ಲಖನೌ:ಈತನ ಎತ್ತರ 2 ಅಡಿ ಮೂರು ಇಂಚು. ಹೆಸರು ಅಜೀಮ್​ ಮನ್ಸೂರಿ. ಎಲ್ಲಾ ಸರಿಯಿರುವವರಿಗೆ ಇಂದಿನ ದಿನಗಳಲ್ಲಿ ಹೆಣ್ಣು ಸಿಗುವುದು ಬಹಳ ಕಷ್ಟ ಎನ್ನುವಂತಾಗಿದೆ ಸ್ಥಿತಿ. ಹಾಗಿದ್ದ ಮೇಲೆ ಈ ಕುಳ್ಳ ಯುವಕನಿಗೆ ಯಾರು ತಾನೆ ಹೆಣ್ಣು ಕೊಟ್ಟಾರು ಎಂದು ಎಲ್ಲರೂ ಅಂದುಕೊಂಡವರೇ.
ಅದೇ ರೀತಿ ಅಜೀಮ್​ ಕೂಡ ತನಗೆ ಮದುವೆಯಾಗುವುದಿಲ್ಲ ಎಂದು ತುಂಬಾ ನೊಂದುಕೊಂಡಿದ್ದ. ಅಷ್ಟೇ ಅಲ್ಲದೇ ತನಗೊಂದು ಮದುವೆ ಮಾಡಿಸಿ ಎಂದು ಕಂಡುಕಂಡವರ ಬಳಿ ಗೋಳು ತೋಡಿಕೊಂಡಿದ್ದ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಹಾಕಿಕೊಂಡು ತನ್ನನ್ನು ಯಾರಾದರೂ ಮದುವೆಯಾಗಿಯಪ್ಪ ಎಂದು ಹೇಳಿಕೊಂಡಿದ್ದ.
ಇಷ್ಟೇ ಆಗಿದ್ದರೆ ಪರಿವಾಗಿಲ್ಲ. ಈಗ ರಾಜಕೀಯ ಮುಖಂಡರ ಬಳಿ, ಮಾಜಿ ಮುಖ್ಯಮಂತ್ರಿ ಬಳಿ, ವಿವಿಧ ಇಲಾಖೆಗಳ ಅಧಿಕಾರಿಗಳ ಕೈ ಕಾಲು ಕೂಡ ಹಿಡಿದಿದ್ದ.ಆದರೆ ಇದೀಗ ಈತನ ಅದೃಷ್ಟ ಖುಲಾಯಿಸಿಬಿಟ್ಟಿದೆ. ಅದು ಎಷ್ಟರಮಟ್ಟಿಗೆ ಎಂದರೆ ಈಗ ಯಾರನ್ನು ಮದುವೆಯಾಗುವುದು ಎನ್ನುವ ತಲೆನೋವು ಶುರುವಾಗಿಬಿಟ್ಟಿದೆ ಈತನಿಗೆ. ಯಾರನ್ನು ಆಯ್ಕೆ ಮಾಡಲಿ ಎನ್ನುವುದೇ ತಿಳಿಯುತ್ತಿಲ್ಲವಂತೆ!
ಹೌದು. ಕೇಳಲು ಅಚ್ಚರಿ ಎನಿಸುವ ಘಟನೆ ನಡೆದೇ ಬಿಟ್ಟಿದೆ. ಈತ ತಮಗೆ ಮದುವೆ ಮಾಡಿಸಿ ಎಂದು ಕೋರಿ ಶಾಮ್ಲಿಯ ಮಹಿಳಾ ಪೊಲೀಸ್ ಠಾಣೆಗೆ ಹೋಗಿ ಮನವಿ ಸಲ್ಲಿಸಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಈತನನ್ನು ಕಂಡ ಹುಡುಗಿಯರು