ನವದೆಹಲಿ:ಹಾಥರಸ್​ನಲ್ಲಿ 19 ವರ್ಷದ ಯುವತಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ಆಳಕ್ಕೆ ಹೋದಷ್ಟೂ ಬರೀ ಪ್ರಶ್ನೆಗಳೇ ತುಂಬಿಕೊಂಡಿರುವಂತೆ ತೋರುತ್ತಿದೆ. ಮೇಲ್ನೋಟಕ್ಕೆ ಕಂಡುಬಂದಂತೆ ಈ ಪ್ರಕಣದಲ್ಲಿ ಯಾವುದೂ ನಿಜಾಂಶ ಇಲ್ಲವೇ ಎಂಬ ಸಂದೇಹ ಕಾಡತೊಡಗುತ್ತದೆ.
ಇದು ಅತ್ಯಾಚಾರ ಹೌದೇ, ಅಲ್ಲವೇ ಎಂಬ ಬಗ್ಗೆ ಈಗಾಗಲೇ ಹಲವಾರು ಗುಮಾನಿಗಳು ಎದ್ದಿರುವುದು ಒಂದೆಡೆಯಾದರೆ, ಈ ಪ್ರಕರಣವನ್ನು ಮುಂದುಮಾಡಿಕೊಂಡು ಕೆಲವು ರಾಜಕೀಯ ಧುರೀಣರು, ಬೇಳೆ ಬೇಯಿಸಿಕೊಳ್ಳುತ್ತಿರುವ ಬಗ್ಗೆ ಪೊಲೀಸ್​ ಇಲಾಖೆಗೆ ಇದಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳು ದೊರೆತಿರುವುದು ಇನ್ನೊಂದೆಡೆ.
ಇದೀಗ ಯುವತಿಯ ಮೇಲೆ ಅತ್ಯಾಚಾರ ಮಾಡಿದ್ದಾನೆ ಎನ್ನಲಾದ (ಹಲವರು ಇದಾಗಲೇ ಹೇಳಿದಂತೆ ಮೃತಪಟ್ಟಿರುವ ಯುವತಿಯ ಸ್ನೇಹಿತ) ಪ್ರಮುಖ ಆರೋಪಿಯೂ ಸೇರಿದಂತೆ ನಾಲ್ವರು ಆರೋಪಿಗಳು ಉತ್ತರ ಪ್ರದೇಶ ಪೊಲೀಸರಿಗೆ ಪತ್ರ ಬರೆದಿದ್ದು, ಕೊಲೆ ಮಾಡಿದ್ದು ಯಾರು ಎಂಬ ಬಗ್ಗೆ ಅದರಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ:ಹಾಥರಸ್​ ರೇಪ್​ ಕೇಸ್​: ಸರ್ಕಾರದ ವಿರುದ್ಧ ನುಡಿದರೆ ₹50 ಲಕ್ಷ ಗಿಫ್ಟ್​! ಪತ್ರಕರ್ತೆಯಿಂದಲೂ ಪಿತೂರಿ?
ಅಷ್ಟಕ್ಕೂ ಅವರು ಪತ್ರದಲ್ಲಿ ತೆಗೆದುಕೊಂಡಿರುವ ಹೆಸರು ಎಂದರೆ ಮೃತ ಯುವತಿಯ ಸಹೋದರ ಮತ್ತು ತಾಯಿಯ ಹೆಸರು. ಇವರಿಬ್ಬರೇ ಸೇರಿ ಮಗಳನ್ನು ಹತ್ಯೆ ಮಾಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ. ನಿನ್ನೆಯಷ್ಟೇ ಗ್ರಾಮದ ಮುಖಂಡರು ಕೂಡ ಕುಟುಂಬಸ್ಥರ ಮೇಲೆಯೇ ಸಂದೇಹ ವ್ಯಕ್ತಪಡಿಸಿ ಹೇಳಿಕೆ ನೀಡಿರುವ ಬೆನ್ನಲ್ಲೇ ಇದೀಗ ಆರೋಪಿ ಯುವಕರೂ ಅವರದ್ದೇ ಹೆಸರು ಹೇಳಿರುವ ಕಾರಣ, ಪ್ರಕರಣಕ್ಕೆ ಇನ್ನಷ್ಟು ಟ್ವಿಸ್ಟ್​ ಸಿಕ್ಕಂತಾಗಿದೆ.
ಪ್ರಮುಖ ಆರೋಪಿ ಸಂದೀಪ್​ ಪತ್ರ ಬರೆದಿದ್ದು, ಇದಕ್ಕೆ ಉಳಿದ ಮೂವರು ಆರೋಪಿಗಳೂ (ರಾಮು, ಲವಕುಶ್ ಹಾಗೂ ರವಿ) ಹೆಬ್ಬೆಟ್ಟಿನ ಸಹಿ ಹಾಕಿದ್ದಾರೆ. ಜತೆಗೆ, ಈ ಹತ್ಯೆ ಪ್ರಕರಣದಲ್ಲಿ ತಮ್ಮ ಪಾತ್ರ ಏನೂ ಇಲ್ಲ, ಆದರೂ ಸಹ ನಮ್ಮನ್ನು ವಿನಾ ಕಾರಣ ಈ ಪ್ರಕರಣದಲ್ಲಿ ಸುಳ್ಳು ಆರೋಪದಲ್ಲಿ ಸಿಲುಕಿಸಲಾಗಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಸಂತ್ರಸ್ತೆಯ ಪರಿಚಯ ನನಗೆ ಇತ್ತು. ಆಕೆಯೊಂದಿಗೆ ದೀರ್ಘಕಾಲದಿಂದಲೂ ಸಂಪರ್ಕದಲ್ಲಿದ್ದೆ. ಆದರೆ ಈ ಕೊಲೆ ಅಥವಾ ಅತ್ಯಾಚಾರವನ್ನು ನಾನು ಮಾಡಿಲ್ಲ. ನಾನು ಸಂತ್ರಸ್ತ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಆಕೆಯ ಸಾವಿಗೆ ಆಕೆಯ ಸಹೋದರ ಹಾಗೂ ತಾಯಿಯೇ ಕಾರಣ, ತನ್ನ ವಿರುದ್ಧ ಸುಳ್ಳು ಆರೋಪಗಳನ್ನು ದಾಖಲಿಸಲಾಗಿದೆ ಎಂದು ಆರೋಪಿ ಸಂದೀಪ್ ತಿಳಿಸಿದ್ದಾನೆ.
ಹಾಥರಸ್​ ರೇಪ್​ ಕೇಸ್​ಗೆ ಭಾರಿ ಟ್ವಿಸ್ಟ್​: ಆರೋಪಿಯೊಂದಿಗೆ 104 ಬಾರಿ ಫೋನ್​ಕಾಲ್​ ಮಾಡಿದ್ದ ಯುವತಿ!

ಹಾಥರಸ್​ ಪ್ರಕರಣ: ಗ್ರಾಮದ ಮುಖಂಡನಿಂದ ಸ್ಫೋಟಕ ಮಾಹಿತಿ!

ಹಾಥರಸ್​ ಘಟನೆ ನೆಪದಲ್ಲಿ ಹರಿದುಬಂತು ₹100 ಕೋಟಿ: ಇ.ಡಿಗೆ ದೊರೆತಿದೆ ಭಯಾನಕ ಸಾಕ್ಷ್ಯ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
