ಅಹಮದಾಬಾದ್:ಗುಜರಾತ್​ನ​​ ಪ್ರಭಾವಿ ಪಟೇಲ್​ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ (28) ಕಾಂಗ್ರೆಸ್​ನ ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ರಾಜಕೀಯ ವಲಯದಲ್ಲಿಯೇ ಭಾರಿ ಕುತೂಹಲಕ್ಕೆ ಕಾರಣವಾಗಿದ್ದರೆ, ಅವರ ರಾಜೀನಾಮೆ ಪತ್ರದಲ್ಲಿ ಇರುವ ಕೆಲವು ಅಂಶಗಳು ಕಾಂಗ್ರೆಸ್​ಗೆ ಭಾರಿ ಮುಜುಗರವನ್ನುಂಟು ಮಾಡುವಂತಿದೆ.
2015ರಲ್ಲಿ ಗುಜರಾತ್​ನಲ್ಲಿ ಪಟೇಲ್ ಸಮುದಾಯದ ಮೀಸಲಾತಿ ಚಳವಳಿ ಮುನ್ನಡೆಸುವ ಮೂಲಕ ಮುನ್ನೆಲೆಗೆ ಬಂದಿದ್ದರು. 2019ರಲ್ಲಿ ಕಾಂಗ್ರೆಸ್​ನ ರಾಷ್ಟ್ರನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು. ಪ್ರಭಾವಿ ಯುವ ನಾಯಕ ಎಂದೇ ಗುರುತಿಸಿಕೊಂಡಿದ್ದ ಹಾರ್ದಿಕ್​ ಪಟೇಲ್​ ಬಿಜೆಪಿ ಸೇರಲಿದ್ದಾರೆ ಎಂಬ ವದಂತಿ ದಟ್ಟವಾಗುತ್ತಿದೆ. ಇದಕ್ಕೆ ಕಾರಣ ಅವರು ತಮ್ಮ ಸುದೀರ್ಘ ರಾಜೀನಾಮೆ ಪತ್ರದಲ್ಲಿ ಬರೆದಿರುವ ಕೆಲವು ವಿಷಯಗಳು.
ನಮ್ಮ ದೇಶವು ಸವಾಲುಗಳನ್ನು ಎದುರಿಸುತ್ತಿದ್ದಾಗ, ಕಾಂಗ್ರೆಸ್‌ಗೆ ನಾಯಕತ್ವದ ಅಗತ್ಯವಿದ್ದಾಗ, ಕಾಂಗ್ರೆಸ್ ನಾಯಕರು ವಿದೇಶದಲ್ಲಿ ಆನಂದಿಸುತ್ತಿದ್ದರು ಎಂದು ಸಂಸದ ರಾಹುಲ್​ ಗಾಂಧಿ ಮತ್ತು ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಪರೋಕ್ಷವಾಗಿ ತಿವಿದಿದ್ದಾರೆ.
ಕಾಂಗ್ರೆಸ್​ ಸರಿಯಾದ ಮಾರ್ಗಸೂಚಿಗಳನ್ನು ಹೊಂದಿಲ್ಲ. ಯಾವುದೇ ವಿಷಯಗಳನ್ನು ಇಲ್ಲಿನ ನಾಯಕರು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಅದರಲ್ಲಿಯೂ ಗುಜರಾತ್​ ಮತ್ತು ಗುಜರಾತಿಗಳನ್ನು ಕಂಡರೆ ಅವರಿಗೆ ದ್ವೇಷ ಎಂದು ಹಾರ್ದಿಕ್​ ಕಿಡಿ ಕಾರಿದ್ದಾರೆ.
आज मैं हिम्मत करके कांग्रेस पार्टी के पद और पार्टी की प्राथमिक सदस्यता से इस्तीफा देता हूँ। मुझे विश्वास है कि मेरे इस निर्णय का स्वागत मेरा हर साथी और गुजरात की जनता करेगी। मैं मानता हूं कि मेरे इस कदम के बाद मैं भविष्य में गुजरात के लिए सच में सकारात्मक रूप से कार्य कर पाऊँगा।pic.twitter.com/MG32gjrMiY
— Hardik Patel (@HardikPatel_)May 18, 2022

