ಲಖನೌ:ಹಾಥರಸ್‌ನಲ್ಲಿ ನಡೆದಿದೆ ಎನ್ನಲಾದ 19 ವರ್ಷದ ಯುವತಿಯ ಕುಟುಂಬಸ್ಥರು ಇಂದು ಬಿಗಿ ಭದ್ರತೆಯ ನಡುವೆ ಇಲ್ಲಿನ ಅಲಹಾಬಾದ್‌ ಹೈಕೋರ್ಟ್‌ನ ಲಖನೌ ಪೀಠದ ಎದುರು ಹಾಜರಾಗಲಿದ್ದಾರೆ.
ಭದ್ರತಾ ಸಮಸ್ಯೆಗಳನ್ನು ಉಲ್ಲೇಖಿಸಿ ರಾತ್ರಿಯಲ್ಲಿ ಪ್ರಯಾಣಿಸಲು ನಿರಾಕರಿಸಿದ್ದರಿಂದ ಸಂತ್ರಸ್ತೆಯ ಕುಟುಂಬ ಇಂದು ಬೆಳಗ್ಗೆ ಲಖನೌಗೆ ತೆರಳಿದಿದ್ದಾರೆ. ಸಂತ್ರಸ್ತೆಯ ತಂದೆ, ತಾಯಿ ಮತ್ತು ಮೂವರು ಸಹೋದರರು ಹಾಥರಸ್‌ನಿಂದ ಹೊರಟಿದ್ದು, ಮಧ್ಯಾಹ್ನದ ವೇಳೆಗೆ ಲಖನೌ ತಲುಪಲಿದ್ದಾರೆ.
ಜತೆಯಲ್ಲಿ ಮ್ಯಾಜಿಸ್ಟ್ರೇಟ್ ಅಂಜಲಿ ಗಂಗ್ವಾರ್ ಹಾಗೂ ಸರ್ಕಲ್‌ ಇನ್ಸ್‌ಪೆಕ್ಟರ್ ಇದ್ದಾರೆ ಎಂದು ಪ್ರಕರಣದ ನೋಡಲ್ ಅಧಿಕಾರಿ ಡಿಐಜಿ ಶಲಾಬ್‌ ಮಾಥೂರ್ ತಿಳಿಸಿದ್ದಾರೆ. ಕುಟುಂಬದ ಪ್ರಯಾಣಕ್ಕೆ ವ್ಯವಸ್ಥೆ ಮಾಡುವಂತೆ ನ್ಯಾಯಾಲಯವು ಹತ್ರಾಸ್ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು.
ಇದನ್ನೂ ಓದಿ:ಗ್ವಾಲಿಯರ್​ ರಾಜಮಾತೆ ವಿಜಯರಾಜೇ ಸಿಂಧ್ಯಾ ಸ್ಮರಣಾರ್ಥ 100 ರೂ. ನಾಣ್ಯ ಬಿಡುಗಡೆ…!
ಘಟನೆಯ ಕುರಿತು ತಮ್ಮ ಹೇಳಿಕೆ ನೀಡುವಂತೆ ಅಕ್ಟೋಬರ್ 1ರಂದು ನ್ಯಾಯಾಲಯ ಸಂತ್ರಸ್ತೆಯ ಕುಟುಂಬದವರಿಗೆ ತಿಳಿಸಿತ್ತು. ಜತೆಗೆ, ಸಂತ್ರಸ್ತೆಯ ಕುಟುಂಬದವರು ನ್ಯಾಯಾಲಯದ ಎದುರು ಹಾಜರಾಗಲು ಬೇಕಾದ ಪ್ರಯಾಣದ ವ್ಯವಸ್ಥೆ ಮಾಡಿಕೊಡುವಂತೆ ಹಾಥರಸ್ ಜಿಲ್ಲಾಡಳಿತಕ್ಕೆ ಆದೇಶಿಸಿತ್ತು.
ವಿಚಾರಣೆಯನ್ನು ವೈಯಕ್ತಿಕವಾಗಿ ನಡೆಸುವ ಸಾಧ್ಯತೆಯಿದೆ. ಮಧ್ಯಾಹ್ನ 2 ಗಂಟೆ ನಂತರ ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ರಾಜನ್ ರಾಯ್ ಅವರ ವಿಭಾಗೀಯ ಪೀಠದ ಎದುರು ಪ್ರಕರಣ ವಿಚಾರಣೆಗೆ ಬರಲಿದೆ.
ಕಪ್ಪು ಬಣ್ಣದ ಭೀತಿಯಲ್ಲಿ ಪಾಕ್​ ಗಡಗಡ: 21ನೇ ತಾರೀಖು ಮುಹೂರ್ತ ಫಿಕ್ಸ್​? ವಿನಾಶದಿಂದ ಹೊರಬರಲು ಸರ್ಕಸ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:14 + nineteen =
Remember me
