ಕರ್ನಲ್ :ಹರಿಯಾಣದ ಪಟಾಕಿ ಕಾರ್ಖಾನೆಯೊಂದರಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಮೃತಪಟ್ಟಿರುವುದಾಗಿ ವರದಿಯಾಘಿದೆ.ಕರ್ನಲ್‌ನಲ್ಲಿ ಇರುವ ಪಟಾಕಿ ಕಾರ್ಖಾನೆಯಲ್ಲಿ ಈ ದುರಂತ ಸಂಭವಿಸಿದೆ. ನಿನ್ನೆ ತಡರಾತ್ರಿ ಈ ದುರ್ಘಟನೆ ನಡೆದಿದೆ.
ಕಾರ್ಖಾನೆಯಲ್ಲಿ ಕಾರ್ಮಿಕರು ಅತ್ಯಧಿಕ ಪ್ರಮಾಣದಲ್ಲಿ ಇಲ್ಲದಿದ್ದುದರಿಂದ ಭಾರ ಅನಾಹುತ ತಪ್ಪಿದೆ. ಆದರೆ ಕೆಲಸ ಮಾಡುತ್ತಿದ್ದ ಮೂವರು ಅಗ್ನಿಗೆ ಆಹುತಿಯಾಗಿದ್ದು, ಕೆಲಸ ನಿರ್ವಹಿಸುತ್ತಿದ್ದ ಕೆಲ ಕೆಲಸಗಾರರ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.
ಮೃತರನ್ನು ಇನ್ನೂ ಗುರುತಿಸಲಾಗಲಿಲ್ಲ ಮತ್ತು ಇವರೆಲ್ಲರೂ ಪಟಾಕಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ವಲಸೆ ಕಾರ್ಮಿಕರಾಗಿದ್ದರು ಎಂದು ಪೊಲೀಸ್ ಅಧೀಕ್ಷಕ ಗಂಗಾರಾಮ್ ಪುನಿಯ ತಿಳಿಸಿದ್ದಾರೆ.
ಈ ಸ್ಫೋಟಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಸ್ಫೋಟದಿಂದಾಗಿ ಕಾರ್ಖಾನೆಯ ಬಹುಭಾಗಹಾನಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಮೃತಪಟ್ಟವರ ಕುಟುಂಬಸ್ಥರಿಗೆ ಮಾಹಿತಿ ತಲುಪಿಸಿದ್ದೇವೆ. ಗಾಯಗೊಂಡವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಕಾರಣವನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ತಿರುಮಲ ವೆಂಕಟೇಶನಿಗೆ ಭಕ್ತನಿಂದ ಮೂರೂವರೆ ಕೆ.ಜಿ ತೂಕದ ಚಿನ್ನದ ಶಂಖ-ಚಕ್ರ: ಇದರ ಬೆಲೆ ಊಹಿಸುವಿರಾ?

ಕ್ರಯ ಪತ್ರ ನೋಂದಾಯಿತವಾಗಿದ್ದರೆ ಕೇಸ್‌ ಹಾಕಿದರೆ ಯಾವುದೇ ರೀತಿಯಲ್ಲಿ ಯೋಜನವಿಲ್ಲ

ತಿಮ್ಮಪ್ಪನ ದರ್ಶನ ಪಡೆದು ಬರುತ್ತಿದ್ದ ವೇಳೆ ಹಾವೇರಿಯಲ್ಲಿ ಅಪಘಾತ: ರಕ್ಷಣಾಸಿಬ್ಬಂದಿ ಹರಸಾಹಸ

VIDEO: ಹೊಡಿಮಗ… ಹೊಡಿಮಗ… ಗ್ರಾಹಕರಿಗಾಗಿ ಚಾಟ್‌ ಅಂಗಡಿಯ ಮಾಲೀಕರ ಫಿಲ್ಮಿಸ್ಟೈಲ್‌ ಫೈಟಿಂಗ್‌

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − six =
Remember me
