ನವದೆಹಲಿ:ಇಡೀ ದೇಶವನ್ನು ತಲ್ಲಣಗೊಳಿಸಿರುವ ಉತ್ತರ ಪ್ರದೇಶದ ಹತ್ರಾಸ್​ನಲ್ಲಿ ನಡೆದಿರುವ ಗ್ಯಾಂಗ್​ರೇಪ್​ ಪ್ರಕರಣದ ಕುರಿತಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್​ ಜಾರಿಗೊಳಿಸಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದೂರು ದಾಖಲು ಮಾಡಿಕೊಂಡಿರುವ ಆಯೋಗವು, ಘಟನೆಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ನಡುವೆಯೇ, ತನಿಖೆಗೆ ವಿಶೇಷ ತನಿಖಾ ತಂಡ (ಎಸ್​ಐಟಿ) ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನಿನ್ನೆ ಆದೇಶಿಸಿದ್ದು, ಈ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಈ ಪ್ರಕರಣದ ತನಿಖೆಯನ್ನು ಫಾಸ್ಟ್​ಟ್ರ್ಯಾಕ್​ ಕೋರ್ಟ್​ನಲ್ಲಿ ನಡೆಸುವಂತೆಯೂ ಇದಾಗಲೇ ಮುಖ್ಯಮಂತ್ರಿ ಆದೇಶಿಸಿದ್ದಾರೆ.
ಗ್ಯಾಂಗ್​ರೇಪ್​ ಮಾಡಿದ್ದೂ ಅಲ್ಲದೇ ನಾಲಗೆಯನ್ನೇ ಕಟ್​ ಮಾಡಿ ವಿಕೃತಿ ಮೆರೆದಿರುವ ಪ್ರಕರಣ ಇದಾಗಿದೆ. ಎರಡು ವಾರಗಳ ಹಿಂದೆ 19 ವರ್ಷದ ಯುವತಿಯ ಮೇಲೆ ಆಗಿತ್ತು ಈ ಭಯಾನಕ ಘಟನೆ. ಸುಮಾರು 15 ದಿನ ಜೀವನ್ಮರಣಗಳ ನಡುವೆ ಹೋರಾಟ ಮಾಡಿದ ಸಂತ್ರಸ್ತೆ ಮೊನ್ನೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾಳೆ!ಉತ್ತರ ಪ್ರದೇಶದ ಹಾಥ್ರಸ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿತ್ತು. ನಾಲ್ವರು ಕಾಮುಕರು ಈಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದರು, ಉಸಿರುಕಟ್ಟಿಸುವ ಪ್ರಯತ್ನ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಅಕೆಯ ನಾಲಗೆ ಕೂಡ ಕಟ್​ ಆಗಿತ್ತು!
ಇದನ್ನೂ ಓದಿ:ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಮೊದಲ ಭಾರತೀಯ ಮಹಿಳೆ ನೇಮಕ
ಗಂಭೀರ ಸ್ಥಿತಿಯಲ್ಲಿದ್ದ ಯುವತಿಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಆಸ್ಪತ್ರೆಯಿಂದ ನಿನ್ನೆಯಷ್ಟೇ ಏಮ್ಸ್ ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ.
ಸೆಪ್ಟೆಂಬರ್ 14ರಂದು ಹೊಲಕ್ಕೆ ಹೋಗಿದ್ದ ಈಕೆ ವಾಪಸ್​ ಆಗಿರಲಿಲ್ಲ. ಹುಡುಕಾಟ ನಡೆಸಿದಾಗ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ದುಪ್ಪಟ್ಟಾದಿಂದ ದುಷ್ಕರ್ಮಿಗಳು ತನ್ನನ್ನು ಎಳೆದುಕೊಂಡು ಹೋಗಿದ್ದರು, ಕತ್ತು ಹಿಸುಕಿದ್ದರು ಎಂದು ಯುವತಿ ಹೇಳಿಕೆ ನೀಡಿದ್ದಳು.
ನಂತರ ಈಕೆಯನ್ನು ಜವಾಹರಲಾಲ್ ನೆಹರೂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಎರಡೂ ಕಾಲುಗಳು ನಿಷ್ಕ್ರಿಯಗೊಂಡಿದ್ದವು. ಈಕೆಯ ಕೈಗಳೂ ಸ್ವಲ್ಪಮಟ್ಟಿಗೆ ಸ್ವಾಧೀನ ಕಳೆದುಕೊಂಡಿದ್ದವು. ವೆಂಟಿಲೇಟರ್​ನಲ್ಲಿ ಇಡಲಾಗಿತ್ತು. ಆದರೆ ಪರಿಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿತ್ತು.
ಅತ್ಯಾಚಾರಿಗಳೆಂದು ಗುರುತಿಸಲಾಗಿರುವ ಸಂದೀಪ್, ರಾಮು, ಲವಕುಶ್ ಮತ್ತು ರವಿರನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ.
ಯುವತಿಯ ಸಾವನ್ನು ಖಂಡಿಸಿ ಅನೇಕ ಸಂಘಟನೆಯವರು ಮತ್ತು ಆಕೆಯ ಕುಟುಂಬಸ್ಥರು ಆಸ್ಪತ್ರೆಯ ಎದುರೇ ಪ್ರತಿಭಟನೆ ನಡೆಸಿದ್ದರು. ತೀವ್ರ ಪ್ರತಿಭಟನೆಯ ನಡುವೆಯೂ ಯುವತಿಯ ಶವವನ್ನು ನೀಡದೆ ತಾವೇ ಸಂಸ್ಕಾರ ಮಾಡಿರುವುದಕ್ಕೆ ಯುವತಿಯ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದರು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಉತ್ತರ ಪ್ರದೇಶದ ಪೊಲೀಸ್ ಇಲಾಖೆ, ಯುವತಿಯ ಕುಟುಂಬಸ್ಥರ ಅನುಮತಿ ಪಡೆದು ಆಕೆಯ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಎಂದಿದ್ದಾರೆ.
ರಾಮಮಂದಿರಕ್ಕೆ ಶುಭಕೋರಿದ್ದಕ್ಕೆ ಅತ್ಯಾಚಾರದ ಬೆದರಿಕೆ! ಕ್ರಿಕೆಟಿಗನ ಪತ್ನಿಗೆ ಭದ್ರತೆ ನೀಡಿ ಎಂದ ಹೈಕೋರ್ಟ್​

25 ಶಾಲಾ ಮಕ್ಕಳಿಗೆ ವಿಷಹಾಕಿದ್ದ ಶಿಕ್ಷಕಿ! ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 + 12 =
Remember me