ಈಗ ಕ್ಯೂನಲ್ಲಿ ನಿಂತಿದ್ದಾರಂತೆ. ಗಾಜಿಯಾಬಾದ್, ಬುಲಂದ್‌ಶಹರ್, ದೆಹಲಿ, ಬಿಹಾರ ಮತ್ತು ಇತರ ಹಲವು ಸ್ಥಳಗಳಿಂದ ಮದುವೆ ಆಫರ್​ ಬರುತ್ತಿವೆಯಂತೆ. ಆದ್ದರಿಂದ ಯಾರನ್ನು ಸೆಲೆಕ್ಟ್​ ಮಾಡಲಿ ಎಂಬ ಗೊಂದಲದಲ್ಲಿ ಈತ ಇದ್ದಾನೆ. ನಂತರ ಯಾರನ್ನು ಮದುವೆಯಾಗಲಿ ಎಂದು ಎಲ್ಲರ ಫೋಟೋ, ಡಿಟೇಲ್ಸ್​ ಇಟ್ಟು ಪಾಲಕರನ್ನು ಕೇಳಿದ್ದಾರೆ. ಅವರಿಗೂ ತಲೆಬಿಸಿಯಾಗಿ ನಿನಗೆ ಯಾರು ಇಷ್ಟವಾಗುತ್ತದೆಯೋ ಅವರನ್ನು ಆಗು ಅಂದಿದ್ದಾರೆ.
ಸದ್ಯ ದೆಹಲಿಯ ಹುಡುಗಿಯೊಬ್ಬಳ ಮೇಲೆ ಅಜೀಮ್​ ಮನಸ್ಸು ನಾಟಿದೆ. ಆದರೆ ತನ್ನ ಪ್ರೇಮ ನಿವೇದನೆ ಮಾಡಿಕೊಂಡು ವಿಡಿಯೋ ಒಂದನ್ನು ಕಳುಹಿಸಿದ್ದಾಳೆ. ಅಜೀಮ್​ನನ್ನು ಇಷ್ಟಪಡುವುದಾಗಿ ಹೇಳಿದ್ದಾಳೆ. ಮದುವೆ ಪ್ರಸ್ತಾಪದಿಂದ ಖುಷಿಯಾಗಿರುವ ಅಜೀಮ್ ಹಾಡು ಬರೆಯಲು ಶುರು ಮಾಡಿದ್ದಾನಂತೆ.
ಎಂಟು ಅತ್ಯುನ್ನತ ಬ್ರಾಹ್ಮಣ ಗೋತ್ರಗಳಲ್ಲಿ ಒಂದಾದ ಶಾಂಡಿಲ್ಯದಲ್ಲಿ ಜನಿಸಿದವಳು ನಾನು ಗೊತ್ತಾ?

ದೀದಿ ನಾಡಲ್ಲಿ ಮತ್ತೆ ರೌಡಿಸಂ: ಬಿಜೆಪಿ ಅಭ್ಯರ್ಥಿಯ ಕಾರಿನ ಮೇಲೆ ದಾಳಿ ನಡೆಸಿ ತೀವ್ರ ಹಲ್ಲೆ

ಪೊಲೀಸ್​ ಠಾಣೆಯಲ್ಲಿದ್ದ ಸಾವಿರಾರು ಬಾಕ್ಸ್​ ಮದ್ಯದ ಬಾಟಲ್​ ನಾಪತ್ತೆ… ಇಲಿಯ ಕೆಲಸ ಎಂದ್ರು ಅಧಿಕಾರಿಗಳು!

ಹುಡುಗಿ ಸಿಕ್ಕಳೆಂದು ದೈಹಿಕ ಸಂಪರ್ಕ ಮಾಡುವಾಗ ಅಮ್ಮ ನೆನಪಾಗಿಲ್ವಾ? ಮದ್ವೆ ವಿಷ್ಯ ಬಂದಾಗ ನೆನಪಾಗ್ತಾರಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × five =
Remember me
