ಬೆಂಗಳೂರು:ಆಗಸದಲ್ಲಿ ನಡೆಯುವ ಕೌತುಕಗಳು ಅಷ್ಟಿಷ್ಟಲ್ಲ. ಕೆಲವೊಮ್ಮೆ ಈ ವಿಸ್ಮಯಗಳು ನಮ್ಮ ಕಣ್ಣಿಗೆ ಕಾಣಿಸುತ್ತವೆ. ಅಂಥದ್ದೇ ಒಂದು ವಿಸ್ಮಯ ಇದೀಗ ಆಕಾಶದಲ್ಲಿ ನಡೆಯುತ್ತಿದೆ.
ಸೂರ್ಯನ ಸುತ್ತಲೂ ಕಾಮನಬಿಲ್ಲಿನ ಆಕೃತಿಯ ಉಂಗುರ ಕಾಣಿಸುತ್ತಿದೆ. ಇದನ್ನು ಇಂಗ್ಲಿಷ್‌ನಲ್ಲಿ ಹ್ಯಾಲೋಸ್‌ ಎಂದು ಕರೆಯುತ್ತಾರೆ. ಸೂರ್ಯನಿಗೆ ಕೈಯನ್ನು ಅಡ್ಡವಾಗಿಟ್ಟುಕೊಂಡು ನೋಡಿದರೆ ಈ ದೃಶ್ಯವನ್ನು ಕಣ್ತುಂಬಿಸಿಕೊಳ್ಳಬಹುದು. ಈ ಸೂರ್ಯನ ಸುತ್ತಲಿರುವ ಉಂಗುರದ ಒಳಭಾಗದಲ್ಲಿ ಕೆಂಪು ಮತ್ತು ಹೊರಭಾಗದಲ್ಲಿ ನೀಲಿ ಬಣ್ಣ ಕಾಣಿಸುತ್ತದೆ. ಆಯಾ ಊರುಗಳ ಹವಾಮಾನಕ್ಕೆ ತಕ್ಕಂತೆ ಇದು ಗೋಚಾರವಾಗುತ್ತದೆ. ಬೆಂಗಳೂರು ಸೇರಿದಂತೆ ಕೆಲವು ಊರುಗಳಲ್ಲಿ ಈ ದೃಶ್ಯವನ್ನು ಈಗಲೇ ಕಣ್ತುಂಬಿಸಿಕೊಳ್ಳಬಹುದಾಗಿದೆ.
ಇಂಥದ್ದೊಂದು ಸುಂದರ ದೃಶ್ಯ ಮಳೆಗಾಲದ ಆರಂಭದ ದಿನಗಳಲ್ಲಿ ಅಪರೂಪವಾಗಿ ಕಾಣಬಹುದಾಗಿದೆ. ಹಿಮಾಲಯದಲ್ಲಿ ಈ ದೃಶ್ಯ ಸರ್ವೇ ಸಾಮಾನ್ಯ. ಅಷ್ಟಕ್ಕೂ ಈ ರೀತಿಯ ಉಂಗುರ ಸೃಷ್ಟಿಯಾಗಲು ಕಾರಣವೆಂದರೆ ಮಳೆಗಾಲದಲ್ಲಿ ಮಳೆಹನಿಯ ಕಣಗಳನ್ನು ಮೋಡಗಳು ತುಂಬಿಕೊಂಡಾಗ ಸೂರ್ಯನ ಕಿರಣಗಳು ಆ ಮಳೆ ಹನಿಯ ಕ್ರಿಸ್ಟಲ್ ಕಣಗಳ ಮೇಲೆ ಬೀಳುತ್ತವೆ. ಈ ಸಮಯದಲ್ಲಿ ವಕ್ರೀಭವನ ಉಂಟಾಗಿ ಈ ದೃಶ್ಯ ಕಾಣಸಿಗುತ್ತದೆ.
ಸುಪ್ರಸಿದ್ಧ ವಿಜ್ಞಾನಿ ಅರಿಸ್ಟಾಟಲ್ ಹ್ಯಾಲೋಸ್ ಬಗ್ಗೆ ಮೊದಲ ಬಾರಿಗೆ ಪ್ರಸ್ತಾಪಿಸಿದ್ದ. 1630ರಲ್ಲಿ ಯುರೋಪ್‌ನ ವಿಜ್ಞಾನಿ ಕ್ರಿಸ್ಟೋಫ್ ಶೀನರ್ ಇವುಗಳ ಕುರಿತಂತೆ ಸಾಕಷ್ಟು ಅಧ್ಯಯನ ವರದಿ ನೀಡಿದ್ದ. ಚೀನಾದ ಪುರಾತನ ಖಗೋಳಶಾಸ್ತ್ರಜ್ಞರು ಇದನ್ನು ಶತಮಾನಗಳ ಕಾಲ ಅಧ್ಯಯನ ಮಾಡಿದ ಬಳಿಕ ಈ ಉಂಗುರದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ದೊರೆತಿದ್ದವು.
ಭೂಮಿಯ ಮೇಲೆ ತಾನೆ ಕರೊನಾ, ರೂಲ್ಸ್‌ ಎಲ್ಲಾ ಇರೋದು… ಅದಕ್ಕೇ ಚೆನ್ನೈ ಜೋಡಿ ಮದ್ವೆಯಾದದ್ದು ಹೀಗೆ…

ಪ್ರೀತಿಯಲ್ಲಿ ಸಿಲುಕಿಬಿಟ್ಟ ಅಣ್ಣ-ತಂಗಿ! ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗೋಣ ಎಂದು ಬರೆದಿಟ್ಟು ಆತ್ಮಹತ್ಯೆ

ಲಾಕ್‌ಡೌನ್‌ ವೇಳೆ ಮಂಗಳೂರಿನಲ್ಲಿ ಪ್ರತ್ಯಕ್ಷವಾದ ‘ಮತ್ಸ್ಯಕನ್ಯೆ‘! ಜಾಲತಾಣದ ತುಂಬ ಈಕೆಯದ್ದೇ ಹವಾ..

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:20 − 8 =
Remember me