ಪಕ್ಷದ ಸಭೆಯಲ್ಲಿ ಭಾಗವಹಿಸಲು ಮತ್ತು ಸಮಸ್ಯೆಗಳನ್ನು ಚರ್ಚಿಸಲು ಬಿಜೆಪಿಯ ಕಾರ್ಯಕರ್ತರು 500-600 ಕಿಲೋಮೀಟರ್ ಪ್ರಯಾಣಿಸುತ್ತಿದ್ದರೆ, ಕಾಂಗ್ರೆಸ್​ನ ಕೆಲವು ನಾಯಕರು ದೆಹಲಿಯ ಕೆಲವು ಹಿರಿಯ ಕಾಂಗ್ರೆಸ್ ನಾಯಕರಿಗೆ ಸಮಯಕ್ಕೆ ಸರಿಯಾಗಿ ಚಿಕನ್ ಸ್ಯಾಂಡ್‌ವಿಚ್ ಸಿಕ್ಕಿತೇ ಎಂದು ಖಚಿತಪಡಿಸಿಕೊಳ್ಳುವುದರಲ್ಲಿ ನಿರತರಾಗಿದ್ದಾರೆ ಎಂದು ಕಿಡಿ ಕಾರಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಲಿ, ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿ ರದ್ದತಿಯಾಗಲಿ, ಜಿಎಸ್‌ಟಿಯ ಅನುಷ್ಠಾನವಾಗಲಿ ಇವೆಲ್ಲವೂ ಭಾರತಕ್ಕೆ ಅಗತ್ಯ ಇರುವಂಥದ್ದು. ಭಾರತ ಸದಾ ಈ ಬದಲಾವಣೆಯನ್ನು ಬಯಸಿತ್ತು. ಭಾರತ ಸುದೀರ್ಘವಾಗಿ ಬಯಸಿದ್ದ ಪರಿಹಾರ ನಿಜಕ್ಕೂ ಸಿಕ್ಕಿದೆ. ಆದರೆ ಕಾಂಗ್ರೆಸ್​ಗೆ ಅದ್ಯಾವುವೂ ಬೇಕಾಗಿರಲಿಲ್ಲ. ಆಡಳಿತ ಪಕ್ಷ ಏನು ಮಾಡಿದರೂ ಅದಕ್ಕೆ ಅಡ್ಡಗಾಲು ಹಾಕುವುದೇ ತನ್ನ ಕೆಲಸದಂತೆ ವರ್ತಿಸಿತು. ಈ ಎಲ್ಲಾ ಮಹತ್ವದ ವಿಚಾರಗಳಲ್ಲಿ ರಸ್ತೆ ತಡೆ ಮಾಡಿ, ಅಡ್ಡಗಾಲು ಹಾಕಲು ಪ್ರಯತ್ನಿಸಿತು. ಇವೆಲ್ಲವೂ ಕಾಂಗ್ರೆಸ್​ ಇಂದು ಈ ಸ್ಥಿತಿಗೆ ಬರಲು ಕಾರಣ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಭಾರತ, ಗುಜರಾತ್ ಮತ್ತು ನನ್ನ ಪಾಟಿದಾರ್ ಸಮುದಾಯಕ್ಕೆ ಸಂಬಂಧಿಸಿದ ವಿಷಯಗಳಿಗೆ ಬಂದಾಗ ಪ್ರಧಾನಿ ನರೇಂದ್ರ ಮೋದಿ ಜಿ ನೇತೃತ್ವದ ಭಾರತ ಸರ್ಕಾರ ಏನೇ ಮಾಡಿದರೂ ಅದನ್ನು ವಿರೋಧಿಸುವುದು ಕಾಂಗ್ರೆಸ್‌ನ ಏಕೈಕ ನಿಲುವಾಗಿತ್ತು. ಇವೆಲ್ಲಾ ಕಾರಣಗಳಿಂದಲೇ ಪ್ರತಿಯೊಂದು ರಾಜ್ಯದಲ್ಲೂ ಕಾಂಗ್ರೆಸ್ ತಿರಸ್ಕರಿಸಲ್ಪಟ್ಟಿದೆ. ಏಕೆಂದರೆ ಪಕ್ಷ ಮತ್ತು ಅದರ ನಾಯಕತ್ವವು ಜನರಿಗೆ ಮೂಲಭೂತ ಮಾರ್ಗಸೂಚಿಯನ್ನು ಪ್ರಸ್ತುತಪಡಿಸಲು ಸಾಧ್ಯವಾಗಲಿಲ್ಲ ಎಂದಿದ್ದಾರೆ ಹಾರ್ದಿಕ್​.
ಮದುವೆ ಗಿಫ್ಟ್​ ತೆರೆದ ವಧು-ವರರು ಆಸ್ಪತ್ರೆಗೆ ದಾಖಲು! ಅಕ್ಕನ ಬಾಯ್​ಫ್ರೆಂಡ್​ ತಂದಿಟ್ಟ ಮಹಾ ಸಂಕಟ

ಬಾಲಿವುಡ್​ ಬೆಡಗಿಯರ ಬುಟ್ಟಿಗೆ ಬೀಳಿಸಿ ಕಂಬಿ ಎಣಿಸ್ತಿರೋ ಈತನಿಗೆ ನೆನಪಾಗ್ತಿದ್ದಾಳಂತೆ ಪತ್ನಿ! ಜೈಲಲ್ಲೇ ಉಪವಾಸ

15 ಮಂದಿ ಅಕೌಂಟ್‌ಗೆ ಎಸ್‌ಬಿಐನಿಂದ 1.5 ಕೋಟಿ ರೂ: ಮೋದಿ ಕೊಟ್ಟರೆಂದು ಕುಣಿದಾಡಿದ ಗ್ರಾಹಕರು- ಆಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + eleven =
Remember me
