ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿರುವ ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಬೋಧಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕರ್ನಾಟಕ ಸರ್ಕಾರದ ಸೂಚನೆ ಅನ್ವಯ ರಾಜ್ಯದ ಸ್ವಾಯತ್ತ ಸಂಸ್ಥೆಗಳಲ್ಲಿ ನೀಡಲಾಗುತ್ತಿರುವ ವೇತನ ಮಾದರಿಯಲ್ಲೇ ವೇತನ ನೀಡಲಾಗುವುದು. ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಹುದ್ದೆಗಳಲ್ಲಿ ಸಾಮಾನ್ಯವರ್ಗ, ಪ್ರವರ್ಗ-1, 2ಎ, 2ಬಿ,3ಎ, 3ಬಿ, ಎಸ್ಸಿ, ಎಸ್ಟಿ, ಗ್ರಾಮೀಣ, ಮಹಿಳಾ, ಮಾಜಿ ಸೈನಿಕ, ಕಲ್ಯಾಣ ಕರ್ನಾಟಕ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.
ಹುದ್ದೆ ವಿವರ* ಪ್ರೊಫೆಸರ್​ – 5* ಅಸೋಸಿಯೇಟ್​ ಪ್ರೊಫೆಸರ್​ – 17* ಅಸಿಸ್ಟೆಂಟ್​ ಪ್ರೊಫೆಸರ್​ – 31* ಸೀನಿಯರ್​ ರೆಸಿಡೆಂಟ್ಸ್​ – 12* ಟ್ಯೂಟರ್ಸ್​ – 14
ಯಾವೆಲ್ಲ ವಿಭಾಗಗಳಲ್ಲಿ ನೇಮಕ?: ಅಂಗರಚನಶಾಸ್ತ್ರ (ಅನಾಟಮಿ), ಅರಿವಳಿಕೆ ಶಾಸ್ತ್ರ, ಜೀವರಸಾಯನ ಶಾಸ್ತ್ರ, ಕಮ್ಯುನಿಟಿ ಮೆಡಿಸನ್​, ದಂತವೈದ್ಯಶಾಸ್ತ್ರ, ಚರ್ಮಶಾಸ್ತ್ರ, ರತರೋಗಶಾಸ್ತ್ರ ಮತ್ತು ಕುಷ್ಠ ರೋಗ, ತುರ್ತು ಔಷಧ, ವಿಧಿ-ವಿಜ್ಞಾನ ಔಷಧ, ಸಾಮಾನ್ಯ ಔಷಧ, ಸಾಮಾನ್ಯ ಶಸ್ತ್ರ ಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ, ನೇತ್ರಶಾಸ್ತ್ರ, ಮೂಳೆಚಿಕಿತ್ಸೆ, ಓಟೋ-ರೈನೋ ಲಾರಿಂಗೊಲಜಿ, ರೋಗಶಾಸ್ತ್ರ, ಶಿಶುವೈದ್ಯಶಾಸ್ತ್ರ, ಶರೀರ ಶಾಸ್ತ್ರ, ಮನೋವೈದ್ಯಶಾಸ್ತ್ರ, ರೇಡಿಯೋ- ರೋಗರ್ನಿಣಯ, ಕ್ಷಯ ಮತ್ತು ಎದೆ ರೋಗಗಳ ವಿಭಾಗದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.
ಶೈಕ್ಷಣಿಕ ಅರ್ಹತೆ: ಎಲ್ಲ ಹುದ್ದೆಗೂ ಎಂಬಿಬಿಎಸ್​/ಎಂಡಿ/ ಎಂಸ್​ ಪದವಿ ಕೇಳಲಾಗಿದ್ದು, ಪ್ರೊಫೆಸರ್​ ಹಾಗೂ ಅಸೋಸಿಯೇಟ್​ ಪ್ರೊಫೆಸರ್​ ಹುದ್ದೆಗೆ ವೃತ್ತಿ ಅನುಭವ ಕೇಳಲಾಗಿದೆ.
ವಯೋಮಿತಿ: ಪ್ರೊಫೆಸರ್​ ಹುದ್ದೆಗೆ ಗರಿಷ್ಠ 50 ವರ್ಷ, ಅಸೋಸಿಯೇಟ್​ ಪ್ರೊಫೆಸರ್​ಗೆ ಗರಿಷ್ಠ 45 ವರ್ಷ, ಉಳಿದ ಹುದ್ದೆಗಳಿಗೆ ಗರಿಷ್ಠ 43 ವರ್ಷ ವಯೋಮಿತಿ ನಿಗದಿಯಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.
ಅರ್ಜಿ ಶುಲ್ಕ: ಎಲ್ಲ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 2000ರೂ. ಅನ್ನು ಹಾವೇರಿ ವೈದ್ಯಕಿಯ ವಿಜ್ಞಾನಗಳ ಸಂಸ್ಥೆಯ ವಿಶೇಷ ಅಧಿಕಾರಿ ಹೆಸರಿಗೆ ಅಥವಾ ಎಸ್​ಬಿಐ ಮೂಲಕ ಆನ್​ಲೈನ್​ ಪಾವತಿಯನ್ನು 27.8.2021ರ ಒಳಗಾಗಿ ಮಾಡಬೇಕಿದೆ.
ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅಂಕ, ಪಬ್ಲಿಕೇಷನ್​, ವೃತ್ತಿ ಅನುಭವ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೀಡಿದ ಉಪನ್ಯಾಸಗಳ ಸಂಖ್ಯೆ ಆಧರಿಸಿ ಆಯ್ದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು.
ಅರ್ಜಿ ಸಲ್ಲಿಸಲು ಕೊನೇ ದಿನ: 27.8.2021ಅಧಿಸೂಚನೆಗೆ:https://bit.ly/3meg030ಮಾಹಿತಿಗೆ:http://dme.karnataka.gov.in
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
