ಜಮ್ಮು:1990ರ ದಶಕದಲ್ಲಿ ನಡೆದ ಕಾಶ್ಮೀರಿ ಪಂಡಿತರ ಹತ್ಯೆಗೆ ನಾನೇ ಹೊಣೆ ಎಂಬುದು ಸತ್ಯವಾದರೆ, ಈ ದೇಶದ ಯಾವುದೇ ಮೂಲೆಗೆ ಕರೆದುಕೊಂಡು ಹೋಗಿ ನೇಣಿಗೇರಿಸಿದರೂ ಅದಕ್ಕೆ ನಾನು ಸಿದ್ಧನಿದ್ದೇನೆ ಎಂದು ಜಮ್ಮು-ಕಾಶ್ಮೀರ ನ್ಯಾಶನಲ್ ಕಾನ್ಫರೆನ್ಸ್​ ಮುಖ್ಯಸ್ಥ, ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿದರು.
ಕಾಶ್ಮೀರಿ ಪಂಡಿತರ ಹತ್ಯೆಗೆ ಸಂಬಂಧಪಟ್ಟಂತೆ ತನಿಖೆ ನಡೆಸಲು ಪ್ರಾಮಾಣಿಕ ನ್ಯಾಯಾಧೀಶರ ಸಮಿತಿಯನ್ನು ರಚನೆ ಆಗಬೇಕಿದೆ. ಆಗಷ್ಟೇ ಅಂದು ನಡೆದಿರುವ ಸತ್ಯ ಹೊರಬೀಳುತ್ತದೆ. ದುರಂತಕ್ಕೆ ಫಾರೂಕ್​ ಅಬ್ದುಲ್ಲಾರೇ ಹೊಣೆ ಎಂಬುದು ಸತ್ಯವಾದರೆ, ಈ ದೇಶದ ಯಾವುದೇ ಮೂಲೆಗೆ ಕರೆದುಕೊಂಡು ಹೋಗಿ ನೇಣಿಗೇರಿಸಿದರೂ ಅದಕ್ಕೆ ನಾನು ಸಿದ್ಧನಿದ್ದೇನೆ. ಇದರ ತನಿಖೆಯಾಗಲಿ ಎಂದು ಸವಾಲು ಎಸೆದಿದ್ದಾರೆ.
ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರಕ್ಕೆ ಸಂಬಂಧಿಸಿದಂತೆ ಅವರು ಈ ಹೇಳಿಕೆ ನೀಡಿದ್ದಾರೆ. ಬಿಜೆಪಿ ಆಡಳಿತದಲ್ಲಿರುವ ಕೆಲವು ಸರ್ಕಾರಗಳು ದಿ ಕಾಶ್ಮೀರಿ ಫೈಲ್ಸ್​ ಸಿನಿಮಾಕ್ಕೆ ತೆರಿಗೆ ವಿನಾಯಿತಿ ಘೋಷಿಸುತ್ತಿವೆ. ಈ ಮೂಲಕ ಜನರ ಹೃದಯದಲ್ಲಿ ನಮ್ಮ ಬಗ್ಗೆ ಇನ್ನಷ್ಟು ದ್ವೇಷ ಹುಟ್ಟುವಂತೆ ಮಾಡುತ್ತಿವೆ ಎಂದಿದ್ದಾರೆ. ತೆರಿಗೆ ವಿನಾಯಿತಿ ಘೋಷಣೆ ಮಾಡುವ ಜತೆಗೆ ಸಿನಿಮಾವನ್ನು ಪ್ರತಿಯೊಬ್ಬರೂ ನೋಡಿ ಎಂಬ ಕರೆ ನೀಡಲಾಗುತ್ತಿದೆ. ಪ್ರತಿಯೊಬ್ಬ ಯೋಧ, ಪೊಲೀಸ್​ ಕೂಡ ಈ ಚಿತ್ರ ನೋಡಬೇಕು ಎಂದು ಸಾರಲಾಗುತ್ತಿದೆ. ಇದರಿಂದಾಗಿ ಜನರಿಗೆ ನಮ್ಮ ಬಗ್ಗೆ ಇನ್ನಷ್ಟು ದ್ವೇಷ ಹುಟ್ಟಿಕೊಳ್ಳುತ್ತದೆ ಎಂದು ಅವರು ಆರೋಪಿಸಿದ್ದಾರೆ.
ಕೆಲವರು ನನ್ನನ್ನೂ ಈ ಹತ್ಯಾಕಾಂಡಕ್ಕೆ ಗುರಿ ಮಾಡುತ್ತಿದ್ದಾರೆ. ಸತ್ಯಾಂಶ ಹೊರಬರಬೇಕಿದೆ. ಅದು ಬಿಟ್ಟು ಸುಮ್ಮನೆ ಯಾರನ್ನೋ ಹೊಣೆ ಮಾಡಬಾರದು. ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯಕ್ಕೆ ನಾನು ಹೊಣೆಗಾರನಲ್ಲ. ಈ ಬಗ್ಗೆ ಸತ್ಯ ತಿಳಿದುಕೊಳ್ಳಲು ಇಚ್ಛಿಸುವವರು, ಆ ಸಮಯದಲ್ಲಿ ಗುಪ್ತಚರ ಇಲಾಖೆ ಮುಖ್ಯಸ್ಥನಾಗಿದ್ದವರ ಬಳಿ ಮಾತನಾಡಬೇಕು. ಇಲ್ಲವೇ ಕೇರಳದ ಈಗಿನ ರಾಜ್ಯಪಾಲ ಆರಿಫ್ ಮೊಹಮ್ಮದ್​ ಖಾನ್​ ಅವರನ್ನೂ ಕೇಳಬಹುದು. ಯಾಕೆಂದರೆ ಆ ಸಮಯದಲ್ಲಿ ಅವರು ಕೇಂದ್ರ ಸಚಿವರಾಗಿದ್ದರು ಎಂದು ಹೇಳಿದ್ದಾರೆ.
ನಿದ್ದೆಗೆಡಿಸಿದ ‘ದಿ ಕಾಶ್ಮೀರ್​ ಫೈಲ್ಸ್’​: ಸಿನಿಮಾ ನೋಡಿ ಮರಳುತ್ತಿದ್ದ ಬಿಜೆಪಿ ಸಂಸದನ ಕಾರಿನ ಮೇಲೆ ಬಾಂಬ್‌!

ಮತಾಂತರಕ್ಕೆ ಒಪ್ಪದ ಯುವತಿಯನ್ನು ನಡುರಸ್ತೆಯಲ್ಲಿಯೇ ಮನಬಂದಂತೆ ಗುಂಡು ಹಾರಿಸಿ ಬರ್ಬರ ಹತ್ಯೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 + 16 =
Remember me
