇರಿದಂತೆ ವಿವಿಧ ಕಲಮುಗಳ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.ಹೀಗೆ ಎಂಜಲು ಉಗುಳುವಾಗ ಸ್ವಲ್ಪವೂ ಮುಜುಗರ ಪಟ್ಟುಕೊಳ್ಳದೇ ತನ್ನ ಹೇರ್‌ಸ್ಟೈಲ್‌ ಪರಿಯನ್ನು ವರ್ಣಿಸುತ್ತಿರುವ ಜಾವೇದ‌, ‘ನೀರಿಲ್ಲದಿದ್ದರೆ ಎಂಜಲು ಉಗುಳಬಹುದು’ ಎಂದೂ ಹೇಳಿದ್ದಾನೆ. ಹೇಳುವುದನ್ನು ಕೇಳಬಹುದು. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮಹಿಳೆ, ‘ಜಾವೇದ್ ಹಬೀಬ್‌ನಂತ ಪ್ರಖ್ಯಾತ ತಾರೆಯ ಬಳಿ ಹೇರ್‌ಕಟ್‌ ಮಾಡಿಸಿಕೊಳ್ಳುವುದು ಎಂದು ತುಂಬಾ ಸಂತೋಷ ಪಟ್ಟಿದ್ದೆ. ಇಷ್ಟು ನೀಚ ಕಾರ್ಯ ಆತ ಮಾಡುತ್ತಾನೆ ಎಂದು ಅಂದುಕೊಂಡಿರಲಿಲ್ಲ. ಇಂಥ ಅನುಚಿತ ವರ್ತನೆ ನನಗೆ ಬೇಸರ ತರಸಿದೆ. ನಿಮ್ಮ ಬಳಿ ನೀರಿಲ್ಲದಿದ್ದರೆ, ಕೂದಲು ಕತ್ತರಿಸಲು ನೀವು ಉಗುಳನ್ನು ಸಹ ಬಳಸಬಹುದು ಎಂದಾಗ ನನಗೆ ಗಾಬರಿಯಾಯಿತು. ಇದೊಂದು ಅಸಹ್ಯ ಕೃತ್ಯ’ ಎಂದಿದ್ದಾರೆ.ರಾಷ್ಟ್ರೀಯ ಮಹಿಳಾ ಆಯೋಗವೂ ಘಟನೆಯ ಬಗ್ಗೆ ಗಮನಹರಿಸಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಜಾವೇದ್‌, ಇದು ಜೋಕ್‌ಗಾಗಿ ಮಾಡಿದ್ದೆ. ಯಾರಿಗಾದರೂ ಬೇಸರವಾಗಿದ್ದರೆ, ನೋವಾಗಿದ್ದರೆ ಹೃದಯದಿಂದ ಕ್ಷಮೆ ಕೇಳುತ್ತೇನೆ’ ಎಂದಿದ್ದಾನೆ!
ಇಲ್ಲಿದೆ ನೋಡಿ ವಿಡಿಯೋ
This video is too disgusting to post. But I think this should reach everyone! Shame on you#JavedHabibpic.twitter.com/aP9HJjYiJ9— Vikas Pandey (Sankrityayan) (@MODIfiedVikas)January 6, 2022
This video is too disgusting to post. But I think this should reach everyone! Shame on you#JavedHabibpic.twitter.com/aP9HJjYiJ9
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:ten − nine =
Remember me
